Advertisement

ಕ್ರಿಕೆಟಿಗ ರಿಂಕುಗೆ 3 ತಿಂಗಳು ನಿಷೇಧ ಹೇರಿದ ಬಿಸಿಸಿಐ

12:28 AM May 31, 2019 | Sriram |

ನವದೆಹಲಿ: ನಿರಾಕ್ಷೇಪಣಾ ಪತ್ರವನ್ನು ಪಡೆಯದೇ ಅಬುಧಾಬಿ ಕ್ರಿಕೆಟ್ ಟಿ20 ಕೂಟವೊಂದರಲ್ಲಿ ಪಾಲ್ಗೊಂಡ ಉತ್ತರ ಪ್ರದೇಶದ ಕ್ರಿಕೆಟಿಗ ರಿಂಕು ಸಿಂಗ್‌ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 3 ತಿಂಗಳು ನಿಷೇಧ ಹೇರಿದೆ.

Advertisement

ರಿಂಕು ಸಿಂಗ್‌ ಇತ್ತೀಚೆಗೆ ಮುಕ್ತಾಯಗೊಂಡಿದ್ದ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಟಿ20 ಕ್ರಿಕೆಟ್ ಕೂಟದಲ್ಲಿ ಕೋಲ್ಕತ ನೈಟ್ ರೈಡರ್ ತಂಡವನ್ನು ಪ್ರತಿನಿಧಿಸಿದ್ದರು. ರಿಂಕು ನಿರಾಕ್ಷೇಪಣಾ ಪತ್ರ ಹೊಂದಿಲ್ಲದೆ ದುಬೈ ಕೂಟದಲ್ಲಿ ಪಾಲ್ಗೊಂಡಿದ್ದು ನಿಯಮ ಉಲ್ಲಂಘನೆ.

ಹೀಗಾಗಿ ತಕ್ಷಣಕ್ಕೆ ಅನ್ವಯವಾಗುವಂತೆ ನಿಷೇಧ ಮಾಡಲಾಗುತ್ತಿದೆ’ ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ. ಜೂ.1ರಿಂದ ರಿಂಕುಗೆ ಶಿಕ್ಷೆ ಆರಂಭವಾಗಲಿದೆ. ಸದ್ಯ ಶ್ರೀಲಂಕಾ ‘ಎ’ ತಂಡದ ವಿರುದ್ಧ ಸರಣಿಯಲ್ಲಿ ಭಾರತ ‘ಎ’ ತಂಡವನ್ನು ಪ್ರತಿನಿಧಿಸುತ್ತಿರುವ ರಿಂಕು ಸಿಂಗ್‌ ಮುಂದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ.

21 ವರ್ಷದ ರಿಂಕು ಸಿಂಗ್‌ ದುಬೈ ಟಿ20ನಲ್ಲಿ ಡೆಕ್ಕನ್‌ ಗ್ಲಾಡಿಯೆಟರ್ ತಂಡವನ್ನು ಪ್ರತಿನಿಧಿಸಿದ್ದರು. 104 ರನ್‌ ಜತೆಗೆ 2 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದರು. ದೇಶಿ ಕ್ರಿಕೆಟ್ ಕೂಟದಲ್ಲಿ ರಿಂಕು 19 ಪಂದ್ಯವನ್ನು ಆಡಿ 71.52 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದಾರೆ. 24 ಲಿಸ್ಟ್‌ ‘ಎ’ ಕ್ರಿಕೆಟ್ ಕೂಟದಲ್ಲಿ ಪಾಲ್ಗೊಂಡಿರುವ ಅವರು 43.05 ಸರಾಸರಿಯಲ್ಲಿ ಬ್ಯಾಟಿಂಗ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next