Advertisement

BBK-11: ಬಿಗ್ ಬಾಸ್ ಮನೆಗೆ ಖ್ಯಾತ ಯೂಟ್ಯೂಬರ್ ಎಂಟ್ರಿ

06:47 PM Sep 29, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಕನ್ನಡ -11 (Bigg Boss Kannada -11) ಈ ಸೀಸನ್ ಮೊದಲ ಎರಡು ಸ್ಪರ್ಧಿಗಳು ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

Advertisement

ಹಿರಿಯ ನಟಿ ಯಮುನಾ ಶ್ರೀನಿಧಿ ಹಾಗೂ ಭವ್ಯಾ ಗೌಡ ಅವರು ಬಿಗ್ ಬಾಸ್ ಮನೆಯ ಸ್ವರ್ಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಸವಾಲುಗಳು ಏನೇ ಇದ್ದರೂ ಅದನ್ನು ಸವಾಲಾಗಿಯೇ ತೆಗೆದುಕೊಂಡು ಮುಂದೆ ಹೋಗುತ್ತೇವೆ ಎನ್ನುವ ಆತ್ಮವಿಶ್ವಾಸದ ಮಾತುಗಳನ್ನು ಸ್ಪರ್ಧಿಗಳು ಆಡಿದ್ದಾರೆ.

ಇದೀಗ ಮತ್ತೊಬ್ಬ ಸ್ಪರ್ಧಿಯಾಗಿ ಯೂಟ್ಯೂಬರ್ ಹಾಗೂ ರೀಲ್ಸ್ ಖ್ಯಾತಿಯ ಧನರಾಜ್ ಎಂಟ್ರಿ ಕೊಟ್ಟಿದ್ದಾರೆ. ಕರಾವಳಿ ಮೂಲದ ಧನರಾಜ್ ಆಚಾರ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಪಾಪ್ಯುಲರ್ ಆಗಿದ್ದಾರೆ.

ಕಾಮಿಡಿ ವಿಡಿಯೋಸ್ ಗಳಿಂದ ಸಖತ್ ಫೇಮಸ್ ಆಗಿರುವ ಧನರಾಜ್ ‘ಗಿಚ್ಚಿ ಗಿಲಿ ಗಿಲಿ-2’ ಶೋನಲ್ಲೂ ಭಾಗಿಯಾಗಿ ಖ್ಯಾತರಾಗಿದ್ದರು. ಧನರಾಜ್ ಆಚಾರ್ ‘ಅಬ್ಬಬ್ಬಾ’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದಾರೆ.

ತನ್ನ ಕುಟುಂಬದವರ ಜತೆ ಹಾಸ್ಯಮಯ ವಿಡಿಯೋಸ್ ಗಳನ್ನು ಮಾಡಿ ಖ್ಯಾತರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next