Advertisement

ಲಸಿಕೆ ವಿತರಣೆಯಲ್ಲಿ ಬಿಬಿಎಂಪಿ ಹಿಂದೆ!

01:19 PM Jan 23, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೊದಲೆರಡೂ ಕೋವಿಡ್‌ ಲಸಿಕೆಗಳನ್ನು ಶೇ. 100ರಷ್ಟು ಪೂರ್ಣಗೊಳಿಸಿದ ಪ್ರಥಮ ಜಿಲ್ಲೆ ಬೆಂಗಳೂರು ನಗರ. ಈ ಸಾಧನೆಗೆ ಶನಿವಾರಕ್ಕೆ ಒಂದು ತಿಂಗಳಾಗಿದೆ. ಆದರೆ,ಇದಕ್ಕೆ ಹೊಂದಿಕೊಂಡೇ ಇರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರದರ್ಶನ ಮಾತ್ರ ಅತ್ಯಂತ ನೀರಸವಾಗಿದ್ದು, ಲಸಿಕೆ ವಿತರಣೆಯಲ್ಲಿ 19ನೇ ಸ್ಥಾನದಲ್ಲಿದೆ!

Advertisement

ರಾಜ್ಯದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ನೀಡಲಾಗು ತ್ತಿರುವ ಎರಡೂ ಲಸಿಕೆಗಳನ್ನು ಪೂರೈಸಿದ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ರಾಜ್ಯದ ಸರಾಸರಿ ಗಿಂತ ತುಂಬಾ ಕಡಿಮೆ ಇದ್ದು, 19ನೇ ಸ್ಥಾನಕ್ಕೆ ಕುಸಿದಿದೆ. ಹಿಂದುಳಿದ ಜಿಲ್ಲೆಗಳಿಗಿಂತ ಪ್ರದರ್ಶನಕಳಪೆಯಾಗಿದೆ. ಇದು ಸರ್ಕಾರ ಮತ್ತು ಅಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

ಕೋಲಾರ, ಚಾಮರಾಜನಗರ, ತುಮಕೂರು, ವಿಜಯಪುರ, ಬೀದರ್‌, ಬಾಗಲಕೋಟೆ ಮತ್ತಿತರ ಜಿಲ್ಲೆಗಳು ಕೂಡ ಲಸಿಕೆ ಪಡೆಯುವಲ್ಲಿ ರಾಜಧಾನಿ ಬೆಂಗಳೂರನ್ನು ಹಿಂದಿಕ್ಕಿವೆ. ಕೊಡಗು ಎರಡನೇ ಡೋಸ್‌ ಅನ್ನು ಶೇ. 96-97ರಷ್ಟು ಪ್ರಗತಿ ಸಾಧಿಸುವಮೂಲಕ ಮೊದಲ ಸ್ಥಾನದಲ್ಲಿದೆ. ವಿಚಿತ್ರವೆಂದರೆ ಕೊರೊನಾ ಮೂರನೇ ಅಲೆಯಲ್ಲಿ ಪತ್ತೆಯಾಗುತ್ತಿರುವ ಸೋಂಕು ಪ್ರಕರಣಗಳ ಪೈಕಿ ಶೇ.50-60ರಷ್ಟು ನಗರದಲ್ಲೇ ಕಂಡುಬರುತ್ತಿವೆ. ಆದರೂ ಅತಿ ಹೆಚ್ಚು ಸುಶಿಕ್ಷಿತರು ಮತ್ತು ಐಟಿಹಬ್‌ ಎನಿಸಿಕೊಂಡಿರುವ ಸಿಲಿಕಾನ್‌ ಸಿಟಿ ಲಸಿಕೆ ವಿಚಾರ ದಲ್ಲಿ ಉದಾಸೀನ ತೋರುತ್ತಿರುವುದು ಕಂಡು ಬಂದಿದೆ.

ಈ ಹಿನ್ನೆಲೆಯಲ್ಲಿ ಮತ್ತಷ್ಟು ತಂಡಗಳನ್ನು ಹೆಚ್ಚಿಸಿ, ಪರಿಣಾಮಕಾರಿಯಾಗಿಲಸಿಕಾಕರಣಕ್ಕೆ ಬಿಬಿಎಂಪಿ ಮುಂದಾಗಿದೆ. ಮೊದಲ ಡೋಸ್‌ನಲ್ಲಿ ಬೆಂಗಳೂರು ಶೇ.98ರಷ್ಟು ಪ್ರಗತಿ ಸಾಧಿಸಿದ್ದರೆ, ಎರಡನೇ ಡೋಸ್‌ನಲ್ಲಿಶೇ. 83-84ರಷ್ಟು ಜನ ಮಾತ್ರ ಲಸಿಕೆ ಪಡೆದಿದ್ದಾರೆ.ಇನ್ನೂ ಶೇ. 15-16ರಷ್ಟು ಜನ ಹಲವು ಕಾರಣಗಳಿಂದ ದೂರ ಉಳಿದಿದ್ದಾರೆ. ಒಟ್ಟಾರೆಎಂಟು ವಲಯಗಳಲ್ಲಿ ಎರಡೂ ಡೋಸ್‌ಗಳನ್ನುಪೂರ್ಣಗೊಳಿಸಿದ ಏಕೈಕ ವಲಯ ಮಹದೇವಪುರ.ಇಲ್ಲಿ ಶೇ. 108ರಷ್ಟು ಪ್ರಗತಿಸಾಧಿಸಲಾಗಿದೆ. ಇನ್ನು ಅತ್ಯಂತ ಕಳಪೆ ಪ್ರದರ್ಶನ ದಾಸರಹಳ್ಳಿ ಮತ್ತು ಆರ್‌.ಆರ್‌. ನಗರದಲ್ಲಿದ್ದು, ಇಲ್ಲಿ ಎರಡನೇ ಡೋಸ್‌ ಕೇವಲ ಶೇ. 65ರಷ್ಟು ಪೂರ್ಣಗೊಂಡಿದೆ.

ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆನೀಡಲಾಗುತ್ತಿದೆ. ವಾಣಿಜ್ಯ ಸಂಕೀರ್ಣಗಳು ಮತ್ತುಮಾಲ್‌ಗ‌ಳಲ್ಲಿ ಎರಡೂ ಡೋಸ್‌ ಕಡ್ಡಾಯಗೊಳಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ವಿವಿಧ ಹಂತಗಳಲ್ಲಿ ಲಸಿಕೆ ಅಭಿಯಾನಹಮ್ಮಿಕೊಳ್ಳಲಾಗುತ್ತಿದೆ. ಇದೆಲ್ಲದರ ನಡುವೆಯೂನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ಇಲ್ಲವಾಗಿದೆ. ಇದಕ್ಕೆಹಲವು ಕಾರಣಗಳಿದ್ದು, ಮುಖ್ಯವಾಗಿ ಲಸಿಕೆಪಡೆದವರು ಬೆಂಗಳೂರು ನಗರದಲ್ಲಿ ಸೇರಿಹೋಗಿದ್ದಾರೆ. ಆದ್ದರಿಂದ ಪಾಲಿಕೆ ಮತ್ತುಬೆಂಗಳೂರು ನಗರ ಜಿಲ್ಲೆಯನ್ನು ವಿಲೀನಗೊಳಿಸಿ,ಒಂದೇ ಎಂದು ಪರಿಗಣಿಸುವಂತೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಲಸಿಕೆ ಇಲ್ಲಿ; ಲೆಕ್ಕ ಅಲ್ಲಿ!: ಪ್ರಮುಖವಾಗಿ ಬೆಂಗಳೂರಿನಲ್ಲಿ ಬಂದು-ಹೋಗುವವರ ಸಂಖ್ಯೆದೊಡ್ಡದು. ಇದರ ನಡುವೆಯೂ 18 ವರ್ಷಮೀರಿದ 97 ಲಕ್ಷ (ಅಂದರೆ 1.82 ಕೋಟಿ ಡೋಸ್‌)ಜನರಿಗೆ ಲಸಿಕೆ ನೀಡುವ ಗುರಿ ಇದೆ. ಈ ಜನಸಂಖ್ಯೆಯು 8-10 ಜಿಲ್ಲೆಗಳ ಒಟ್ಟು ಜನಸಂಖ್ಯೆಆಗಿದೆ. ಈ ಮಧ್ಯೆ ಕೆಲವರು ಪಾಲಿಕೆ ವ್ಯಾಪ್ತಿಯಲ್ಲೇಲಸಿಕೆ ಪಡೆದಿದ್ದರೂ, ಬೆಂಗಳೂರು ನಗರ ಜಿಲ್ಲೆಗೆ ಸೇರ್ಪಡೆಗೊಂಡಿದ್ದಾರೆ. ಉದಾಹರಣೆಗೆ ಮಲ್ಲೇಶ್ವರದ ಸರ್ಕಾರೇತರ ಸಂಸ್ಥೆಯಲ್ಲಿ ಈಚೆಗೆ ಎರಡನೇ ಡೋಸ್‌ ಲಸಿಕೆ ನೀಡಲಾಯಿತು. ಆ ಅಭಿಯಾನ ನಡೆಸಿದವರು ನಾರಾಯಣ ಹೃದಯಾಲಯ.

ಹೀಗಾಗಿ, ಆ ಲಸಿಕೆ ಪಡೆದವರ ಪಟ್ಟಿ ನಗರ ಜಿಲ್ಲೆಗೆ ಸೇರುತ್ತದೆ. ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗದಿರುವುದಕ್ಕೆ ಇದು ಕೂಡ ಕಾರಣ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್‌ ಸಮಜಾಯಿಷಿ ನೀಡುತ್ತಾರೆ. ಈ ಮಧ್ಯೆ ಬೆಂಗಳೂರು ನಗರ ಮತ್ತು ಬಿಬಿಎಂಪಿ ಯನ್ನು ವಿಲೀನಗೊಳಿಸಿ, ಲಸಿಕೆ ಲೆಕ್ಕ ಹಾಕಲು ಸೂಚಿಸಲಾಗಿದೆ. ಇದರಿಂದ ಬೆಂಗಳೂರು ಟಾಪ್‌ 10ರ ಪಟ್ಟಿಯಲ್ಲಿ ಬರಲಿದೆ. ಶೇಕಡಾವಾರು ಪ್ರಗತಿ ಕೂಡ ಉತ್ತಮವಾಗಲಿದ್ದು, ಉಳಿದದ್ದನ್ನು ನಾಲ್ಕಾರು ದಿನಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಡಾ.ಬಾಲಸುಂದರ್‌ ತಿಳಿಸುತ್ತಾರೆ

-ವಿಜಯಕುಮಾರ ಚಂದರಗಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next