Advertisement
2 ಹಂತಗಳಲ್ಲಿ ರಣಜಿಪ್ರತಿಷ್ಠಿತ ರಣಜಿ ಟ್ರೋಫಿಯನ್ನು 2 ವಿಭಾಗಗಳಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದುಲೀಪ್ ಟ್ರೋಫಿಯ ಬಳಿಕ ಮೊದಲ 5 ಪಂದ್ಯಗಳನ್ನು ನಡೆಸಿದರೆ, ಕೊನೆಯ ಪಂದ್ಯಗಳು ಹಾಗೂ ನಾಕ್‌ಔಟ್ ಪಂದ್ಯಗಳನ್ನು ವಿಜಯ್ ಹಜಾರೆ ಟ್ರೋಫಿ ಬಳಿಕ ನಡೆಸಲು ತೀರ್ಮಾನಿಸಲಾಗಿದೆ. ರಣಜಿ ಪಂದ್ಯಗಳ ನಡುವಲ್ಲಿ ವೈಟ್ ಬಾಲ್ ಟೂರ್ನಿಗಳಾದ ಇರಾನಿ, ಸಯ್ಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ ಟ್ರೋಫಿಗಳನ್ನು ನಡೆಸಲು ತೀರ್ಮಾನಿಸಲಾಗಿದೆ. ಆಟಗಾರರಿಗೆ ವಿಶ್ರಾಂತಿ ನೀಡುವ ಸಲುವಾಗಿ ಈ ವಿಧಾನ ಅನುಸರಿಸಲಾಗುತ್ತಿದೆ ಎಂದು ಜಯ್ ಶಾ ಹೇಳಿದ್ದಾರೆ.
ಮುಂಬರುವ ದುಲೀಪ್ ಟ್ರೋಫಿಗೆ 4 ತಂಡಗಳ ಆಟಗಾರರನ್ನು ರಾಷ್ಟ್ರೀಯ ಆಯ್ಕೆಗಾರರು ಆಯ್ಕೆ ಮಾಡಲಿದ್ದಾರೆ. ಈ ಮೊದಲು ವಲಯಾಧಾರಿತವಾಗಿ ಆಟಗಾರರನ್ನು ಆಯ್ಕೆ ಮಾಡಲಾಗುತ್ತಿತ್ತು. ಪಂದ್ಯಗಳ ನಡುವಿನ ಅಂತರ ಹೆಚ್ಚಳ
ರಣಜಿ ಪಂದ್ಯಗಳ ನಡುವೆ ಸದ್ಯಕ್ಕೆ ಮೂರರಿಂದ ನಾಲ್ಕು ದಿನಗಳ ಅಂತರ ನೀಡಲಾಗುತ್ತಿದೆ. ಇದನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಆಟಗಾರರು ಗಾಯಗೊಳ್ಳುವುದನ್ನು ತಪ್ಪಿಸಲು ಮತ್ತು ನಿಗದಿತವಾಗಿ ವಿಶ್ರಾಂತಿ ತೆಗೆದುಕೊಳ್ಳುವು ದಕ್ಕಾಗಿ ಈ ನಿಯಮ ಜಾರಿ ಮಾಡಲಾಗುತ್ತಿದೆ.