Advertisement

ನಿಧಿ ಆಸೆಗಾಗಿ ಹೊಳೆ ಬಸವೇಶ್ವರ ಮೂರ್ತಿ ಭಗ್ನ

03:18 PM Apr 06, 2022 | Team Udayavani |

ಕಂಪ್ಲಿ: ರಾಮಸಾಗರ ಗ್ರಾಮದ ಹೊರವಲಯದಲ್ಲಿ ಗುಡದರೂರ ಮಾಗಾಣಿ ಪ್ರದೇಶದಲ್ಲಿ ತುಂಗಭದ್ರಾ ನದಿ ತೀರದಲ್ಲಿ ಅತ್ಯಂತ ಪುರಾತನ ಹೊಳೆ ಬಸವೇಶ್ವರನ ಶಿಲಾಮೂರ್ತಿ ಯನ್ನು ಭಗ್ನ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಭಕ್ತರಲ್ಲಿ ಅಸಮಧಾನ ತಂದಿದೆ.

Advertisement

ರಾಮಸಾಗರ ಗ್ರಾಮದಿಂದ ಸುಮಾರು 3-4 ಕಿಮೀ ದೂರದ ತುಂಗಭದ್ರ ನದಿ ತೀರದಲ್ಲಿ ಗುಡದೂರು ಮಾಗಾಣಿಯ ಹಳೇ ಮಾಗಾಣಿ ಜಮೀನಿನಲ್ಲಿ ಸುಮಾರು ನೂರಾರು ವರ್ಷಗಳ ಹಿಂದಿನಿಂದ ಬಸವೇಶ್ವರ ಶಿಲಾ ಮೂರ್ತಿ ಇದ್ದು, ನದಿ ತೀರದಲ್ಲಿರುವುದರಿಂದ ಅದನ್ನು ಹೊಳೆ ಬಸವೇಶ್ವರ ಎಂದೇ ಕರೆಯುತ್ತಿದ್ದರು. ರಾಮಸಾಗರ, ನಂ10 ಮುದ್ದಾಪುರ, ಕಂಪ್ಲಿ ಸೇರಿದಂತೆ ಅನೇಕ ಗ್ರಾಮಗಳ ಜನರು ಇಲ್ಲಿಗೆ ಭೇಟಿ ನೀಡಿ ಬಸವೇಶ್ವರನಿಗೆ ಪೂಜೆ ಸಲ್ಲಿಸುತ್ತಿದ್ದರು. ವಿಶೇಷವಾಗಿ ಮಳೆಗಾಲದಲ್ಲಿ ಹೊಳೆ ತುಂಬಿ ಹರಿಯುವ ಸಂದರ್ಭದಲ್ಲಿ ನೂರಾರು ಜನರು ಭೇಟಿ ನೀಡಿ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದರು. ಕಳೆದ ನಾಲ್ಕೈದು ದಿನಗಳ ಹಿಂದೆ ನಂ.10 ಮುದ್ದಾಪುರದ ಭಕ್ತರು ಪೂಜೆಗೆಂದು ಹೋದಾಗ ಬಸವಣ್ಣನ ಮೂರ್ತಿಯನ್ನು ಯಾರೋ ಕಿಡಿಗೇಡಿಗಳು ನಿಧಿ ಆಸೆಗಾಗಿ ಭಗ್ನಗೊಳಿಸಿರುವುದು ಕಂಡು ಬಂದಿದೆ.

ಬಸವಣ್ಣನ ಕೋಡು, ಕಿವಿ ಸೇರಿದಂತೆ ತುಂಡು ಮಾಡಿ ಹಾಕಿದ್ದಾರೆ. ಇಂಥ ದುಷ್ಕೃತ್ಯವನ್ನು ನಡೆಸಿರುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next