Advertisement

3 ವರ್ಷಗಳ ಕಡ್ಡಾಯ ವಿಶ್ರಾಂತಿ ಬದಲಿಸಲು ಸುಪ್ರೀಂಗೆ ಬಿಸಿಸಿಐ ಮನವಿ?

03:45 AM Jul 03, 2017 | Team Udayavani |

ನವದೆಹಲಿ: ಬಿಸಿಸಿಐ ಆಡಳಿತಾತ್ಮಕ ಸುಧಾರಣೆ ಕುರಿತಂತೆ ತಾನು ನೀಡಿರುವ ಆದೇಶ ಎಷ್ಟರ ಮಟ್ಟಿಗೆ ಜಾರಿಯಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯ ಜು.14ರಂದು ವಿಚಾರಣೆ ನಡೆಸಲಿದೆ. ಆದರೆ ಇದೇ ವೇಳೆ 3 ವರ್ಷಗಳ ಕಡ್ಡಾಯ ವಿಶ್ರಾಂತಿ ಸೇರಿದಂತೆ ಕೆಲವೊಂದು ಕ್ರಮಗಳನ್ನು ಬದಲಿಸಬೇಕೆಂದು ಬಿಸಿಸಿಐ ಮನವಿ ಮಾಡಲಿದೆ. ಅದರಲ್ಲೂ ಕಡ್ಡಾಯ ವಿಶ್ರಾಂತಿಗೆ ಪರ್ಯಾಯವಾಗಿ ಒಂದಷ್ಟು ಬೇರೆ ದಾರಿಗಳನ್ನು ಸೂಚಿಸುವ ಇರಾದೆಯನ್ನು ಬಿಸಿಸಿಐ ಹೊಂದಿದೆ. 

Advertisement

ನ್ಯಾಯಾಲಯದಿಂದ ನೇಮಕಗೊಂಡಿರುವ ಆಡಳಿತಾಧಿಕಾರಿಗಳೂ ಈ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆಂದು ಕೆಲವು ತಿಂಗಳ ಹಿಂದೆ ಹೇಳಲಾಗಿತ್ತು. ಪ್ರತಿ 3 ವರ್ಷದ ಅವಧಿಯ ನಂತರ 3 ವರ್ಷಗಳ ಕಡ್ಡಾಯ ವಿಶ್ರಾಂತಿಯನ್ನು ರದ್ದು ಮಾಡಬೇಕು. ಬದಲಿಗೆ 4 ವರ್ಷಗಳ ಎರಡು ಅವಧಿಯಲ್ಲಿ ಸತತವಾಗಿ ಮುಂದುವರಿಯಲು ಅವಕಾಶ ನೀಡಬೇಕು. ನಂತರ 4 ವರ್ಷ ವಿಶ್ರಾಂತಿಗೆ ಅವಕಾಶ ನೀಡಬೇಕು ಎಂದು ಬಿಸಿಸಿಐನಲ್ಲಿ ಕೆಲವರು ಸಲಹೆ ನೀಡಿದ್ದಾರೆನ್ನಲಾಗಿದೆ. ಅಥವಾ ಸತತ 9 ವರ್ಷ ಹುದ್ದೆ ಹೊಂದಿದ್ದು ನಂತರ ಪೂರ್ಣವಾಗಿ ಬಿಸಿಸಿಐನಿಂದ ಹೊರ ಹೋಗಲು ಆದೇಶಿಸಬೇಕೆಂಬ ಸಲಹೆಯೂ ಇದೆ.

Advertisement

Udayavani is now on Telegram. Click here to join our channel and stay updated with the latest news.

Next