Advertisement

BBK11: ಬಿಗ್ ಬಾಸ್ ಮನೆಯಲ್ಲಿ ಈ ವರೆಗೆ ಸೈಲೆಂಟ್ ಆಗಿದ್ದ ‘ಪಾರು’ ವೈಲೆಂಟ್ ಆಗಿದ್ದೇಕೆ?

11:09 PM Oct 28, 2024 | Team Udayavani |

ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಿಂದ ನಾಲ್ಕನೇ ವಾರ ಮಹಿಳಾ ಸ್ಪರ್ಧಿಯೊಬ್ಬರು ಹೊರಬಂದಿದ್ದಾರೆ. ಮೋಕ್ಷಿತಾ, ಹಂಸ ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಎಲಿಮಿನೇಟ್ ಪ್ರಕ್ರಿಯೆ ನಡೆದಿದ್ದು, ಹಂಸ ಅವರು ಮನೆಯಿಂದ ಹೊರಬಂದಿದ್ದಾರೆ. ಮೋಕ್ಷಿತಾ ತಿವಿಕ್ರಮ್ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ. ತ್ರಿವಿಕ್ರಮ್ ಮೈಂಡ್ ಗೇಮ್ ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Advertisement

ತ್ರಿವಿಕ್ರಮ್ ಮೈಂಡ್ ಗೇಮ್ ಆರೋಪ; ಮೋಕ್ಷಿತಾ ಗರಂ:
ಇನ್ಮೇಲೆಯಿಂದ ಆಟ ಶುರುವಾಗುತ್ತದೆ. ಅಸಲಿ ಆಟ ಇವತ್ತಿನಿಂದ ಶುರುವಾಗುತ್ತದೆ. ನನ್ನನ್ನು ಆಚೆ ಆಗಬೇಕಂಥ ಇಲ್ಲಿ ಪ್ಲ್ಯಾನಿಂಗ್ ನಡೆಯುತ್ತಿದೆ. ನೀವು 10 ವಾರ ಇರುತ್ತೀರಾ ಅಂಥ ಕಾನ್ಫಿಡೆನ್ಸ್ ಇದೆಯಾ? ನೀವು ಯಾರು ನನಗೆ ಮನೆಯಿಂದ ಯಾವಾಗ ಹೋಗಬೇಕು ಅಂಥ ಹೇಳೋಕೆ. ನಿಮ್ಮ ಮೈಂಡ್ ಗೇಮ್ ನನ್ನ ಹತ್ರ ಬೇಡ. ನೀವು ಗೋಮುಖ ವ್ಯಾಘ್ರ ತರ ಆಡುತ್ತಿದ್ದೀರಿ.

ನಾನು 10 ವಾರಕ್ಕೆ ಆಚೆ ಬರುತ್ತೇನೆ ಅಂಥ ಡಿಸೈಡ್ ನೀವ್ಯಾರು? ನೀವು ಸ್ಪರ್ಧಿಗಳ ಲಿಸ್ಟ್ ನೋಡ್ಕೊಂಡು ಇಲ್ಲಿಗೆ ಬಂದಿದ್ದೀರಿ. ನೀವು ಯಾರನ್ನು ‌ನಾಮಿನೇಟ್ ಮಾಡ್ಬೇಕು ಅಂಥ ಪ್ಲ್ಯಾನ್ ಮಾಡುತ್ತೀರಿ. ನಮ್ಮ ಸೋಶಿಯಲ್ ‌ಮೀಡಿಯಾ ಪ್ರೊಫೈಲ್ ‌ನೋಡ್ಕೊಂಡು ಬಂದಿದ್ದಾರೆ ಎಂದು ತಿವಿಕ್ರಮ್ ಅವರ ಮೇಲೆ ಗರಂ ಆಗಿದ್ದಾರೆ. ನಾನು ಹಾಗೆ ಹೇಳೇ ಇಲ್ಲ. ದೇವರ ಮೇಲೆ ಆಣೆ ಹಾಕುವ ಬನ್ನಿ ಎಂದು ಮಂಜು ಅವರ ಬಳಿ ತಿವಿಕ್ರಮ್ ಅವರು ಹೇಳಿದ್ದಾರೆ. ನಾನು ‘ಗಲೀಜು’ ಅನ್ನುವ ಶಬ್ದವನ್ನು ಬಳಸಿಲ್ಲ. ಯಾವತ್ತೂ ನಾಮಿನೇಟ್ ಆದವರ ಬಗ್ಗೆ ಮಾತನಾಡಿಲ್ಲ. ಸ್ಪರ್ಧಿಗಳ ಲಿಸ್ಟ್ ನಾನು ನೋಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಬಂದದ್ದನ್ನು ಮಾತ್ತ ನೋಡಿದ್ದೆ ಎಂದು ಶಿಶಿರ್ ಅವರ ತಿವಿಕ್ರಮ್ ಹೇಳಿಕೊಂಡಿದ್ದಾರೆ.

