ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ಮಾತಿನಿಂದಲೇ ಸದ್ದು ಮಾಡುತ್ತಿದ್ದು ಫೈಯರ್ ಬ್ರ್ಯಾಂಡ್ ಚೈತ್ರಾ ಮತ್ತೆ ಕಣ್ಣೀರಿಟ್ಟಿದ್ದಾರೆ. ಮನೆಮಂದಿ ಜತೆಗಿನ ಅಸಮಾಧಾನದಿಂದ ಚೈತ್ರಾ ಮತ್ತೆ ಕುಗ್ಗಿದ್ದಾರೆ.
ಐಶ್ವರ್ಯಾ ಹಾಗೂ ಮೋಕ್ಷಿತಾ ಚೈತ್ರಾಳ ಬಗ್ಗೆ ಮಾತನಾಡಿಕೊಂಡಿದ್ದಾರೆ. ಈ ಮನೆಯಲ್ಲಿ ಹೆಚ್ಚು ಸುಳ್ಳು ಹೇಳುವುದು ಚೈತ್ರಾವೆಂದು ಇಬ್ಬರು ಹೇಳಿದ್ದಾರೆ. ಮುಖಕ್ಕೆ ಕಾಫಿ ಎರಚುವ ಮೂಲಕ ಐಶ್ವರ್ಯಾ ಅವರು ಚೈತ್ರಾಳ ಮೇಲಿದ್ದ ಅಸಮಾಧಾನವನ್ನು ಹೊರಹಾಕಿದ್ದರೆ. ಚೈತ್ರಾ – ಐಶ್ವರ್ಯಾ ಅವರ ನಡುವೆ ಹೋಗೇ ಬಾರೇ ಎನ್ನುವ ಮಟ್ಟಿಗೆ ಮಾತಿನ ಚಕಮಕಿ ನಡೆದಿದೆ.
ಮನೆ ಕೆಲಸದ ವಿಚಾರದಲ್ಲಿ ರಜತ್ ಅವರು ನಾನು ಮಾಡುತ್ತಿರುವ ಕೆಲಸವನ್ನು ಚೈತ್ರಾ ಬಂದು ಗಲೀಜು ಮಾಡಿಬಿಟ್ಟಳು ಎಂದು ಆರೋಪಿಸಿದ್ದಾರೆ. ಮೊನ್ನೆ ಯಾರಿಗೂ ಇಲ್ಲಿ ಚಳಿ ಜ್ವರ ಬಂದಿತ್ತು ಅಲ್ವಾ. ಮಂಡೇ ನಾ ಜ್ಞಾಪಿಸು ನನಗೆ ಇಲ್ಲಿ ದಿನಗಳು ಮರೆತು ಹೋಗ್ತಾ ಇದೆ ಚೈತ್ರಾಳಿಗೆ ಜ್ವರ ಬಂದ ವಿಚಾರದ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಯಾವ ಆರೋಪಕ್ಕೆ ನನಗೆ ಈ ರೀತಿ ಮಾಡ್ತಾ ಇದ್ದಾರೆ. ಬಂದ ಆರೋಪಗಳನ್ನು ಸಾಬೀತು ಮಾಡಿಕೊಳ್ಳದಿದ್ರೆ ಬಲಿ ಕಾ ಬಕ್ರಾ ತರ ಎಲ್ಲರೂ ಮಾಡಿದ ಆರೋಪಗಳನ್ನು ತಲೆಗೆ ತಕ್ಕೊಂಡು ಕೂರಬೇಕಾಗುತ್ತದೆ ನಾನು. ಸರಿ ಇದ್ದೀನಿ ಅಲ್ವಾ ನಾನು ನಾಟಕ ಮಾಡ್ತಾ ಇದ್ದೀನಾ? ಇಲ್ಲಿ ಆಡ್ಕೊಂಡು ಒಂದೊಂದು ವ್ಯಂಗ್ಯದ ಮಾತುಗಳಿಗೂ ಇದೆ ಅಲ್ವಾ ಸಮಯ ಬರುತ್ತೆ ಸಮಯನೇ ಉತ್ತರ ಕೊಡುತ್ತದೆ ಎಂದಿದ್ದಾರೆ.
ಚೀಟಿಯಲ್ಲಿ ಏನೋ ಬರೆದು ದೇವರ ಮುಂದೆ ಇಟ್ಟಿದ್ದಾರೆ. ಮನಸ್ಸಿನಲ್ಲಿ ಏನೋ ಪ್ರಾರ್ಥಿಸಿದಾಗ ಅವರು ಬರೆದಿಟ್ಟ ಚೀಟಿ ಕೆಳಗೆ ಬೀಳುತ್ತದೆ.