Advertisement

BBK11: ಮಾನಸ ಭಾರೀ ಸೌಂಡ್ ಮಾತ್ರ, ಬಳಿಕ ಠುಸ್ ಬಾಂ*ಬ್ ಎಂದ ಹನುಮಂತು!

11:15 PM Oct 30, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಎರಡನೇ ಬಾರಿ ಹನುಮಂತು ಯುಗ ಆರಂಭವಾಗಿದೆ. ಕ್ಯಾಪ್ಟನ್ ಆಗಿ ಹನುಮಂತು ಮನೆಮಂದಿಯನ್ನು ಈ ವಾರ ನಿಯಂತ್ರಿಸಲಿದ್ದಾರೆ. ಈ ಮನೆಯಲ್ಲಿ ನಾನು ಕ್ಯಾಪ್ಟನ್ ಆಗುವವರೆಗೆ ಜಗಳವೇ ಆಗೋದು ಬೇಡ ಅಂಥ ದೇವರಲ್ಲಿ ಹನುಮಂತು ಪ್ರಾರ್ಥಿಸಿದ್ದಾರೆ.

Advertisement

ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಹನುಮಂತು ಅವರು ನೇರವಾಗಿ ಸುರೇಶ್ ಅವರನ್ನು ನಾಮಿನೇಟ್ ಮಾಡಿದ್ದಾರೆ. ಕೋಳಿ ತರ ಅವರು ಮಲಗಿರುತ್ತಾರೆ ಎನ್ನುವ ಕಾರಣವನ್ನು ನೀಡಿದ್ದಾರೆ. ಸರಿಯಾಗಿ ಮಾತನಾಡೋಕೆ ಬರಲ್ಲ. ನಾವು ಅನ್ಕೊಂಡ ಹಾಗೆ ಅವನು ಸಾಮಾನ್ಯದವನಲ್ಲ. ಕೊಟ್ಟಿರುವ ರೀಸನ್ ಸರಿಯಿಲ್ಲ. ನಾನೊಬ್ಬನೇ ಈ ಮನೆಯಲ್ಲಿ ‌ಮಲಗಿರಲ್ಲ ಎಂದು ಸುರೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಾಮಿನೇಟ್ ಅದವರು ಯಾರೆಲ್ಲ..
ರಾಜಕೀಯ ಆಟದಲ್ಲಿ ಯಾವುದರಲ್ಲೂ ಅಷ್ಟಾಗಿ ಭವ್ಯ ಅವರು ಮಾತನಾಡಿಲ್ಲ ಎಂದು ಹನುಮಂತು ಅವರು ಅವರನ್ನು ನಾಮಿನೇಟ್ ಮಾಡಿದ್ದಾರೆ. ನೀವು ಕೊಟ್ಟ‌ ಕಾರಣ ನನಗೆ ಇಷ್ಟ ಆಗಿಲ್ಲ. ನೀವು ನನ್ನ ಹತ್ರ ಮಾತನಾಡಿ ಎಂದು ಹನುಮಂತು ಬಳಿ ಭವ್ಯ ಹೇಳಿದ್ದಾರೆ. ‌ ಅವರು ತಪ್ಪಾಗಿ ಆಟವನ್ನು ಆಡಿದ್ದಾರೆ ಎಂದು ಹನುಮಂತು ಮಂಜು ಅವರನ್ನು ನಾಮಿನೇಟ್ ಮಾಡಿದ್ದಾರೆ.

ಅನುಷಾ ಅವರು ತುಂಬಾ ಸ್ಲೋ ಇದ್ದಾರೆ. ಎಲ್ಲರೊಂದಿಗೆ ಅವರು ಇನ್ನು ಬೆರತುಕೊಳ್ಳಬೇಕೆಂದು ಅವರು ಕ್ಯಾಪ್ಟನ್ ‌ನಿಂದ ನಾಮಿನೇಟ್ ಆಗಿದ್ದಾರೆ. ಮಾನಸ ಬಾಂಬ್ ಇದ್ದಹಾಗೆ ಬ್ಲಾಸ್ಟ್ ಆದಾಗ ಭಾರೀ ಸೌಂಡ್ ಬರುತ್ತದೆ. ಆದರೆ ಆ ಬಳಿಕ ಠುಸ್ ಆಗ್ತಾದೆ. ಸಣ್ಣ ಸಣ್ಣ ವಿಚಾರಕ್ಕೂ ಆಳುತ್ತಾರೆ. ಹಾಗಾಗಿ ಅವರನ್ನು ನಾಮಿನೇಟ್ ಮಾಡುತ್ತಿದ್ದೇನೆ ಎಂದು ಹನುಮಂತು ಹೇಳಿದ್ದಾರೆ.

ನೀನು ದೊಡ್ಡ ಗೇಮ್ ಪ್ಲ್ಯಾನರ್, ನಿನ್ನಷ್ಟು ಗೇಮ್ ಪ್ಲ್ಯಾನರದ ನಾನು ನೋಡಿಲ್ಲ. ಬಿಗ್ ಬಾಸ್ ನಿಮ್ಮನ್ನು ಸುಮ್ಮೆ ಕರೆಸಿಲ್ಲ ಎಂದು ಮಾನಸ ನಗಾಡಿಕೊಂಡೇ ಹನುಮಂತು ಬಳಿ ಹೇಳಿದ್ದಾರೆ. ಕ್ಯಾಪ್ಟನ್ಸಿ ಇದ್ದಾಗ ಅವರು ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿದ್ದಾರೆ ಎಂದು ಐಶ್ವರ್ಯಾ ಅವರನ್ನು ನಾಮಿನೇಟ್ ಮಾಡಿದ್ದಾರೆ. ನಿನ್ನೆ ಆಡಿರುವ ಆಟದಲ್ಲಿ ಸ್ವಲ್ಪ ಅವಸರ ಮಾಡಿದರು. ಚೆನ್ನಾಗಿ ಆಡಿದರೆ ಕೊನೆಯವರೆಗೂ ಇರಬಹುದಿತ್ತು ಎಂದು ಹೇಳಿ ನಾಮಿನೇಟ್ ಮಾಡಿದ್ದಾರೆ. ಮೋಕ್ಷಿತಾ ,ಭವ್ಯ, ಮಂಜು, ಧರ್ಮ, ಚೈತ್ರಾ, ಮಾನಸ, ಐಶ್ವರ್ಯಾ, ಧನರಾಜ್, ಶಿಶಿರ್,ಹನುಮಂತು ಅವರು ನಾಮಿನೇಟ್ ಆಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next