Advertisement

ಪುತ್ತೂರು: ಆಟೋ ರಿಕ್ಷಾದಲ್ಲಿ ಬಂದು ಆಸ್ಪತ್ರೆಯಿಂದ ಬ್ಯಾಟರಿ ಕಳವು

07:30 PM Jun 16, 2022 | Team Udayavani |

ಪುತ್ತೂರು: ಆಟೋ ರಿಕ್ಷಾವೊಂದರಲ್ಲಿ ಬಂದು ಜನರೇಟರ್‌ ಬ್ಯಾಟರಿ ಕಳವು ಮಾಡಿದ ಘಟನೆ ದರ್ಬೆ ಹಿತ ಆಸ್ಪತ್ರೆಯ ವಠಾರದಲ್ಲಿ ಜೂ. 14ರ ಮಧ್ಯಾಹ್ನದ ವೇಳೆ ನಡೆದಿದೆ.

Advertisement

ಹಿತ ಅಸ್ಪತ್ರೆಯ ವಠಾರದಲ್ಲಿರುವ ಆಸ್ಪತ್ರೆಯ ವಿದ್ಯುತ್‌ ಪೂರೈಕೆಗೆ ಇರಿಸಲಾಗಿದ್ದ ಜನರೇಟರ್‌ ಬಳಿ ಮಧ್ಯಾಹ್ನ ಬಂದ ವ್ಯಕ್ತಿ ಜನರೇಟರ್‌ ಕೋಣೆ ಬಾಗಿಲು ತೆರೆದು ಜನರೇಟರ್‌ ಚಾಲು ಮಾಡಲು ಇರಿಸಲಾಗಿದ್ದ ಬ್ಯಾಟರಿ ಸಂಪರ್ಕವನ್ನು ಕಳಚಿದ್ದ. ಬಳಿಕ ಆತ ಬ್ಯಾಟರಿಯನ್ನು ಆಟೋ ರಿಕ್ಷಾದಲ್ಲಿ ಹಾಕಿಕೊಂಡು ಹೋಗಿದ್ದಾನೆ. ಆಸ್ಪತ್ರೆಯ ಸಿಸಿ ಕೆಮರಾದಲ್ಲಿ ಕಳವಿನ ದೃಶ್ಯ ಸರೆಯಾಗಿದೆ. ಘಟನೆ ಕುರಿತು ಆಸ್ಪತ್ರೆಯಿಂದ ಪುತ್ತೂರು ನಗರ ಪೊಲೀಸ್‌ ಠಾಣೆಗೆ ಲಿಖೀತ ದೂರು ನೀಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next