Advertisement

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

09:52 AM Oct 22, 2021 | Team Udayavani |

ನವದೆಹಲಿ: ಇಷ್ಟು ವರ್ಷಗಳವರೆಗೆ ಐಪಿಎಲ್‌ ನೇರಪ್ರಸಾರದಿಂದ ಬಿಸಿಸಿಐ ಭಾರೀ ಹಣ ಗಳಿಸಿದೆ ಎಂದು ಎಲ್ಲರೂ ಮಾತಾಡಿಕೊಳ್ಳುತ್ತಿದ್ದರು. ಈಗ ವಿಷಯ ಇನ್ನೂ ದುಬಾರಿಯಾಗಿದೆ. 2018-2022ರವರೆಗೆ ಐಪಿಎಲ್‌ ನೇರಪ್ರಸಾರಕ್ಕೆ ಸ್ಟಾರ್‌ ನ್ಪೋರ್ಟ್ಸ್ ನೀಡಿದ್ದ ಹಣ 16,347 ಕೋಟಿ ರೂ. 2023-2027ರವರೆಗೆ ಬಿಸಿಸಿಐಗೆ ಇದರ ದುಪ್ಪಟ್ಟು ಅಂದರೆ 36,000 ಕೋಟಿ ರೂ. ಬರುವ ಸಾಧ್ಯತೆಗಳಿವೆ. ಇದನ್ನು ಬಿಸಿಸಿಐ ಮೂಲಗಳೇ ಹೇಳಿವೆ.

Advertisement

ಪ್ರತೀ ಬಾರಿ ಬಿಸಿಸಿಐ ಐಪಿಎಲ್‌ ನೇರಪ್ರಸಾರಕ್ಕೆ ಬಿಡ್ಡಿಂಗ್‌ ಕರೆದಾಗಲೂ ದರ ವಿಪರೀತ ಏರುತ್ತಲೇ ಇದೆ. ಕೊರೊನಾ ಆ ಮಟ್ಟದಲ್ಲಿ ಕಾಡಿ ಪ್ರೇಕ್ಷಕರೇ ಮೈದಾನಕ್ಕೆ ಬರದಂತಾಗಿದ್ದರೂ ಐಪಿಎಲ್‌ ಜನಪ್ರಿಯತೆ ಕುಗ್ಗಿಲ್ಲ, ಮಾರುಕಟ್ಟೆ ಮೌಲ್ಯ ಏರುತ್ತಲೇ ಇರುವುದು ಅಚ್ಚರಿ ಮೂಡಿಸಿದೆ.

ಏನಿದು ಏರಿಕೆ, ಯಾಕೆ?: 2008ರಿಂದ 2017ರವರೆಗಿನ ಅವಧಿಯಲ್ಲಿ ಸೋನಿ ನೇರಪ್ರಸಾರದ ಹಕ್ಕನ್ನು ಹೊಂದಿತ್ತು. ಆಗದು 10 ವರ್ಷಗಳ ಅವಧಿಗೆ ನೀಡಿದ ಮೊತ್ತ 8,200 ಕೋಟಿ ರೂ. ಮುಂದೆ ಇದಕ್ಕೆ ದುಪ್ಪಟ್ಟು ಮೊತ್ತವನ್ನು ಸ್ಟಾರ್‌ ನ್ಪೋರ್ಟ್ಸ್ ಕೇವಲ 5 ವರ್ಷಗಳ ಅವಧಿಗೆ ನೀಡಿತು! ಈಗ ಮತ್ತೆ ದುಪ್ಪಟ್ಟಾಗುವ ಸಾಧ್ಯತೆಯಿದೆ. ಇದಕ್ಕೆ ಕಾರಣವೂ ಇದೆ.

ಮುಂದಿನವರ್ಷದಿಂದ ಐಪಿಎಲ್‌ ತಂಡಗಳ ಸಂಖ್ಯೆ 8ರಿಂದ 10ಕ್ಕೇರಲಿದೆ. ಈ ಎರಡು ತಂಡಗಳಿಂದಲೇ ಬಿಸಿಸಿಐಗೆ 7ರಿಂದ 10,000 ಕೋಟಿ ರೂ. ಬರುವ ನಿರೀಕ್ಷೆಯಿದೆ. ತಂಡಗಳ ಸಂಖ್ಯೆ ಹತ್ತಕ್ಕೇರಿದರೆ, ಪಂದ್ಯಗಳ ಸಂಖ್ಯೆ 60ರಿಂದ 74ಕ್ಕೇರಲಿದೆ. ಆಗ ಸಹಜವಾಗಿ ಮೊತ್ತ ದುಪ್ಪಟ್ಟಾಗಲಿದೆ ಎಂದು ಮೂಲಗಳು ಹೇಳುತ್ತವೆ.

ಇದನ್ನೂ ಓದಿ:ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

Advertisement

ಈ ಬಾರಿ ಐಪಿಎಲ್‌ ನೇರಪ್ರಸಾರದ ಹಕ್ಕು ಪಡೆಯಲು ಸ್ಟಾರ್‌ ನ್ಪೋರ್ಟ್ಸ್, ಅಮೆರಿಕದ ಒಂದು ಕಂಪನಿ ಪೈಪೋಟಿ ನಡೆಸಲಿವೆ. ಇವಕ್ಕೆ ಜೀ ಮತ್ತು ಸೋನಿ ಜಂಟಿಯಾಗಿ ಪೈಪೋಟಿ ನೀಡುವ ಸಾಧ್ಯತೆಯಿದೆ. ಹೀಗಿದ್ದಾಗ ಬೆಲೆ ಏರುವುದರಲ್ಲೇನು ಅಚ್ಚರಿ?! ಮುಂದಿನ ವರ್ಷ ಐಪಿಎಲ್‌ ಭಾರತದಲ್ಲೇ ನಡೆಯುವುದು ಖಾತ್ರಿ. ಹಾಗೆಯೇ ಪ್ರತೀ ಪಂದ್ಯಕ್ಕೆ ಪ್ರೇಕ್ಷಕರಿಗೂ ಪ್ರವೇಶವಿರುತ್ತದೆ. ಇದು ದರ ಇನ್ನಷ್ಟು ಏರಿಕೆಗೆ ಕಾರಣವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next