Advertisement

ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ, ದ ಕಾಶ್ಮೀರ್‌ ಫೈಲ್ಸ್‌ ಪ್ರದರ್ಶನ

11:33 PM Jan 26, 2023 | Team Udayavani |

ಹೊಸದಿಲ್ಲಿ: ಸಾಕ್ಷ್ಯಚಿತ್ರ ವಿವಾದ ಗುರುವಾರ ಹೊಸ ಮಜಲನ್ನು ಪ್ರವೇಶಿಸಿದೆ. ಹೊಸದಿಲ್ಲಿಯ ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಬಿಬಿಸಿ ವಿವಾದಾತ್ಮಕ ಸಾಕ್ಷ್ಯಚಿತ್ರ ಪ್ರದರ್ಶಿಸಿದರೆ, ಎಬಿವಿಪಿ ವಿವಿ ಕ್ಯಾಂಪಸ್‌ನಲ್ಲಿ “ದ ಕಾಶ್ಮೀರ್‌ ಫೈಲ್ಸ್‌’ ಸಿನೆಮಾ ಪ್ರದರ್ಶಿಸುವುದಾಗಿ ಘೋಷಿಸಿದೆ.

Advertisement

ಈ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಜೆಎನ್‌ಯುನಲ್ಲಿ ಎಸ್‌ಎಫ್ಐ ಕಾರ್ಯಕರ್ತರು ಅನುಮತಿ ಪಡೆಯದೇ ಸಾಕ್ಷ್ಯಚಿತ್ರ ಪ್ರದರ್ಶಿಸಲು ಮುಂದಾಗಿದ್ದರು. ಇದರಿಂದಾಗಿ ಅಲ್ಲಿ ಕಲ್ಲುತೂರಾಟ ನಡೆಸಲಾಗಿತ್ತು. ಹೊಸದಿಲ್ಲಿಯ ಮತ್ತೂಂದು ಶಿಕ್ಷಣ ಸಂಸ್ಥೆ ಜಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಕೂಡ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಯತ್ನಿಸಲಾಗಿತ್ತು.

ಇದೇ ವೇಳೆ ಮುಂಬಯಿಯ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್ ಸೋಶಿಯಲ್‌ ಸೈನ್ಸಸ್‌ನಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡುವ ಮೂಲಕ ಹೊಸದಿಲ್ಲಿ, ಹೈದಬಾದ್‌ನಲ್ಲಿ ಇರುವ ವಿವಿಗಳಿಗೆ ಬೆಂಬಲ ನೀಡಲು ಅಲ್ಲಿನ ವಿದ್ಯಾರ್ಥಿಗಳ ಕೆಲವು ಗುಂಪು ತೀರ್ಮಾನಿಸಿದೆ. ಮತ್ತೂಂದು ಬೆಳವಣಿಗೆಯಲ್ಲಿ ಕೇರಳ ರಾಜಧಾನಿ ತಿರುವನಂತಪುರದ ಬೀಚ್‌ನಲ್ಲಿ ವಿವಾದಿತ ಸಾಕ್ಷ್ಯ ಚಿತ್ರವನ್ನು ಕೇರಳ ಪ್ರದೇಶ ಕಾಂಗ್ರೆಸ್‌ ಸಮಿತಿ ಪ್ರದರ್ಶಿಸಿದೆ. ಬಳಿಕ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಜಿ.ಎಸ್‌.ಬಾಬು ಅವರು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಉಡುಪಿ : ಮದ್ಯಪಾನ ಮಾಡಿದ್ದ ವಾಹನ ಚಾಲಕನ ರಾದ್ದಾಂತ ; ಪ್ರಾಣ ಉಳಿಸಿಕೊಂಡ ಹಲವರು

Advertisement

Udayavani is now on Telegram. Click here to join our channel and stay updated with the latest news.

Next