Advertisement
ಹೀಗೆಂದು ಸ್ವತಃ ಬಿಸಿಸಿಐ ಅಧಿಕಾರಿಯೊಬ್ಬರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಮಾಹಿತಿ ನೀಡಿದ್ದಾರೆ. ಇದರ ಅರ್ಥ ಇಷ್ಟೇ. ಚೆನ್ನೈ ಕಿಂಗ್ಸ್ ಐಪಿಎಲ್ ತಂಡದ ನಾಯಕ ಎಂ.ಎಸ್.ಧೋನಿಯನ್ನು ದ.ಆಫ್ರಿಕಾ ಲೀಗ್‌ನಲ್ಲಿ ಚೆನ್ನೈ ಕಿಂಗ್ಸ್ ಮೆಂಟರ್ ಆಗಿಯೂ ಬಳಸಿಕೊಳ್ಳುವಂತಿಲ್ಲ. ಸದ್ಯ ಜೊಹಾನ್ಸ್‌ಬರ್ಗ್ ಟಿ20 ತಂಡವನ್ನು ಚೆನ್ನೈ ಕಿಂಗ್ಸ್ ಖರೀದಿಸಿದೆ, ಅದಕ್ಕೆ ಫಾ ಡು ಪ್ಲೆಸಿಸ್ ನಾಯಕ ಎನ್ನುವುದನ್ನು ಇಲ್ಲಿ ನಾವು ನೆನಪಿಟ್ಟುಕೊಳ್ಳಬೇಕು.
ಎಲ್ಲಿಯವರೆಗೆ ಸಾಧ್ಯ?: ಆದರೆ ಎಲ್ಲಿಯವರೆಗೆ ಬಿಸಿಸಿಐ ತನ್ನ ಆಟಗಾರರನ್ನು ಹೀಗೆ ಹಿಡಿದಿಟ್ಟುಕೊಳ್ಳುತ್ತದೆ ಎನ್ನುವುದು ಇಲ್ಲಿನ ಪ್ರಶ್ನೆ. ಈಗಾಗಲೇ ಐಪಿಎಲ್ ಫ್ರಾಂಚೈಸಿಗಳು, ವಿದೇಶಿ ಲೀಗ್‌ಗಳಿಗೂ ಕಾಲಿಟ್ಟಿವೆ. ಮುಂದೆ ಇದೇ ಫ್ರಾಂಚೈಸಿಗಳು ಬೇರೆ ದೇಶಗಳ ಲೀಗ್‌ಗಳಲ್ಲೂ ಸಕ್ರಿಯವಾಗಬಹುದು. ಆಗ ಸಹಜವಾಗಿ ಫ್ರಾಂಚೈಸಿಗಳಿಂದ, ವಿದೇಶಿ ಕ್ರಿಕೆಟ್ ಸಂಸ್ಥೆಗಳಿಂದ ಭಾರತೀಯ ಕ್ರಿಕೆಟಿಗರನ್ನು ಬಿಟ್ಟುಕೊಡಲು ಒತ್ತಡ ಬರಬಹುದು. ಈಗಾಗಲೇ ವಿದೇಶೀ ಕ್ರಿಕೆಟಿಗರು ಐಪಿಎಲ್‌ಗಳಲ್ಲಿ ಆಡುತ್ತಿರುವುದರಿಂದ, ಅದನ್ನು ಬಳಸಿಕೊಂಡು ವಿದೇಶಿ ಕ್ರಿಕೆಟ್ ಸಂಸ್ಥೆಗಳು ಬಿಸಿಸಿಐ ಮೇಲೆ ಒತ್ತಡ ಹೇರಬಹುದು. ಆಗ ಸಹಜವಾಗಿ ಬಿಸಿಸಿಐ ತನ್ನ ನಿಲುವು ಬದಲಿಸಬೇಕಾಗುತ್ತದೆ.