ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಈ ಬಾರಿ ಬಾವ-ಬಾಮೈದರು ಸಚಿವರಾಗಿರುವುದು ವಿಶೇಷ.
ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರದಿಂದ 3ನೇ ಬಾರಿಗೆ ಕಾಂಗ್ರೆಸ್‌ನಿಂದ ಗೆದ್ದು ಸಚಿವರಾಗಿರುವ ಡಾ.ಎಂ.ಸಿ.ಸುಧಾಕರ್ ಹಾಗೂ ಬೆಂಗಳೂರು ನಗರ ಜಿಲ್ಲೆಯ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಗೆಲುವು ಸಾಧಿಸಿ ಸಿದ್ದರಾಮಯ್ಯ ಸಚಿವ ಸಂಪುಟದಲ್ಲಿ ಸಚಿವರಾಗಿ ಶನಿವಾರ ಪ್ರಮಾಣ ವಚನ ಸ್ಪೀಕರಿಸಿದ ಕೃಷ್ಣಬೈರೇಗೌಡ ಇಬ್ಬರು ಸಂಬಂಧಿಕರು.
ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿ ವೇಮಗಲ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ದಿ.ಸಿ.ಬೈರೇಗೌಡರ ದೊಡ್ಡ ಅಕ್ಕ ಆಗಿರುವ ಶಾಂತಮ್ಮ ಅವರು ಚಿಂತಾಮಣಿ ಕ್ಷೇತ್ರದ ಮಾಜಿ ಗೃಹ ಸಚಿವರಾದ .ಚೌಡರೆಡ್ಡಿ ಅವರ ಧರ್ಮಪತ್ನಿ ಶಾಂತಮ್ಮ ಚಿಂತಾಮಣಿ ಕ್ಷೇತ್ರದಿಂದ ನೂತನ ಸಚಿವರಾಗಿ ಆಯ್ಕೆಗೊಂಡಿರುವ ಡಾ.ಎಂ.ಸಿ.ಸುಧಾಕರ್ ರವರ ತಾಯಿ. ವೇಮಗಲ್ ಕ್ಷೇತ್ರವನ್ನು ಹಲವು ಬಾರಿ ಪ್ರತಿನಿಧಿಸಿ ಶಾಸಕರಾಗಿದ್ದ ದಿ.ಸಿ.ಬೈರೇಗೌಡರು ಕೃಷಿ ಮಂತ್ರಿಯಾಗಿ ಸಾಕಷ್ಟು ಹೆಸರುವಾಸಿ ಆಗಿದ್ದರು. ಈಗ ಬೈರೇಗೌಡರ ಸುಪುತ್ರ ಆಗಿರುವ ಸಿ.ಬಿ.ಕೃಷ್ಣಬೈರೇಗೌಡ ಹಾಗೂ ಎ.ಚೌಡರೆಡ್ಡಿ ಹಾಗೂ ಶಾಂತಮ್ಮ ಸುಪುತ್ರ ಆಗಿರುವ ಡಾ.ಎಂ.ಸಿ.ಸುಧಾಕರ್ ಇಬ್ಬರು ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿರುವುದು ವಿಶೇಷ. ಇನ್ನೂ ಮುಂದೆ ಬಾವ-ಬಾಮೈದರು ಇಬ್ಬರು ಸಿದ್ದು ಸಂಪುಟದಲ್ಲಿ ಮಿಂಚಲಿದ್ದಾರೆ.