Advertisement

Ranji ಪಂದ್ಯ ಆಡಲಿಳಿಯುವ ಹೊತ್ತಲ್ಲೇ ಬಂತು ನಿಷೇಧ ಪತ್ರ!

11:53 PM Jan 05, 2024 | Team Udayavani |

ವಡೋದರ: ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ವಿಚಿತ್ರ ಸನ್ನಿವೇಶದೊಂದಿಗೆ ಆರಂಭಗೊಂಡಿದೆ. ಇನ್ನೇನು ತಂಡದಲ್ಲಿ ಕಾಣಿಸಿಕೊಂಡು ಆಡಲಿಳಿಯಬೇಕೆನ್ನುವ ಹೊತ್ತಿನಲ್ಲೇ ಬಿಸಿಸಿಐ ನೀಡಿದ 2 ವರ್ಷಗಳ “ನಿಷೇಧ ಪತ್ರ’ ಆಟಗಾರರೊಬ್ಬರ ಕೈ ಸೇರಿದೆ!

Advertisement

ಈ ಸಂಕಟಕ್ಕೆ ಸಿಲುಕಿದ ಆಟಗಾರ ಒಡಿಶಾದ ಆಲ್‌ರೌಂಡರ್‌ ಸುಮಿತ್‌ ಶರ್ಮ. ಅವರು ಬರೋಡ ವಿರುದ್ಧ ಶುಕ್ರವಾರದ ಮೊದಲ ಪಂದ್ಯದಲ್ಲಿ ಆಡಲು ಅಣಿಯಾಗಿದ್ದರು. ಅಷ್ಟರಲ್ಲಿ ನಿಷೇಧದ ಆಘಾತಕ್ಕೆ ಸಿಲುಕಿದರು. ಕಾರಣ, ಜನನ ಪ್ರಮಾಣಪತ್ರ ಗೊಂದಲ!

ಸುಮಿತ್‌ ಶರ್ಮ ಜೂನಿಯರ್‌ ಕ್ರಿಕೆಟಿಗೆ ಅಡಿಯಿರಿಸುವ ವೇಳೆ 2015-16ರಲ್ಲಿ ನೀಡಿದ ಜನನ ಪ್ರಮಾಣಪತ್ರಕ್ಕೂ ಈಗಿನ ಜನನ ಪ್ರಮಾಣಪತ್ರಕ್ಕೂ ತಾಳೆಯಾಗದ ಕಾರಣ ಬಿಸಿಸಿಐ ಈ ಕ್ರಮ ತೆಗೆದುಕೊಂಡಿದೆ ಎಂಬುದಾಗಿ ಒಡಿಶಾ ಕ್ರಿಕೆಟ್‌ ಮಂಡಳಿಯ ಕಾರ್ಯದರ್ಶಿ ಸಂಜಯ್‌ ಬೆಹೆರಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next