Advertisement

BBK10: ಕಾರ್ತಿಕ್‌ಗೆ ಬಿಗ್ ಬಾಸ್ 10ರ ಕಿರೀಟ: ಪ್ರತಾಪ್ ರನ್ನರ್ ಅಪ್

12:08 AM Jan 29, 2024 | Team Udayavani |

ಬೆಂಗಳೂರು: 113 ದಿನಗಳ ಸುದೀರ್ಘ ಬಿಗ್ ಬಾಸ್ ಮನೆಯ ಜರ್ನಿ ಸ್ಪರ್ಧಿಗಳ ಸಂತಸ-   ಸಂಕಷ್ಟಗಳ ಜೊತೆ ಮುಕ್ತಾಯ ಕಂಡಿದೆ.

Advertisement

ಈ‌ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ 17 ಜನ ಸ್ಪರ್ಧಿಗಳಿದ್ದರು. ಆ ಬಳಿಕ ಇಬ್ಬರು ಮನೆಗೆ ಎಂಟ್ರಿ ಕೊಟ್ಟಿದ್ದರು. ಅಂತಿಮವಾಗಿ ಆರು ಜನರು ಮಾತ್ರ ಫಿನಾಲೆ ಹಂತಕ್ಕೆ ಬಂದಿದ್ದರು. ಅವರಲ್ಲಿ ಒಬ್ಬೊಬ್ಬರು ಹೊರಗಡೆ ಬಂದರು.

ಕೊನೆಯದಾಗಿ ವೀಕ್ಷಕರ ಮತಗಳ ಲೆಕ್ಕಾಚಾರದಲ್ಲಿ ‌ಕಾರ್ತಿಕ್ ಮಹೇಶ್ ಹಾಗೂ ಪ್ರತಾಪ್ ಉಳಿದಿದ್ದರು. ಇವರಲ್ಲಿ ಕಿಚ್ಚನ ಒಬ್ಬರ ಕೈ ಎತ್ತಿ ವಿಜೇತರ ಹೆಸರನ್ನು ರಿವೀಲ್ ಮಾಡಿದ್ದಾರೆ.

ಕಿಚ್ಚ ಸುದೀಪ್ ಅವರು ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಕನ್ನಡ ಸೀಸನ್‌ 10 ಕಾರ್ಯಕ್ರಮದ ವಿನ್ನರ್ ಎಂದು ಘೋಷಿಸಿದ್ದಾರೆ. ಆ ಮೂಲಕ ಲಕ್ಷಾಂತರ ವೀಕ್ಷಕರ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.

ನಿಧಾನವೇ ಪ್ರಧಾನವೆಂದು ಆಟ ಆರಂಭಿಸಿದ್ದ ಪ್ರತಾಪ್:
ಮಿಡ್ ವೀಕ್ ಎಲಿಮಿನೇಟ್ ನಿಂದ ಬಚಾವ್ ಆದ ಡ್ರೋನ್ ಪ್ರತಾಪ್ ಫಿನಾಲೆಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

Advertisement

ದೊಡ್ಮನೆಯಲ್ಲಿ ಆರಂಭಿಕ ದಿನಗಳಲ್ಲಿ ನಿಧಾನವಾಗಿ ಆಟವನ್ನು ಆರಂಭಿಸಿದ ಪ್ರತಾಪ್ ಹತ್ತಾರು ಟೀಕೆಗಳನ್ನು ಎದುರಿಸಿ ಒಂದು ಹಂತದಲ್ಲಿ ಕುಗ್ಗಿ ಹೋಗಿದ್ದರು. ಆದರೆ ಆ ಬಳಿಕ ಅವರ ಚಾಣಾಕ್ಷ್ಯದ ಆಟದಿಂದ ವೀಕ್ಷಕರ ಮನಗೆದಿದ್ದಾರೆ.

ಟಾಸ್ಕ್ ವೊಂದರಲ್ಲಿ ಕಣ್ಣಿಗೆ ಗಾಯ ಮಾಡಿಕೊಂಡರೂ, ಅಲ್ಲಿಂದ ಬಂದ ನಂತರ ಹೊಸ ರೀತಿಯ ಆಟದ ವೈಖರಿಯನ್ನು ತೋರಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಅಪಾರ ಬೆಂಬಲವನ್ನು ಪಡೆದುಕೊಂಡಿದ್ದ ಅವರ ಬಿಗ್ ಬಾಸ್ ಪಯಣ, ಫಿನಾಲೆಯಲ್ಲಿ ರನ್ನರ್ ಅಪ್ ಆಗಿ ಹೊರಹೊಮ್ಮಿ ಮುಕ್ತಾಯ ಕಂಡಿದೆ.

