Advertisement

ಬಿ.ಸಿ.ರೋಡ್‌-ಜಕ್ರಿಬೆಟ್ಟು ಹೆದ್ದಾರಿ; ಬೀದಿದೀಪ ಅಳವಡಿಕೆಗೆ ಕಾಂಕ್ರೀಟ್‌ ಬೆಡ್‌

11:33 AM Sep 22, 2022 | Team Udayavani |

ಬಂಟ್ವಾಳ: ಬಿ.ಸಿ.ರೋಡ್‌-ಜಕ್ರಿಬೆಟ್ಟು ಚತುಷ್ಪಥ ಕಾಂಕ್ರೀಟ್‌ ಹೆದ್ದಾರಿಯ ಬಹುತೇಕ ಭಾಗಕ್ಕೆ ಬೀದಿ ದೀಪಗಳನ್ನು ಅಳವಡಿಸಿ ಉರಿಯುತ್ತಿದೆ. ಬಾಕಿ ಉಳಿದ ಭಾಗಕ್ಕೆ ಬೀದಿ ದೀಪ ಅಳವಡಿಸುವಂತೆ ಒತ್ತಾಯಗಳು ಕೇಳಿ ಬಂದಿದ್ದವು. ಇದೀಗ ಉಳಿದ ಕಡೆಗಳಲ್ಲೂ ಬೀದಿ ದೀಪ ಅಳವಡಿಕೆಗೆ ಕಾಂಕ್ರೀಟ್‌ ಬೆಡ್‌ ಆಳವಡಿಸುವ ಕಾಮಗಾರಿ ಪೂರ್ಣಗೊಂಡಿದೆ.

Advertisement

ಹೆದ್ದಾರಿಯು ಅಧಿಕೃತವಾಗಿ ಉದ್ಘಾಟನೆಗೊಂಡು 5 ತಿಂಗಳು ಕಳೆದರೂ ಬೀದಿ ದೀಪಗಳು ಉರಿಯದೇ ಇರುವ ಈ ಕುರಿತು “ಉದಯವಾಣಿ ಸುದಿನ’ದಲ್ಲಿ ಜು. 30ರಂದು “ಬಿ.ಸಿ.ರೋಡ್‌- ಜಕ್ರಿಬೆಟ್ಟು ಚತುಷ್ಪಥ ಹೆದ್ದಾರಿ-ಉದ್ಘಾಟನೆಯಾಗಿ 5 ತಿಂಗಳು ಕಳೆದರೂ ಉರಿಯದ ಬೀದಿ ದೀಪ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿಯನ್ನು ಪ್ರಕಟಿಸಿ ಸಂಬಂಧಪಟ್ಟ ಇಲಾಖೆಯನ್ನು ಎಚ್ಚರಿಸುವ ಪ್ರಯತ್ನವನ್ನೂ ಮಾಡಲಾಗಿತ್ತು. ಅದಕ್ಕೆ ಸ್ಪಂದನೆ ಎಂಬಂತೆ ಬೀದಿದೀಪಗಳು ಉರಿಯಲಾರಂಭಿಸಿದ್ದವು.

ಅದೇ ವರದಿಯಲ್ಲಿ ಉಳಿದ ಭಾಗಕ್ಕೂ ಬೀದಿ ದೀಪಗಳನ್ನು ಅಳವಡಿಸುವಂತೆ ಒತ್ತಾಯವನ್ನೂ ಮಾಡಲಾಗಿತ್ತು. ಇದೀಗ ಕಾಂಕ್ರೀಟ್‌ ಬೆಡ್‌ ಅಳವಡಿಕೆ ಪೂರ್ಣಗೊಂಡಿದ್ದು, ಮುಂದೆ ಬೀದಿದೀಪವೂ ಒಳಗೊಂಡಂತೆ ಅದರ ಕಂಬ ಅಳವಡಿಕೆಯ ಕಾಮಗಾರಿ ನಡೆಯಬೇಕಿದೆ. ಸುಮಾರು 3.85 ಕಿ.ಮೀ.ಉದ್ದದ ಹೆದ್ದಾರಿ ಮಧ್ಯೆ ಈ ಹಿಂದೆಯೇ ಸುಮಾರು 80ರಷ್ಟು ಬೀದಿದೀಪಗಳನ್ನು ಅಳವಡಿಸಿ ಅದೆಲ್ಲವೂ ಈಗಾಗಲೇ ಉರಿಯುತ್ತಿದೆ. ಆದರೆ ಬಂಟ್ವಾಳ ಬೈಪಾಸ್‌ ಜಂಕ್ಷನ್‌, ಭಂಡಾರಿಬೆಟ್ಟು, ಕಾಮಾಜೆ ಕ್ರಾಸ್‌, ಜಕ್ರಿಬೆಟ್ಟು ಬಳಿ ಬೀದಿದೀಪಗಳ ಅಳವಡಿಕೆಗೆ ಬಾಕಿ ಇತ್ತು.

ಹೆದ್ದಾರಿಯ ಕಾಮಗಾರಿ ನಿರ್ವಹಿಸಿದ ರಾಷ್ಟ್ರೀಯ ಹೆದ್ದಾರಿ ಇಲಾಖೆಯೇ ಬೀದಿದೀಪಗಳನ್ನು ಅಳವಡಿಸಿದ್ದರೂ, ಅದರ ನಿರ್ವಹಣೆಗೆ ಇಲಾಖೆಯಲ್ಲಿ ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಉದ್ಘಾಟನೆಗೊಂಡು 5 ತಿಂಗಳು ಕಳೆದರೂ ಉರಿದಿರಲಿಲ್ಲ. ಇದೀಗ ಅದರ ನಿರ್ವಹಣೆಯ ಜವಾಬ್ದಾರಿಯನ್ನು ಬಂಟ್ವಾಳ ಪುರಸಭೆ ವಹಿಸಿಕೊಂಡಿದ್ದು, ಬೀದಿದೀಪ ಉರಿಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next