Advertisement

BBMP: ಅಧಿಕ ತೆರಿಗೆ ಇದ್ದರೆ ಶೇ.50 ಪಾವತಿ ಕಡ್ಡಾಯ 

10:56 AM Feb 06, 2024 | Team Udayavani |

ಬೆಂಗಳೂರು:  ಆದಾಯದ ಕೈಚೀಲ ತುಂಬುವ ನಿಟ್ಟಿನಲ್ಲಿ ತೆರಿಗೆ ಸಂಗ್ರಹಕ್ಕೆ  ಮುಂದಾಗಿರುವ ಪಾಲಿಕೆ ಇದೀಗ ದೊಡ್ಡ ಮೊತ್ತದ ಆಸ್ತಿ ತೆರಿಗೆ ಉಳಿಸಿಕೊಂಡು ತೆರಿಗೆ ಕಟ್ಟದೆ ಕಳ್ಳಾಟ ಆಡುತ್ತಿರುವ ಆಸ್ತಿ ಮಾಲೀಕರಿಗೆ ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ನಿರತವಾಗಿದೆ.

Advertisement

ಶೇ.30ರಷ್ಟು ಮಾಲೀಕರು ಬಿಬಿಎಂಪಿಗೆ ಸಕಾಲದಲ್ಲಿ ಆಸ್ತಿ ತೆರಿಗೆ ಸಂದಾಯ ಮಾಡದೇ ಸರ್ಕಾರ ತೆರಿಗೆ ಸಡಿಲಿಕೆ ಮಾಡುವುದನ್ನು ಕಾಯುತ್ತಿದ್ದಾರೆ. ಕಳ್ಳಾಟ ನಡೆಸುತ್ತಿರುವ ಆಸ್ತಿ ಮಾಲೀಕರಿಗೆ ಪಾಲಿಕೆ ಈಗಾಗಲೇ ಡಿಮ್ಯಾಂಡ್‌ ನೋಟಿಸ್‌ ನೀಡಿದ್ದು  10 ರಿಂದ 20 ಲಕ್ಷ ರೂ.ವರೆಗೆ ತೆರಿಗೆ ಉಳಿಸಿಕೊಂಡವರು ಆಸ್ತಿ ತೆರಿಗೆ ಕಟ್ಟಲೇಬೇಕೆಂಬ ಖಡಕ್‌ ಸೂಚನೆ ನೀಡಿದೆ.

ಸಣ್ಣಪುಟ್ಟ, ಅಂಗಡಿಗಳನ್ನು ಬಿಟ್ಟು, ದೊಡ್ಡ ಮೊತ್ತದ ತೆರಿಗೆ ಬಾಕಿಯಿರಿಸಿಕೊಂಡಿರುವ ಆಸ್ತಿ ಮಾಲೀಕರು ಶೇ.50ರಷ್ಟು ಆಸ್ತಿ ತೆರಿಗೆ ಪಾವತಿಸಲೇಬೇಕು ಎಂಬ ಕಟ್ಟಪ್ಪಣೆ ನೀಡಿದೆ. ದೊಡ್ಡ ಮೊತ್ತದ ತೆರಿಗೆ ಉಳಿಸಿಕೊಂಡಿರುವ ಹಲವರು ಸರ್ಕಾರ ರಿಯಾಯ್ತಿಗಾಗಿ ಕಾಯುತ್ತಿದ್ದಾರೆ. ಆದರೆ ಅವರು ಶೇ.50ರಷ್ಟು ತೆರಿಗೆ ಹಣ ಪಾಲಿಕೆಗೆ ಸಂದಾಯ ಮಾಡಿ ನಂತರ ಸರ್ಕಾರಕ್ಕೆ ಆಪೀಲ್‌ ಹೋಗಲಿ. ಒಂದು ವೇಳೆ ಸರ್ಕಾರ ತೆರಿಗೆ ಸಡಿಲಿಕೆ ಮಾಡಿದರೆ ಅವರು ಕೊಟ್ಟಿರುವ ಹಣ ವಾಪಸ್‌ ನೀಡಲಾಗುವುದು  ಎಂದು ಪಾಲಿಕೆ ಮುಖ್ಯ ಆಯುಕ್ತ ತುಷಾರ್‌ ಗಿರಿ ನಾಥ್‌  ಸುದ್ದಿಗೋಷ್ಠಿಯಲ್ಲಿ  ಮಾಹಿತಿ ನೀಡಿದರು.