ಅಪಾರ ಬೆಂಬಲ ಗಳಿಸಿದ್ದ ಕಾರ್ತಿಕ್-ಸಂಗೀತಾ:
ಸಂಗೀತಾ ಹಾಗೂ ಕಾರ್ತಿಕ್ ಅವರಿಗೆ ಸೀಸನ್ ಆರಂಭದಿಂದಲೇ ವೀಕ್ಷಕರಿಂದ ಉತ್ತಮ ಬೆಂಬಲ ಸಿಕ್ಕಿತ್ತು. ಮೊದಲಿಗೆ ಕಾರ್ತಿಕ್ ಹಾಗೂ ಸಂಗೀತಾ ಅವರ ಸ್ನೇಹ ಅವರ ಆತ್ಮೀಯತೆ ಜನರಿಗೆ ಇಷ್ಟವಾಗಿತ್ತು. ಇಬ್ಬರ ಜಗಳ ನಡೆದರೂ ಅವರು‌ ಮೊದಲಿನಂತೆ ಸ್ನೇಹಿತರಾಗಿರಬೇಕೆಂದು ವೀಕ್ಷಕರು ಬಯಸಿದ್ದರು.

ಹೀಗೆ ಕೊನೆಯವರೆಗೂ ಕಾರ್ತಿಕ್ ಹಾಗೂ ಸಂಗೀತಾ ದೊಡ್ಮನೆಯಲ್ಲಿ ಟ್ರೋಫಿ ಗೆಲ್ಲುವ ಪ್ರಬಲ ಸ್ಪರ್ಧಿಯಾಗಿಯೇ ಗುರುತಿಸಿಕೊಂಡಿದ್ದರು.

ಆದರೆ ಸಂಗೀತಾ ಶೃಂಗೇರಿ ಅವರು ಎರಡನೇ ರನ್ನರ್ ಅಪ್ ಹೊರಹೊಮ್ಮಿದ್ದು, ಎಲ್ಲರಿಗೂ ಅಚ್ಚರಿ ತಂದಿದೆ.

ಗೆದ್ದವರಿಗೆ ಸಿಗುವ ಬಹುಮಾನ ಎಷ್ಟು:
ಬಿಗ್ ಬಾಸ್ ಸೀಸನ್‌ 10 ಪಟ್ಟವನ್ನು ತನ್ನದಾಗಿಸಿಕೊಂಡ ಕಾರ್ತಿಕ್ ಅವರು 50 ಲಕ್ಷ ನಗದನ್ನು ಪಡೆದುಕೊಂಡಿದ್ದಾರೆ. ಎಲೆಕ್ಟ್ರಿಕ್ ಬೈಕ್ ಹಾಗೂ ಮಾರುತಿ ಸುಜುಕಿ ಬ್ರೆಜಾ ಬಹುಮಾನವಾಗಿ ಸಿಕ್ಕಿತು. ಮತ್ತು ಇತರೆ ಸಣ್ಣಪುಟ್ಟ ಬಹುಮಾನ ಸಿಕ್ಕಿವೆ.

ಫಸ್ಟ್ ರನ್ನರ್ ಅಪ್ ಪ್ರತಾಪ್ ಅವರಿಗೆ 10 ಲಕ್ಷ ನಗದು ಹಾಗೂ ಎಲೆಕ್ಟ್ರಲ್ ಸ್ಕೂಟರ್ ಬಹುಮಾನವಾಗಿ ಸಿಕ್ಕಿತು.

ಟ್ರೋಫಿಗೋಸ್ಕರ ತುಂಬಾ ಕಷ್ಟಪಟ್ಟಿದ್ದೇನೆ. ಒಂದೇ ಒಂದು ದಿನದಲ್ಲಿ ದಿಸೈಡ್ ಮಾಡಿ ಬಂದೆ. ಪ್ರತಿದಿನ ಪ್ರತಿ ಟಾಸ್ಕ್ ನಲ್ಲೂ ಕಷ್ಟಪಟ್ಟಿದ್ದೇನೆ. ಇಲ್ಲಿ ನನ್ನ ನಗು ಕೋಶಗಳನ್ನು ತೋರಿಸಲು ಇಲ್ಲಿ ಸಾಧ್ಯವಾದದು ನನ್ನ ಫ್ರೆಂಡ್ಸ್ ಗಳಿಂದ. ನಿಮ್ಮ ಪ್ರೀತಿಗೆ ತಲೆಬಾಗಿಸಿಕೊಂಡು ಮುಂದಕ್ಕೆ ಹೋಗುತ್ತೇನೆ ಎಂದು ಕಾರ್ತಿಕ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next