Advertisement

BBK11: ಮನೆಯವರ ಸಲಹೆ – ಸಂದೇಶ ಕೇಳಿ ಸ್ಪರ್ಧಿಗಳಿಗೆ ಹೊಸ ಉತ್ಸಾಹ ತುಂಬಿದ ಬಿಗ್ ಬಾಸ್

07:53 AM Nov 02, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ತಾಳ್ಮೆಯ ಆಟ ನಡೆಯುತ್ತಿದೆ. ಯಾರು ತಾಳ್ಮೆಯಿಂದ ಇರುತ್ತಾರೋ ಅವರಿಗೆ ಅವರ ಮನೆಯವರಿಂದ ಸಂದೇಶ ಬರಲಿದೆ.

Advertisement

ಈ ಚಟುವಟಿಕೆಯಲ್ಲಿ ಧನರಾಜ್ ಅವರು ಏಕಾಗ್ರತೆಯನ್ನು ಕಳೆದುಕೊಂಡಿದ್ದು, ಮನೆಯವರಿಂದ ಬರುವ ಸಂದೇಶವನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ.

ಮಾಸ್ಕ್ ಹಾಕಿಕೊಂಡು ದೊಡ್ಮನೆಯೊಳಗೆ ಬರುವ ಜನ ಸ್ಪರ್ಧಿಗಳ ಏಕಾಗ್ರತೆಗೆ ಭಂಗ ತರುವ ಪ್ರಯತ್ನ ಮಾಡಿದ್ದಾರೆ.

ಗೌತಮಿ ಅವರಿಗೆ ಮನೆಯವರ ಪತ್ರ ಬಂದಿದ್ದು, ಅದನ್ನು ಓದಿ ಗೌತಮಿ ಭಾವುಕರಾಗಿದ್ದಾರೆ. ಹನುಮಂತು, ಚೈತ್ರಾ, ಮಾನಸ ಅವರಿಗೆ ಯಾವುದೇ ಸಂದೇಶ ಬಂದಿಲ್ಲ.

Advertisement

ಧರ್ಮ ಕೀರ್ತಿರಾಜ್, ಶಿಶಿರ್, ಮೋಕ್ಷಿತಾ, ಮಂಜು, ತಿವಿಕ್ರಮ್, ಭವ್ಯ ಕೂಡ ಮನೆಯವರ ಪತ್ರವನ್ನು ಓದಿದ್ದಾರೆ. ಮೊದಲ ವಾರ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಯುಮನಾ ಅವರು ಸರ್‌ಪ್ರೈಸ್ ಆಗಿ ಬಿಗ್ ಬಾಸ್ ಮನೆಗೆ ಬಂದು ಕೆಲ ಕಾಲ ಮನೆಯವರೊಂದಿಗೆ ಕಾಲ ಕಳೆದಿದ್ದಾರೆ.

ಅಪ್ಪ – ಅಮ್ಮನನ್ನು ಕಳೆದುಕೊಂಡಿರುವ ಐಶ್ವರ್ಯಾ ಅವರಿಗೆ ಬಿಗ್ ಬಾಸ್ ತಮ್ಮ ‌ಮನದಾಳದಿಂದ ಪತ್ರ ಬರೆದಿದ್ದು, ನೀವು ನಮ್ಮ ‌ಮನೆಯ ಸದಸ್ಯೆ, ನಿಮ್ಮೊಂದಿಗೆ ನಾವೆಲ್ಲರೂ ಇದ್ದೇವೆ ಎಂದು ಧೈರ್ಯ ತುಂಬಿದ್ದಾರೆ.

ಮನೆಯವರ ಸಂದೇಶ – ಸಲಹೆ ಕೇಳಿದ ದೊಡ್ಮನೆ ಸ್ಪರ್ಧಿಗಳಿಗೆ ಬಿಗ್‌ ಬಾಸ್ ಉತ್ಸಾಹ ತುಂಬಿದೆ. ಇಷ್ಟು ದಿನ ಮೋಟಿವೇಷನ್ ಗಾಗಿ‌ ಕಾಯುತ್ತಿದ್ದ ಮನೆಮಂದಿಗೆ ಮನೆಯವರ ಪತ್ರ- ಧ್ವನಿಯಿಂದಾಗಿ ಆಟಕ್ಕೆ ಹೊಸ ಹುಮ್ಮಸ್ಸು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next