ಶೀಘ್ರ ಬ್ರ್ಯಾಂಡ್‌ ಬೆಂಗಳೂರು ಕುರಿತ ವರದಿ: ಬ್ರ್ಯಾಂಡ್‌ ಬೆಂಗಳೂರು ಕುರಿತ ವರದಿ ಸಿದ್ಧವಾಗಿದ್ದು ಶೀಘ್ರದಲ್ಲೇ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಈ ವರದಿ ಸಲ್ಲಿಸಲಾಗುವುದು. ಬ್ರ್ಯಾಂಡ್‌ ಬೆಂಗಳೂರಿಗೆ ಸಂಬಂಧಿಸಿದಂತೆ ಹಲವು ಸಲಹೆಗಳು ವಿವಿಧ ವಲಯಗಳಿಂದ ಬಂದಿದ್ದು ಈ ಸಲಹೆಗಳಿಗೆ ತಕ್ಕಂತೆ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಏರೊ³àರ್ಟ್‌ನಲ್ಲಿ 2 ಇಂದಿರಾ ಕ್ಯಾಂಟೀನ್‌:  ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ 2 ಇಂದಿರಾ ಕ್ಯಾಂಟೀನ್‌ ತೆರೆಯುವ ನಿಟ್ಟಿನಲ್ಲಿ ಕಾರ್ಯ ಸಾಗಿದೆ. ಈ ಬಗ್ಗೆ ಟೆಂಡರ್‌ ಪ್ರಕ್ರಿಯೆ ಕೂಡ ನಡೆದಿದೆ. ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್‌ ತಲೆ ಎತ್ತಲಿದೆ. ಕ್ಯಾಂಟೀನ್‌ ನಿರ್ವಹಣೆ ಸಂಬಂಧಿ ಸಿ ದಂತೆ ಸರ್ಕಾರ ನೀಡುವ ಸೂಚನೆಯಂತೆ ಕಾರ್ಯ ನಿರ್ವಹಿಸಲಾಗುವುದು ಎಂದರು.

Advertisement

ಬಿಬಿಎಂಪಿಗೆ ಸೇರಿರುವ 110 ಹಳ್ಳಿಗಳಲ್ಲಿ ಕುಡಿಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ 50 ಕೋಟಿ ರೂ.ಅನ್ನು ನಿರ್ವಹಣೆಗಾಗಿ  ಮೀಸರಿಸಲಾಗಿದೆ. ಬೋರ್‌ವೆಲ್‌ ದುರಸ್ತಿ ಸೇರಿದಂತೆ ಹೊಸ ಬೋರ್‌ ವೆಲ್‌ಗ‌ಳನ್ನು ಕೊರೆಸುವ ಕೆಲಸ ನಡೆಯಲಿದೆ. ರಾಜ್ಯಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ತೊಂದರೆ ಆಗದ ರೀತಿಯಲ್ಲಿ ಜಲಮಂಡಳಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.

60 ದಿನದಲ್ಲಿ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಗುರಿ:

ಬಿಬಿಎಂಪಿ ಜನವರಿ 31ರ ವರೆಗೆ 3,500 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ . ಇನ್ನೂ 4,500 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ಮುಟ್ಟಬೇಕಾಗಿದೆ. ಮುಂದಿನ 60 ದಿನಗಳಲ್ಲಿ 1 ಸಾವಿರ ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ  ಪಾಲಿಕೆ ಎಲ್ಲ ವಲಯಗಳ ಕಂದಾಯ ಅಧಿಕಾರಿಗಳಿಗೆ ಟಾರ್ಗೆಟ್‌ ನೀಡಲಾಗಿದ್ದು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ ಮುಖ್ಯಆಯುಕ್ತರು ತಿಳಿಸಿದರು.

ಬಿಬಿಎಂಪಿಯಿಂದ ಬೀಗ ಮುದ್ರೆ ಕಾರ್ಯಾಚರಣೆ : ಈಗಾಗಲೇ ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಪಾಲಿಕೆಯ ಅಧಿಕಾರಿಗಳು ಬೀಗ ಮುದ್ರೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಣ್ಣಪುಟ್ಟ ಅಂಗಡಿ ಮಾಲೀಕರನ್ನು ಬಿಟ್ಟು ಲಕ್ಷಾಂತರ ರೂ.ತೆರಿಗೆ ಉಳಿಸಿಕೊಂಡಿರುವ ಆಸ್ತಿಮಾಲೀಕರಿಗೆ ಡಿಮ್ಯಾಂಡ್‌ ನೋಟಿಸ್‌ ನೀಡಲಾಗಿದೆ. ಅದರಂತೆ ಕಾರ್ಯ ನಡೆಯುತ್ತಿದೆ. ಶೇ.50ರಷ್ಟು ತೆರಿಗೆ ಪಾವತಿಸಲೇಬೇಕು ಎಂದು ಈ ಮೂಲಕ ಮತ್ತೆ ಆಸ್ತಿ ತೆರಿಗೆ ಮಾಲೀಕರಲ್ಲಿ ಮನವಿ ಮಾಡುವುದಾಗಿ ತುಷಾರ್‌ ಗಿರಿನಾಥ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next