ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ವಾರದ ಮಧ್ಯದಲ್ಲೇ ಒಬ್ಬರು ಸ್ಪರ್ಧಿ ಎಲಿಮಿನೇಟ್ ಆಗಲಿದ್ದಾರೆ. ಆ ಮೂಲಕ ಟ್ರೋಫಿ ಗೆಲ್ಲುವ ಒಬ್ಬರ ಕನಸು ನುಚ್ಚು ನೂರಾಗಲಿದೆ.
ʼಟಿಕೆಟ್ ಟು ಫಿನಾಲೆʼ ಟಾಸ್ಕ್ ಗೆದ್ದು ಹನುಮಂತು ನೇರವಾಗಿ ಫಿನಾಲೆಗ ತಲುಪಿದ್ದಾರೆ. ಇನ್ನುಳಿದ ಸ್ಪರ್ಧಿಗಳಿಗೆ ಮಿಡ್ ವೀಕ್ ನಾಮಿನೇಷನ್‌ನಿಂದ ಪಾರಾಗಲು ಬಿಗ್ ಬಾಸ್ ಸರಣಿ ಟಾಸ್ಕ್ ಗಳನ್ನು ನೀಡಿದ್ದರು. ಈ ಟಾಸ್ಕ್‌ನಲ್ಲಿ ಧನರಾಜ್ ಅವರು ಗೆದ್ದು ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ. ಇನ್ನುಳಿದ ಸ್ಪರ್ಧಿಗಳಲ್ಲಿ ಒಬ್ಬರು ದೊಡ್ಮನೆಯಿಂದ ಮಧ್ಯರಾತ್ರಿಯೇ ಹೊರಬರುವುದು ಪಕ್ಕಾ ಆಗಿದೆ.
ಇತ್ತ ಮನೆಮಂದಿ ರಾತ್ರೋ ರಾತ್ರಿ ತಮ್ಮ ಬ್ಯಾಗ್ ಪ್ಯಾಕ್ ಮಾಡಿಕೊಂಡು ತೆರದಿರುವ ಮುಖ್ಯದ್ವಾರದ ಮುಂದೆ ನಿಂತಿದ್ದಾರೆ. ಗೌತಮಿ ಅವರು ತಿವಿಕ್ರಮ್ ಅವರು ಮನೆಯಿಂದ ಆಚೆ ಹೋಗಬೇಕು ಎಂದಿದ್ದಾರೆ. ಭವ್ಯಾ ಅವರು ಮಂಜಣ್ಣ ಹೋಗಬೇಕು ಎಂದಿದ್ದಾರೆ. ಮಂಜು ಅವರು ಭವ್ಯಾ ಅವರ ಹೆಸರನ್ನು ಹೇಳಿದ್ದಾರೆ. ಇವರುಗಳ ಪೈಕಿಗೆ ಒಬ್ಬರು ಹೊರಗೆ ಹೋಗುವುದು ಮಾತ್ರ ಪಕ್ಕಾ ಆಗಿದೆ.
ಹೊರಗೆ ಹೋಗುವುದು ಇವರೇ..? ಹನುಮಂತು , ಧನರಾಜ್ ಅವರನ್ನು ಹೊರತುಪಡಿಸಿ ಈ ವಾರದ ಮಧ್ಯದಲ್ಲೇ ಒಬ್ಬರು ಹೋಗಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿಯ ಪ್ರಕಾರ ಗೌತಮಿ ಜಾಧವ್ (Gautami Jadhav) ಅವರು ಮಧ್ಯ ರಾತ್ರಿ ಮನೆಯಿಂದ ಔಟ್ ಆಗಲಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ದೊಡ್ಮನೆಯಿಂದ ಆಚೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ಗೌತಮಿ ಅವರಿಗೆ ಕಡಿಮೆ ವೋಟಿಂಗ್ ಬಂದ ಕಾರಣ ಅವರು ಎಲಿಮಿನೇಟ್ ಆಗಿದ್ದಾರೆ ಎನ್ನಲಾಗುತ್ತಿದೆ.
ಅಧಕೃತವಾಗಿ ಇಂದು ರಾತ್ರಿ ಎಲಿಮಿನೇಟ್ ವಿಚಾರ ಬಹಿರಂಗವಾಗಲಿದೆ.
ಗೌತಮಿ ಅವರು ಆರಂಭದಿಂದಲೂ ಮಂಜು ಅವರೊಂದಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಮಂಜು ಅವರ ಸ್ನೇಹದಿಂದ ದೂರ ಉಳಿದು ಗೇಮ್‌ನಲ್ಲಿ ತೊಡಗಿಕೊಂಡು ವೈಯಕ್ತಿಕವಾಗಿ ಆಡಲು ಶುರು ಮಾಡಿದ್ದರು.
ನಿನ್ನೆಯ ಸಂಚಿಕೆಯಲ್ಲಿ ಎಲಿಮಿನೇಟ್ ಆಗುವ ಭೀತಿಯಿಂದ ಗೌತಮಿ, ಮೋಕ್ಷಿತಾ ಅತ್ತಿದ್ದರು. ಅವರನ್ನು ಮಂಜು ಅವರು ಸಮಾಧಾನ ಪಡಿಸಿದ್ದರು.