Advertisement

ಟೀಮ್‌ ಇಂಡಿಯಾಕ್ಕೆ ಇನ್ನು “ಎಂಪಿಎಲ್‌ ಕಿಟ್‌’

09:52 PM Nov 17, 2020 | mahesh |

ನವದೆಹಲಿ: ಬಿಸಿಸಿಐ ತನ್ನ ನೂತನ ಕಿಟ್‌ ಪ್ರಾಯೊಜಕರನ್ನು ಅಧಿಕೃತವಾಗಿ ಘೋಷಿಸಿದೆ. ನೈಕ್‌ ಬಳಿಕ ಈ ಪ್ರಾಯೋಜಕತ್ವ ಎಂಪಿಎಲ್‌ ನ್ಪೋರ್ಟ್ಸ್ ಪಾಲಾಗಿದೆ. ಮೂರು ವರ್ಷಗಳ ಈ ಒಡಂಬಡಿಕೆಯನ್ನು ಬಿಸಿಸಿಐ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. ನವಂಬರ್‌ 2020ರಿಂದ 2023ರ ಡಿಸೆಂಬರ್‌ ವರೆಗೆ ಈ ಒಪ್ಪಂದ ಜಾರಿಯಲ್ಲಿರುತ್ತದೆ.

Advertisement

ನೂತನವಾಗಿ ವಿನ್ಯಾಸಗೊಳಿಸುವ ಈ ಜೆರ್ಸಿಯನ್ನು ಮುಂದಿನ ಮೂರು ವರ್ಷಗಳ ಕಾಲ ಟೀಮ್‌ ಇಂಡಿಯಾದ ಪುರುಷರ ತಂಡದ ಜತೆಗೆ ಮಹಿಳಾ ತಂಡ ಹಾಗೂ ಅಂಡರ್‌-19 ತಂಡಗಳ ಆಟಗಾರರೂ ಧರಿಸಲಿದ್ದಾರೆ.

ಹಿಂದೆ ಸರಿದ ನೈಕ್‌
ನೈಕ್‌ ಕಂಪೆನಿಯೊಂದಿಗಿನ ಟೀಮ್‌ ಇಂಡಿಯಾದ ಕಿಟ್‌ ಪ್ರಾಯೋಜಕತ್ವದ ಒಪ್ಪಂದ ಇತ್ತೀಚೆಗೆ ಕೊನೆಗೊಂಡಿತ್ತು. ಈ ಒಪ್ಪಂದವನ್ನು ಮುಂದುವರಿಸಲು ನೈಕ್‌ ಬಯಸಿರಲಿಲ್ಲ. ಕೊರೊನಾ ವೈರಸ್‌ ಕಾರಣದಿಂದಾಗಿ ನಷ್ಟವನ್ನು ತುಂಬಲು ನೈಕ್‌ ಈ ನಿರ್ಧಾರ ತೆಗೆದುಕೊಂಡಿತ್ತು. ಹೀಗಾಗಿ ಹೊಸ ಒಪ್ಪಂದಕ್ಕೆ ಬಿಸಿಸಿಐ ಅಹ್ವಾನ ನೀಡಿತ್ತು. ಇದೀಗ ಎಂಪಿಎಲ್‌ ಪಾಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next