Advertisement
ಹವಾಮಾನ ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಅಂತರರಾಜ್ಯ ಜಲಾಶಯಗಳ ನಿರ್ವಹಣೆ ಸಂಬಂಧ ಉತ್ತಮ ಸಮನ್ವಯ ಸಾಧಿಸುವಲ್ಲಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಶಸ್ವಿಯಾಗಿದೆ. ಇದರ ಪರಿಣಾಮ ನೆರೆ ಹಾವಳಿಯ ಅನಾಹುತ ತಡೆಗಟ್ಟಲು ತಕ್ಕಮಟ್ಟಿಗೆ ಸಾಧ್ಯವಾಗಿದೆ. ಇದುವರೆಗೆ 300-400 ಮನೆ ಗಳಿಗೆ ಹಾನಿಯಾಗಿದೆ. ಆದರೆ, 2009ರಲ್ಲಿ ನೆರೆ ಹಾವಳಿಗೆ ಸುಮಾರು 200 ಜನ ಮೃತಪಟ್ಟು, ನಾಲ್ಕು ಸಾವಿರ ಮನೆಗಳು ಜಖಂ ಆಗಿದ್ದವು.
Related Articles
Advertisement
ಹೊರ ಹರಿವು 8 ದಿನ ಮೊದಲೇ ಗೊತ್ತಿತ್ತು!: ಮಹಾರಾಷ್ಟ್ರ ಮಳೆ ಯಿಂದ ಅಲ್ಲಿನ ಜಲಾಶಯ ಗಳಿಗೆ ಬರಬಹುದಾದ ಒಳ ಹರಿವಿನ ಬಗ್ಗೆ ಮುಂಚಿತವಾಗಿಯೇ ಲೆಕ್ಕಾಚಾರ ಹಾಕಲಾಗಿತ್ತು. ಎಂಟು ದಿನಗಳು ಮುಂಚಿತವಾಗಿಯೇ ಸುಮಾರು ನಾಲ್ಕೂವರೆ ಲಕ್ಷ ಕ್ಯೂಸೆಕ್ ನೀರಿನ ಹೊರಹರಿವನ್ನು ಅಂದಾಜಿಸಲಾಗಿತ್ತು. ಇದನ್ನು ಆಧರಿಸಿ ನೆರೆ ಉಂಟಾಗಬಹುದಾದ ಪ್ರದೇಶ ಗಳಲ್ಲಿನ ಜನರನ್ನು ತೆರವುಗೊಳಿಸಲಾಯಿತು. ತಲಾ 50 ಸೈನಿಕರಿರುವ ಹತ್ತು ಆರ್ಮಿ ಕಾಲಂ ಗಳನ್ನು ನಿಯೋಜಿಸಲಾಯಿತು. ರಾಷ್ಟ್ರೀಯ ಮತ್ತು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪಡೆಗಳನ್ನೂ ನಿಯೋಜಿಸಲಾಗಿದೆ. ಹಾನಿ ತಗ್ಗಿಸು ವಲ್ಲಿ ಮಾತ್ರ ಯಶಸ್ವಿಯಾಗಿದ್ದೇವೆ ಎಂದು ಕಂದಾ ಯ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ತಿಳಿಸಿದರು.
ನಮ್ಮ ಮಳೆ ಮಾಪನಗಳು ಕಾಲ, ಕಾಲಕ್ಕೆ ಮಳೆಯ ತೀವ್ರತೆಯನ್ನು ಸೂಚಿಸುತ್ತವೆ. ಮತ್ತೂಂ ದೆಡೆ, ಹವಾಮಾನ ಇಲಾಖೆ ನೀಡುವ ಮಳೆ ಮುನ್ಸೂಚನೆ ಮಾಹಿತಿ ಬರುತ್ತದೆ. ಇವೆರಡೂ ದತ್ತಾಂಶಗಳನ್ನು ವಿಶ್ಲೇಷಿಸಿ, ಅದನ್ನು ತ್ವರಿತವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಯಿತು. ಇದರಿಂದ ಹಾನಿಯ ಪ್ರಮಾಣ ತಡೆಯಲು ಸಾಧ್ಯವಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ಹೇಳಿದರು.
ಅನುಭವ ಕಲಿಸಿದ ಪಾಠ: ಅನುಭವದಿಂದ ಪಾಠ ಕಲಿತ ಕಂದಾಯ ಇಲಾಖೆಯು ಕಳೆದ ಹತ್ತು ವರ್ಷಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸ್ಥಾಪಿಸಿದೆ. ವಿಪತ್ತು ನಿರ್ವಹಣಾ ಯೋಜನೆ ರೂಪಿಸುತ್ತಿದೆ. ಪ್ರತಿ ಜಿಲ್ಲೆಗೊಬ್ಬ ಪ್ರೊಫೇಷನಲ್ ಅಧಿಕಾರಿಯನ್ನು ನೇಮಿಸಿದೆ. ಅಷ್ಟೇ ಅಲ್ಲ, ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನಿಯೋಜಿಸಿದೆ.
ಮಳೆ ಸೃಷ್ಟಿಸಿದ ಆತಂಕ: 2009ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಪ್ರಸ್ತುತ ಮಳೆ ಪ್ರಮಾಣ ಕಡಿಮೆ. ಅಂದು ಒಂದೆಡೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಉಕ್ಕಿ ಬರುತ್ತಿದ್ದರೆ, ಮತ್ತೂಂ ದೆಡೆ, ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿತ್ತು. ಹಾಗಾಗಿ, ಅದರ ಪರಿಣಾಮ ಅಧಿಕವಾಗಿತ್ತು. ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆ ನಿರೀಕ್ಷೆ ಇದ್ದು, ಮತ್ತೆ ಆತಂಕ ಸೃಷ್ಟಿಸಿದೆ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