Advertisement
ಶೇ.30ರಷ್ಟು ಮಾಲೀಕರು ಬಿಬಿಎಂಪಿಗೆ ಸಕಾಲದಲ್ಲಿ ಆಸ್ತಿ ತೆರಿಗೆ ಸಂದಾಯ ಮಾಡದೇ ಸರ್ಕಾರ ತೆರಿಗೆ ಸಡಿಲಿಕೆ ಮಾಡುವುದನ್ನು ಕಾಯುತ್ತಿದ್ದಾರೆ. ಕಳ್ಳಾಟ ನಡೆಸುತ್ತಿರುವ ಆಸ್ತಿ ಮಾಲೀಕರಿಗೆ ಪಾಲಿಕೆ ಈಗಾಗಲೇ ಡಿಮ್ಯಾಂಡ್ ನೋಟಿಸ್ ನೀಡಿದ್ದು 10 ರಿಂದ 20 ಲಕ್ಷ ರೂ.ವರೆಗೆ ತೆರಿಗೆ ಉಳಿಸಿಕೊಂಡವರು ಆಸ್ತಿ ತೆರಿಗೆ ಕಟ್ಟಲೇಬೇಕೆಂಬ ಖಡಕ್ ಸೂಚನೆ ನೀಡಿದೆ.
Related Articles
Advertisement
ಬಿಬಿಎಂಪಿಗೆ ಸೇರಿರುವ 110 ಹಳ್ಳಿಗಳಲ್ಲಿ ಕುಡಿಯುವ ನೀರು ಒದಗಿಸುವ ಹಿನ್ನೆಲೆಯಲ್ಲಿ 50 ಕೋಟಿ ರೂ.ಅನ್ನು ನಿರ್ವಹಣೆಗಾಗಿ ಮೀಸರಿಸಲಾಗಿದೆ. ಬೋರ್‌ವೆಲ್ ದುರಸ್ತಿ ಸೇರಿದಂತೆ ಹೊಸ ಬೋರ್ ವೆಲ್‌ಗಳನ್ನು ಕೊರೆಸುವ ಕೆಲಸ ನಡೆಯಲಿದೆ. ರಾಜ್ಯಧಾನಿ ಬೆಂಗಳೂರಿನಲ್ಲಿ ಕುಡಿಯುವ ನೀರಿನ ತೊಂದರೆ ಆಗದ ರೀತಿಯಲ್ಲಿ ಜಲಮಂಡಳಿ ಕಾರ್ಯ ನಿರ್ವಹಿಸಲಿದೆ ಎಂದು ತಿಳಿಸಿದರು.
60 ದಿನದಲ್ಲಿ ಸಾವಿರ ಕೋಟಿ ರೂ. ತೆರಿಗೆ ಸಂಗ್ರಹ ಗುರಿ:
ಬಿಬಿಎಂಪಿ ಜನವರಿ 31ರ ವರೆಗೆ 3,500 ಕೋಟಿ ರೂ. ತೆರಿಗೆ ಸಂಗ್ರಹ ಮಾಡಿದೆ . ಇನ್ನೂ 4,500 ಕೋಟಿ ರೂ. ತೆರಿಗೆ ಸಂಗ್ರಹದ ಗುರಿಯನ್ನು ಮುಟ್ಟಬೇಕಾಗಿದೆ. ಮುಂದಿನ 60 ದಿನಗಳಲ್ಲಿ 1 ಸಾವಿರ ಕೋಟಿ ರೂ. ಸಂಗ್ರಹದ ಗುರಿ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಎಲ್ಲ ವಲಯಗಳ ಕಂದಾಯ ಅಧಿಕಾರಿಗಳಿಗೆ ಟಾರ್ಗೆಟ್ ನೀಡಲಾಗಿದ್ದು ಕಾರ್ಯ ಪ್ರವೃತ್ತರಾಗಿದ್ದಾರೆ ಎಂದು ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆ ಮುಖ್ಯಆಯುಕ್ತರು ತಿಳಿಸಿದರು.
ಬಿಬಿಎಂಪಿಯಿಂದ ಬೀಗ ಮುದ್ರೆ ಕಾರ್ಯಾಚರಣೆ : ಈಗಾಗಲೇ ಪೀಣ್ಯ ಕೈಗಾರಿಕಾ ಪ್ರದೇಶ ಸೇರಿದಂತೆ ಹಲವು ಕಡೆಗಳಲ್ಲಿ ಪಾಲಿಕೆಯ ಅಧಿಕಾರಿಗಳು ಬೀಗ ಮುದ್ರೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಣ್ಣಪುಟ್ಟ ಅಂಗಡಿ ಮಾಲೀಕರನ್ನು ಬಿಟ್ಟು ಲಕ್ಷಾಂತರ ರೂ.ತೆರಿಗೆ ಉಳಿಸಿಕೊಂಡಿರುವ ಆಸ್ತಿಮಾಲೀಕರಿಗೆ ಡಿಮ್ಯಾಂಡ್ ನೋಟಿಸ್ ನೀಡಲಾಗಿದೆ. ಅದರಂತೆ ಕಾರ್ಯ ನಡೆಯುತ್ತಿದೆ. ಶೇ.50ರಷ್ಟು ತೆರಿಗೆ ಪಾವತಿಸಲೇಬೇಕು ಎಂದು ಈ ಮೂಲಕ ಮತ್ತೆ ಆಸ್ತಿ ತೆರಿಗೆ ಮಾಲೀಕರಲ್ಲಿ ಮನವಿ ಮಾಡುವುದಾಗಿ ತುಷಾರ್ ಗಿರಿನಾಥ್ ತಿಳಿಸಿದರು.