Advertisement

BCCI; ದೇಶೀಯ ಕ್ರಿಕೆಟಿಗನನ್ನು ಎರಡು ವರ್ಷಗಳ ಕಾಲ ನಿಷೇಧ ಮಾಡಿದ ಬಿಸಿಸಿಐ

10:43 AM Oct 29, 2023 | Team Udayavani |

ಮುಂಬೈ: ದೇಶೀಯ ಕ್ರಿಕೆಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪರ ಆಡುತ್ತಿರುವ ಭಾರತೀಯ ಕ್ರಿಕೆಟಿಗ ವಂಶಜ್ ಶರ್ಮಾ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಎರಡು ವರ್ಷಗಳ ಕಾಲ ನಿಷೇಧ ಮಾಡಿದೆ.

Advertisement

ಬಹು ಜನ್ಮ ದಿನಾಂಕದ ಪ್ರಮಾಣಪತ್ರಗಳನ್ನು ಇಟ್ಟುಕೊಂಡಿರುವ ಆರೋಪದ ಮೇಲೆ ವಂಶದ್ ಶರ್ಮಾ ಅವರಿಗೆನಿಷೇಧ ಹೇರಲಾಗಿದೆ. ಈ ಕಾರಣಕ್ಕಾಗಿ ಶರ್ಮಾ ಎರಡು ವರ್ಷಗಳ ನಿಷೇಧ ಎದುರಿಸುತ್ತಾನೆ.

ವಂಶಜ್ ಶರ್ಮಾ, ಆಟಗಾರ ಐಡಿ 17026 ಅವರು ಬಿಸಿಸಿಐ ಗೆ ಬಹು ಜನನ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ. ಆದ್ದರಿಂದ ಅಕ್ಟೋಬರ್ 27 ರಿಂದ ಎರಡು ವರ್ಷಗಳ ಅವಧಿಗೆ ಎಲ್ಲಾ ಬಿಸಿಸಿಐ ಪಂದ್ಯಾವಳಿಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ನಿಷೇಧವು ಎರಡು ವರ್ಷಗಳವರೆಗೆ ಇರುತ್ತದೆ ಮತ್ತು ಅದು ಮುಗಿದ ನಂತರವೂ, ಈ ಕ್ರಿಕೆಟಿಗ ಬಿಸಿಸಿಐ ಬ್ಯಾನರ್ ಅಡಿಯಲ್ಲಿ ನಡೆಯುವ ಎಲ್ಲಾ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಜೆಕೆಸಿಎ ಯ ನಿರ್ವಾಹಕ ಅನಿಲ್ ಗುಪ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next