Advertisement

ಡಿ.3ರರಿಂದ ಆರಂಭವಾಗಲಿದೆ ಬಿಬಿಎಲ್ ಕೂಟ; ವೇಳಾಪಟ್ಟಿ ಬಿಡುಗಡೆ

02:14 PM Jul 15, 2020 | keerthan |

ಮೆಲ್ಬೋರ್ನ್: ಕೋವಿಡ್-19 ಸೋಂಕು ಬಾಧೆಯ ನಡುವೆಯೇ ಕ್ರಿಕೆಟ್ ಆಸ್ಟ್ರೇಲಿಯಾ ಹತ್ತನೇ ಆವೃತ್ತಿಯ ಬಿಬಿಎಲ್ ಕೂಟದ ದಿನಾಂಕ ಮತ್ತು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಬಾರಿಯ ಬಿಬಿಎಲ್ ಕೂಟ ಡಿಸೆಂಬರ್ 3ರಿಂದ ಆರಂಭವಾಗಲಿದ್ದು. ಎರಡು ತಿಂಗಳ ಕಾಲ ನಡೆಯಲಿದೆ.

Advertisement

ಕಳೆದ ಬಾರಿಗಿಂತ ಎರಡು ವಾರ ಮೊದಲು ಈ ಬಾರಿಯ ಬಿಬಿಎಲ್ ಕೂಟ ಆರಂಭವಾಗಲಿದೆ. ಫೆಬ್ರವರಿ ಆರರಂದು ಫೈನಲ್ ಪಂದ್ಯ ನಡೆಯಲಿದೆ.

ಇದೇ ಸಮಯದಲ್ಲಿ ಭಾರತ ಆಸೀಸ್ ನಡುವಿನ ಬಾರ್ಡರ್ ಗಾವಸ್ಕರ್ ಟೆಸ್ಟ್ ಸರಣಿ ನಡೆಯಲಿದೆ. ಗಾಬಾದಲ್ಲಿ ಮೊದಲ ಪಂದ್ಯದ ಮೊದಲ ದಿನದಾಟ ಅಂತ್ಯವಾದ ಕೂಡಲೇ ಅಡಿಲೇಡ್ ಓವಲ್ ನಲ್ಲಿ ಬಿಬಿಎಲ್ ನ ಉದ್ಘಾಟನಾ ಪಂದ್ಯ ಆರಂಭವಾಗಲಿದೆ.

ಭಾರತ- ಆಸೀಸ್ ಟೆಸ್ಟ್ ಸರಣಿ ನಡೆಯುವ ಕಾರಣ ಸ್ಮಿತ್, ವಾರ್ನರ್ ರಂತಹ ಪ್ರಮುಖ ಆಟಗಾರರು ಮೊದಲ ಹಂತದ ಬಿಬಿಎಲ್ ನಲ್ಲಿ ಆಡುವ ಅವಕಾಶ ಕಳೆದುಕೊಳ್ಳಲಿದ್ದಾರೆ.

Advertisement

ಮೊದಲ ಪಂದ್ಯ ಅಡಿಲೇಡ್ ಸ್ಟ್ರೈಕರ್ಸ್ ಮತ್ತು ಮೊಲ್ಬೋರ್ನ್ ರೆನಿಗೇಡ್ಸ್ ನಡುವೆ ನಡೆಯಲಿದೆ. ಮಹಿಳಾ ಬಿಬಿಎಲ್ ಕೂಟದ ವೇಳಾಪಟ್ಟಿಯೂ ಬಿಡುಗಡೆಯಾಗಿದ್ದು, ಅಕ್ಟೋಬರ್ 17ರಿಂದ ನವೆಂಬರ್ 29ರವರೆಗೆ ನಡೆಯಲಿದೆ. ಒಂದು ವೇಳೆ ಕೋವಿಡ್ ಕಂಟಕ ಮುಂದುವರಿದಲ್ಲೇ ಆದಲ್ಲಿ ಈ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆಯಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next