ನಾಯಕರು ಬಿ.ಎಸ್.ಯಡಿಯೂರಪ್ಪ ಪರ ನಿಂತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದಟಛಿ ಟೀಕಾ ಪ್ರಹಾರ
ನಡೆಸಿದ್ದಾರೆ.
Advertisement
ಬಿಜೆಪಿ ನಾಯಕರಾದ ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಎನ್. ರವಿಕುಮಾರ್, ಬಿ.ಜಿ.ಪುಟ್ಟಸ್ವಾಮಿ, ಶಾಸಕ ಅಶ್ವತ್ ನಾರಾಯಣ, ಡಾ. ವಾಮನಾಚಾರ್ಯ ಮೊದಲಾದವರು ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಕರೆದು, ಶಿವರಾಮ ಕಾರಂತ ಬಡಾವಣೆ ಡಿನೋಟಿಫಿಕೇಷನ್ ಸಂಬಂಧ ಸೂಕ್ತ ಸ್ಪಷ್ಟನೆ ನೀಡುವ ಮೂಲಕ ಬಿಎಸ್‌ವೈಗೆ ಬೆಂಬಲವಾಗಿ ನಾವಿದ್ದೇವೆ ಎಂಬುದನ್ನು ತೋರಿಸಿಕೊಂಡಿದ್ದಾರೆ.
Related Articles
ಗುರುತಿಸಿರುವ ಜಮೀನಿನಲ್ಲಿ ಹೆಚ್ಚುವರಿ ಜಮೀನನ್ನು ಕೈ ಬಿಡುವ ಪ್ರಕ್ರಿಯೆ ಅನೇಕ ವರ್ಷದಿಂದ ನಡೆದುಕೊಂಡು ಬಂದಿದೆ. ಬಿಡಿಎ ಅಸ್ತಿತ್ವಕ್ಕೆ ಬರುವ ಮೊದಲು ಸಿಐಟಿಬಿ ಕೂಡ ಇದೇ ಕಾರ್ಯ ಮಾಡುತ್ತಿತ್ತು. ಬಡಾವಣೆ ನಿರ್ಮಾಣದ ಇತಿಹಾಸ ಗಮನಿಸಿದರೆ, ಹೆಚ್ಚುವರಿ ಜಮೀನು ಕೈಬಿಟ್ಟಿರುವ ಮಾಹಿತಿ ಸಿಗುತ್ತದೆ ಎಂದರು.
Advertisement
ಅರ್ಕಾವತಿ ಬಡಾವಣೆ ನಿರ್ಮಾಣದ ಸಂದರ್ಭದಲ್ಲಿ ನೋಟಿಫಿಕೇಷನ್ ಮಾಡಿರುವ ಒಟ್ಟು ಭೂಮಿಯಲ್ಲಿ ಬಿಡಿಎಬೋರ್ಡ್ ತೀರ್ಮಾನದಂತೆ 440 ಎಕರೆ ಭೂಮಿಯನ್ನು ಕೈ ಬಿಡಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ
ಅವಧಿಯಲ್ಲೂ ಜಮೀನು ಕೈ ಬಿಡಲಾಗಿದೆ. ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಕಾರ್ಯ ವಿಳಂಬಕ್ಕೂ ಡಿನೋಟಿಫಿಕೇಷನ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಮಾಹಿತಿ ನೀಡಿದರು. ಲೋಕಾಯುಕ್ತವಿದ್ದಿದ್ದರೆ ಸಿಎಂ ಜೈಲಿಗೆ ಹೋಗುತ್ತಿದ್ದರು: ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಬಿ.ಜಿ.ಪುಟ್ಟಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾತಾಂತ್ರಿಕ ವ್ಯವಸ್ಥೆಯಲ್ಲಿ ರಾಜಕಾರಣ ಮಾಡಲಿ. ಆದರೆ, ದ್ವೇಷ ರಾಜಕಾರಣ ಮಾಡುವುದು, ಅಧಿಕಾರಿಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವುದು, ಸುಳ್ಳು ಕೇಸು ದಾಖಲಿಸುವುದನ್ನು ನಿಲ್ಲಿಸಬೇಕು. ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರ ಹೀಗೆಲ್ಲ ಮಾಡುತ್ತಿದ್ದು, ಸಿದ್ದರಾಮಯ್ಯನವರು ಪ್ರಜಾಪ್ರಭುತ್ವ ವ್ಯವಸ್ಥೆಗೆ ನಾಲಾಯಕ್ ಮುಖ್ಯಮಂತ್ರಿಯಾಗಿದ್ದಾರೆ. ಡೋಂಗಿ ರಾಜಕಾರಣವನ್ನು ಅವರು ನಿಲ್ಲಿಸಬೇಕು ಎಂದು ಆರೋಪಿಸಿದರು. ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಸೇರಿ ಮಂತ್ರಿಮಂಡಲದ ಹಲವು ಸಚಿವರು ಸಾಲು ಸಾಲಾಗಿ ಜೈಲಿಗೆ ಹೋಗುತ್ತಿದ್ದರು. 2012ರಲ್ಲಿ ಡಿ.ವಿ.ಸದಾನಂದ ಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಲು ಸೂಚಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದು ನಾಲ್ಕುವರ್ಷ ಕಳೆದಿದೆ. ಸಿಐಡಿ ವರದಿಯನ್ನು ಇನ್ನು ಏಕೆ ಜನರ ಮುಂದೆ ಇಟ್ಟಿಲ್ಲ. ಮುಖ್ಯಮಂತ್ರಿಯವರು ತಮ್ಮ ಭ್ರಷ್ಟಾಚಾರವನ್ನ ಮುಚ್ಚಿ, ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಈ ರೀತಿಯ ನಾಟಕ ಆಡುತ್ತಿದ್ದಾರೆ ಎಂದು ದೂರಿದರು.