ಬೆಂಗಳೂರು: ಫಿನಾಲೆ ಹತ್ತಿರ ಬರುತ್ತಿದ್ದಂತೆ ಬಿಗ್ ಬಾಸ್ (Bigg Boss Kannada-11) ಮನೆ ಮಂದಿಗೆ ಸರ್ಪ್ರೈಸ್ ಸಿಕ್ಕಿದೆ. ಮೂರು ತಿಂಗಳ ಬಳಿಕ ಮನೆಯವರನ್ನು ನೋಡಿ ಸ್ಪರ್ಧಿಗಳು ಖುಷ್ ಆಗಿದ್ದಾರೆ.
ಬಿಗ್ ಬಾಸ್ ಆಟ 92 ದಿನಗಳನ್ನು ಪೂರ್ತಿಗೊಳಿಸಿದೆ. ಸ್ಪರ್ಧಿಗಳು ಮನೆಮಂದಿಯಿಂದ ದೂರವಾಗಿ ಮೂರು ತಿಂಗಳು ಕಳೆದಿದೆ. ಈ ಹಿಂದೆ ಕಲ ಸ್ಪರ್ಧಿಗಳಿಗೆ ಫೋನ್ನಲ್ಲಿ ಮನೆಮಂದಿ ಜತೆ ಮಾತನಾಡುವ ಅವಕಾಶ ಸಿಕ್ಕಿತ್ತು.
ಇದೀಗ ಬಿಗ್ ಬಾಸ್ ಸ್ಪರ್ಧಿಗಳ ಪೋಷಕರನ್ನು ದೊಡ್ಮನೆಗೆ ಕರೆಸಿಕೊಂಡು ಸರ್ಪ್ರೈಸ್ ನೀಡಿದ್ದಾರೆ. ಭವ್ಯ ಹಾಗೂ ತ್ರಿವಿಕ್ರಮ್ ಅವರ ಅಮ್ಮ ದೊಡ್ಮನೆಗೆ ಬಂದು ತಮ್ಮ ಮಕ್ಕಳನ್ನು ನೋಡಿ ಖುಷಿ ಪಟ್ಟಿದ್ದಾರೆ.
ಮನೆಯವರು ಬಂದಾಗ ಸ್ಪರ್ಧಿಗಳನ್ನು ಒಂದು ಕ್ಷಣಕ್ಕೆ ಹಾಗೆಯೇ ನಿಲ್ಲುವಂತೆ ಹೇಳಲಾಗಿದೆ. ಆ ಬಳಿಕ ಭವ್ಯ ತನ್ನ ಅಮ್ಮನನ್ನು ತಬ್ಬಿಕೊಂಡು ಆನಂದಬಾಷ್ಪ ಸುರಿಸಿದ್ದಾರೆ.
ತ್ರಿವಿಕ್ರಮ್ ಅವರ ಅಮ್ಮ ಬಿಗ್ ಬಾಸ್ ಮನೆಗೆ ಬಂದಿದ್ದು, ಅವರನ್ನು ಭೇಟಿ ಆಗಬೇಕೆಂದರೆ ತ್ರಿವಿಕ್ರಮ್ ಅವರು ಫೋಟೋವುಳ್ಳ ಪಜಲ್ನ್ನು ಜೋಡಿಸಬೇಕು. 10 ನಿಮಿಷದೊಳಗಡೆ ಪಜಲ್ ಪೂರ್ಣಗೊಳಿಸುವಲ್ಲಿ ತ್ರಿವಿಕ್ರಮ್ ಅವರು ವಿಫಲರಾಗಿದ್ದಾರೆ. ಆ ಕಾರಣದಿಂದ ಅವರು ಕಣ್ಣೀರಿಟ್ಟು ಇನ್ನೊಂದು ಚಾನ್ಸ್ ಕೊಡಿ ಬಿಗ್ ಬಾಸ್ ಎಂದು ಮನವಿ ಮಾಡಿದ್ದಾರೆ.
ಇನ್ನೊಂದು ಕಡೆ ತ್ರಿವಿಕ್ರಮ್ ಅವರ ಅಮ್ಮ ಭವ್ಯ ಅವರ ಜತೆ ಮಾತನಾಡಿ, ನನ್ನ ಮಗನನ್ನು ತಾಯಿಯಾಗಿ, ಫ್ರೆಂಡ್ ಆಗಿ ಎಲ್ಲ ತರದಲ್ಲೂ ಚೆನ್ನಾಗಿ ನೋಡಿಕೊಳ್ಳುತ್ತಿದ್ದೀಯಾ. ರಾಧಾ – ಕೃಷ್ಣನ ತರ ಇದ್ದೀರಾ ಎಂದು ಹೇಳಿದ್ದಾರೆ. ಇದನ್ನು ಕೇಳಿ ಭವ್ಯ ತುಸು ನಾಚಿ ನಕ್ಕಿದ್ದಾರೆ.