ಕಣ್ಣೀರಿಟ್ಟ ಸ್ಪರ್ಧಿಗಳು.!
ಭಾವನೆಗಳನ್ನು ‌ನಿರೂಪಿಸುವ ಟಾಸ್ಕ್ ವೊಂದನ್ನು ಬಿಗ್ ಬಾಸ್‌ ನೀಡಿದ್ದಾರೆ. ಸ್ಪರ್ಧಿಗಳು ಹಾಸ್ಯ, ಭಾವನಾತ್ಮಕ.. ಹೀಗೆ ನಾನಾ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಸ್ಪರ್ಧಿಗಳು ತಮ್ಮ ಜೀವನದ ಬಗೆಗಿನ ಕರಾಳ ದಿನಗಳನ್ನು ‌ನೆನೆದಿದ್ದಾರೆ. ಶಿಶಿರ್ ಅವರು ವೃತ್ತಿ ಜೀವನದಲ್ಲಿ ಖ್ಯಾತ ಸಿನಿಮಾ ನಿರ್ಮಾಪಕರೊಬ್ಬರಿಂದ ಆದ ಅವಮಾನದ ದಿನಗಳನ್ನು ‌ನೆನೆದಿದ್ದಾರೆ. ನನಗೆ ನಾಟಕ ಮಾಡ್ಕೊಂಡು, ಫೇಕದ ಆಗಿ ಇರೋಕೆ ಬರಲ್ಲ.‌‌ ಕೆಲವೊಂದನ್ನು ಕ್ಷಮಿಸುತ್ತೇನೆ ಮರೆಯೋಕೆ ಆಗಲ್ಲ ಎಂದು ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಕೆಲ ಘಟನೆಗಳನ್ನು ಸ್ಮರಿಸಿದ್ದಾರೆ.

ಸದಸ್ಯರು ಯಾರ ಬಳಿಯೂ ಹಂಚಿಕೊಳ್ಳದ ಒಂದು ಘಟನೆಯನ್ನು ಹೇಳಿಕೊಳ್ಳಬಹುದು ಎಂದು ಬಿಗ್ ಬಾಸ್ ಕನ್ಪೆಷನ್ ರೂಮ್ ಗೆ ಸ್ಪರ್ಧಿಗಳನ್ನು ಕರೆದು ಕೇಳಿದ್ದಾರೆ. 2020 ರಲ್ಲಿ ನನ್ನ ತಾಯಿಯನ್ನು ನಾನು ಕಳೆದುಕೊಂಡೆ. 2018 ರಲ್ಲಿ ನನ್ನ ತಂದೆಯನ್ನು ಕಳೆದುಕೊಂಡೆ. ಅವರಿಗೆ ಕೋವಿಡ್ ಇರಲಿಲ್ಲ. ಬಹು ಅಂಗಾಂಂಗ ವೈಫಲ್ಯ ಇತ್ತು. ನನ್ನ ತಾಯಿ ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದರು ನಮ್ಮ ಸಂಬಂಧಿಕರು ಅಮ್ಮನ ತಲೆ ತುಂಬುತ್ತಿದ್ದರು. ಆ ವೇಳೆ ನಾನು ತುಂಬಾ ಅಮ್ಮನ ಮೇಲೆ ಕಿರುಚಾಡಿದ್ದೆ. ಅವರನ್ನು ಮಾತನಾಡಿಸಿ ಕೆಲವು ದಿನಗಳ ಆದ್ಮೇಲೆ ಇನ್ನು ಅವರು ನನ್ನ ಜತೆ ಇರಲ್ಲ. ಇದೊಂದು ತಪ್ಪು ಮಾಡಬಾರದಿತ್ತು” ಎಂದು ಐಶ್ವರ್ಯಾ ಕಣ್ಣೀರಿಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next