Advertisement

ವಧುವಿಗೆ ಬ್ಯಾಟು; ಕುಡುಕರಿಗೆ ಏಟು

10:48 AM May 01, 2017 | |

ಭೋಪಾಲ್‌:ತಗೋ ತಾಯಿ ಈ ಬ್ಯಾಟು. ಗಂಡ ಏನಾದ್ರೂ ಕುಡಿದು ಬಂದು ನಿನ್ನ ಜತೆ ಜಗಳ ಆಡಿದ್ರೆ, ಇದ್ರಿಂದ ಸರಿಯಾಗಿ ನಾಲ್ಕು ಬಾರಿ ಒಳಗೆ ಕರೊRà.’ ಇದು ಮಧ್ಯ ಪ್ರದೇಶದ ಸಚಿವರೊಬ್ಬರು ನವ ವಧುಗಳಿಗೆ ಪರೋಕ್ಷವಾಗಿ ನೀಡಿದೆ ಸಲಹೆ!

Advertisement

ಸಹಜವಾಗಿ ಮದುವೆಯಲ್ಲಿ ವಧು-ವರರಿಗೆ ಏನು ಗಿಫ್ಟ್ ಕೊಡಬೇಕು ಅಂತ ಎಲ್ಲರೂ ತಲೆ ಕೆಡಿಸಿಕೊಳ್ಳುತ್ತಾರೆ. ಕೆಲವರು ವಿಭಿನ್ನವಾದ ಗಿಫ್ಟ್ ಕೊಟ್ಟು ಗಮನಸೆಳೆಯುತ್ತಾರೆ. ಆದರೆ ಮಧ್ಯ ಪ್ರದೇಶದ ಪಂಚಾಯತ್‌ರಾಜ್‌ ಸಚಿವ‌ ಗೋಪಾಲ್‌ ಭಾರ್ಗವ, ಸಾಮೂಹಿಕ ವಿವಾಹ ವೊಂದರಲ್ಲಿ 700 ನವ ವಧುಗಳಿಗೆ “ಮೋಗ್ರಿ’ (ಮರದ  ಬ್ಯಾಟ್‌) ಉಡುಗೊರೆಯಾಗಿ ನೀಡಿದ್ದಾರೆ. ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಹೆಣ್ಮಕ್ಕಳು ಬಟ್ಟೆ ತೊಳೆಯಲು “ಮೋಗ್ರಿ’ ಬಳಸುತ್ತಾರೆ.

ಸಚಿವ ಗೋಪಾಲ್‌ ಹೀಗೆ ನವವಧುಗಳಿಗೆ ನೀಡಿರುವ ಮರದ ಬ್ಯಾಟ್‌ನಲ್ಲಿ “ಕುಡುಕ ಗಂಡನನ್ನು ದಂಡಿಸಲೊಂದು ಉಡುಗೊರೆ. ಪೊಲೀಸರಿಗೆ ಪ್ರವೇಶವಿಲ್ಲ’ ಎಂದು ಬರೆದಿರುವುದು ಮತ್ತೂಂದು ವಿಶೇಷ. ಈ ಮೂಲಕ ಮಧ್ಯಪ್ರದೇಶದ ಸಚಿವ, ಗುಂಡು ಹಾಕುವ ಗಂಡಂದಿರನ್ನು ದಂಡಿಸುವ “ಸಂಪೂರ್ಣ ಸ್ವಾತಂತ್ರ್ಯ’ವನ್ನು ತಮ್ಮ ರಾಜ್ಯದ ಮಹಿಳೆಯರ ಕೈಗೆ ನೀಡಿದ್ದಾರೆ.

ಸಾಮಾನ್ಯವಾಗಿ ಬಡ ಮತ್ತು ಹಿಂದುಳಿದ ಕುಟುಂಬಗಳಲ್ಲಿ ಕುಡುಕ ಗಂಡಂದಿರ ಕಾಟ ತುಸು ಹೆಚ್ಚು. ಹೀಗಾಗಿ ಅಕ್ಷಯ ತೃತೀಯಾದ ಅಂಗವಾಗಿ ಬಡ ಮತ್ತು ಹಿಂದುಳಿದ ಸಮುದಾಯಗಳಿಗೆಂದೇ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹದಲ್ಲಿ ಸಚಿವ ಗೋಪಾಲ್‌ ಅವರು ಮಹಿಳೆಯರಿಗೆ ಈ ವಿಶೇಷ ಉಡುಗೊರೆ ನೀಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next