Advertisement

ಐಪಿಎಲ್‌ನ ನೂತನ ತಂಡಕ್ಕೆ “ಸ್ಪೆಷಲ್‌ ಪಿಕ್‌’ಆಯ್ಕೆ ನೀಡಿದ ಬಿಸಿಸಿಐ

12:09 AM Jan 09, 2022 | Team Udayavani |

ಹೊಸದಿಲ್ಲಿ: ಐಪಿಎಲ್‌ನ ಹಳೆಯ 8 ತಂಡಗಳಿಗೆ ರೀಟೇನ್‌ ಅವಕಾಶ ನೀಡಿರುವ ಕಾರಣ ಹೊಸ ತಂಡಗಳಾದ ಲಕ್ನೋ ಹಾಗೂ ಅಹ್ಮದಾಬಾದ್‌ ತಂಡಗಳಿಗೆ ಬಿಸಿಸಿಐ “ಸ್ಪೆಷಲ್‌ ಪಿಕ್‌’ ಆಯ್ಕೆ ನೀಡಿದೆ.

Advertisement

8 ಫ್ರಾಂಚೈಸಿಗಳು ಬಿಡುಗಡೆ ಮಾಡಿದ ಮೂವರು ಆಟಗಾರರನ್ನು ನೇರವಾಗಿ ಆಯ್ಕೆ ಮಾಡುವ ಅವಕಾಶ ಈ ಎರಡು ಹೊಸ ತಂಡಗಳಿಗೆ ಲಭಿಸಲಿದೆ. ಅದರಂತೆ ಇದೀಗ ರಿಲೀಸ್‌ ಆಗಿರುವ ಯಾವುದೇ ಆಟಗಾರರನ್ನು ಬೇಕಿದ್ದರೂ ಹೊಸ ಫ್ರಾಂಚೈಸಿಗಳು ನೇರವಾಗಿ ಸಂಪರ್ಕಿಸಬಹುದು. ಆ ಮೂಲಕ ಮೆಗಾ ಹರಾಜಿಗಿಂತ ಮೊದಲೇ ಒಪ್ಪಂದ ಮಾಡಿಕೊಳ್ಳಬಹುದು.

33 ಕೋಟಿ ರೂ. ಮಿತಿ
ಆದರೆ ಇಲ್ಲೂ ಕೂಡ ಕೆಲ ನಿಯಮಗಳು ಅನ್ವಯವಾಗಲಿದೆ. ಈ ಬಾರಿಯ ಮೆಗಾ ಹರಾಜು ಮೊತ್ತವನ್ನು 90 ಕೋಟಿ ಎಂದು ನಿಗದಿಪಡಿಸಲಾಗಿದೆ. ಇದೀಗ ಹೊಸ ಫ್ರಾಂಚೈಸಿಗಳ ವಿಶೇಷ ಆಯ್ಕೆಗೂ ಮೊತ್ತ ನಿಗದಿ ಮಾಡಲಾಗಿದೆ.
ಹೊಸ ಫ್ರಾಂಚೈಸಿಗಳು 33 ಕೋಟಿ ರೂ. ಮೊತ್ತದಲ್ಲಿ ಮೂವರು ಆಟಗಾರರನ್ನು ಆಯ್ಕೆ ಮಾಡಬಹುದು. ಈ ಮೂಲಕ ಇಬ್ಬರು ಭಾರತೀಯ ಆಟಗಾರರು ಪ್ಲಸ್‌ ಒಬ್ಬ ವಿದೇಶಿ ಆಟಗಾರನನ್ನು ಮೆಗಾ ಹರಾಜು ಪಟ್ಟಿಯಿಂದ ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಫ್ರಾಂಚೈಸಿ ಗಳು ಮೊದಲ ಆಟಗಾರನಿಗೆ 15 ಕೋಟಿ, 2ನೇ ಆಟಗಾರನಿಗೆ 11 ಕೋಟಿ ಹಾಗೂ 3ನೇ ಆಟಗಾರನಿಗೆ 7 ಕೋಟಿ ವ್ಯಯಿ ಸಬೇಕಾಗುತ್ತದೆ. ಜನವರಿ 31 ರೊಳಗೆ ಮೂವರು ಆಟಗಾರರನ್ನು ಆಯ್ಕೆ ಮಾಡಬೇಕೆಂದು ಬಿಸಿಸಿಐ ತಿಳಿಸಿದೆ. ಬಳಿಕ “ಸ್ಪೆಷಲ್‌ ಪಿಕ್‌’ ಅವಕಾಶ ಹೊಸ ಫ್ರಾಂಚೈಸಿಗಳಿಗೆ ಇರುವುದಿಲ್ಲ.

ಇದನ್ನೂ ಓದಿ:ಟೆನಿಸ್‌: ಪ್ರಶಸ್ತಿ ಸುತ್ತಿಗೇರಿದ ಬೋಪಣ್ಣ-ರಾಮ್‌ಕುಮಾರ್‌

ಜ. 31ರ ಗಡುವು ವಿಧಿಸಿರುವ ಪರಿಣಾಮ ಹೊಸ ಫ್ರಾಂಚೈಸಿಗಳು ಅಂದೇ ತಾವು ಆಯ್ಕೆ ಮಾಡಿರುವ ಆಟಗಾರರ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ.

Advertisement

ಹೊಸ ಫ್ರಾಂಚೈಸಿಗಳಿಗೆ ಬಂಪರ್‌!
ಈ ವಿಶೇಷ ಆಯ್ಕೆ ಇದೀಗ ಹೊಸ ಫ್ರಾಂಚೈಸಿಗಳಿಗೆ ಬಂಪರ್‌ ಆಗಿ ಪರಿಣಮಿಸಲಿದೆ. ಏಕೆಂದರೆ, ಹರಾಜು ಪಟ್ಟಿಯಲ್ಲಿ ಸ್ಟಾರ್‌ ಆಟಗಾರರೇ ತುಂಬಿದ್ದಾರೆ. ಅವರಲ್ಲಿ ಮೂವರು ಆಟಗಾರರನ್ನು ಒಪ್ಪಿಸಿ ತಂಡಕ್ಕೆ ಸೇರಿಸಿಕೊಳ್ಳ ಬಹುದು. ಇದರಿಂದ ಮೆಗಾ ಹರಾಜು ಪಟ್ಟಿಯಲ್ಲಿ 6 ಪ್ರಮುಖ ಆಟಗಾರರು ಲಕ್ನೋ ಹಾಗೂ ಅಹ್ಮದಾಬಾದ್‌ ತಂಡಗಳ ಪಾಲಾಗುವುದರಲ್ಲಿ ಅನುಮಾನವೇ ಇಲ್ಲ!

-ಹಳೆಯ ಫ್ರಾಂಚೈಸಿಗಳಿಂದ ಬಿಡುಗಡೆಗೊಂಡ ಮೂವರು ಕ್ರಿಕೆಟಿಗರ ನೇರ ಆಯ್ಕೆ
-ಜ. 31 ಅಂತಿಮ ಗಡುವು

Advertisement

Udayavani is now on Telegram. Click here to join our channel and stay updated with the latest news.

Next