Advertisement

ಮಾಜಿ ಕಾರ್ಪೋರೇಟರ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ

03:32 PM Jul 07, 2022 | Team Udayavani |

ಬೆಂಗಳೂರು: ಮಾಜಿ ಕಾರ್ಪೋರೇಟರ್ ಬಳಿಯೇ ಲಂಚ ಪಡೆಯುತ್ತಿದ್ದ ಬಿಬಿಎಂಪಿ ಯ ಬಿಎಂಟಿಎಫ್ ಅಧಿಕಾರಿ ಮೇಲೆ ಎಸಿಬಿ ದಾಳಿ ಮಾಡಿದೆ.

Advertisement

ಮಾಜಿ ಕಾರ್ಪೋರೇಟರ್ ಬಳಿಯೇ ಲಂಚ ಪಡೆಯಲು ಮುಂದಾಗಿದ್ದ ಬಿಎಂಟಿ ಎಫ್ ಅಧಿಕಾರಿ ಬೇಬಿ ಓಲೇಕಾರ್ ರನ್ನು ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ.

ಇದನ್ನೂ ಓದಿ:ಕಾರಿಗೆ ಸರ್ಕಾರಿ ಬಸ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಮಾಜಿ ಕಾರ್ಪೋರೇಟರ್ ಲಕ್ಷ್ಮೀ ನಾರಾಯಣ್ ಬಳಿ ಹೊರಮಾವು ಅಗರ ಸರ್ವೆ ನಂಬರ್ 153 ರ ವ್ಯಾಜ್ಯಕ್ಕೆ ಸಬ್ ಇನ್ಸ್ ಪೆಕ್ಟ್ರ್ ಬೇಬಿ ಓಲೇಕಾರ್ ಮೂರು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಲಕ್ಷ್ಮೀ ನಾರಾಯಣ್ ದೂರು ನೀಡಿದ್ದರು. ಇಂದು ಒಂದು ಲಕ್ಷ ಹಣ ಪಡೆಯುತ್ತಿರುವಾಗ ಎಸಿಬಿ ದಾಳಿ ಮಾಡಿದ್ದು, ಬೇಬಿ ಓಲೇಕಾರ್ ಸಿಕ್ಕಿ ಬಿದ್ದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next