Advertisement

ಯಾವುದೇ ಪೂರ್ವ ತಯಾರಿ ಇಲ್ಲದೆ ಸರಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ : ಬಸವರಾಜ ಹೊರಟ್ಟಿ

05:01 PM Dec 24, 2020 | Suhan S |

ಹುಬ್ಬಳ್ಳಿ: ಯಾವುದೇ ಪೂರ್ವ ತಯಾರಿ ಇಲ್ಲದೆ ಸರಕಾರ ನೈಟ್ ಕರ್ಫ್ಯೂ ಜಾರಿ ಮಾಡಿದೆ. ನಿಗದಿ ಮಾಡಿರುವ ಸಮಯ ನೋಡಿದರೆ ನೈಟ್ ಕರ್ಫ್ಯೂ ಅಗತ್ಯವಿರಲಿಲ್ಲ ಎಂದು ವಿಧಾನಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಸರಕಾರದ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.

Advertisement

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನೈಟ್ ಕರ್ಫ್ಯೂ ಘೋಷಣೆ ಮಾಡುವಾಗ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಇತ್ತು. ನಂತರದಲ್ಲಿ ಸಮಯ ಬದಲಿಸಲಾಗಿದೆ. ಈ ಬೆಳವಣಿಗೆ ನೋಡಿದರೆ ಸರಕಾರ ಯಾವುದೇ ಪೂರ್ವ ತಯಾರಿ ಇಲ್ಲದೆ ಹಾಗೂ ಸ್ಪಷ್ಟತೆ ಇಲ್ಲದೆ ನೈಟ್ ಕರ್ಫ್ಯೂ ಜಾರಿ ಮಾಡುತ್ತಿದೆ ಎನ್ನುವಂತಾಗಿದೆ. ಸರಕಾರದ ನಡೆಯಿಂದ,  ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಕ್ರಿಸ್ಮಸ್ ವೇಳೆ ಕರ್ಫ್ಯೂ ಜಾರಿ ಮಾಡಲಾಗಿದೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ಸರಕಾರ ಇಂತಹ ನಿರ್ಧಾರಗಳನ್ನು ಕೈಗೊಳ್ಳುವಾಗ ವಿಪಕ್ಷಗಳ ಸಲಹೆಗಳನ್ನು ಕೇಳಬೇಕು. ಆದರೆ ಇದುವರೆಗೆ ಮಾರ್ಚ್ ತಿಂಗಳಲ್ಲಿ ಒಂದು ಸಭೆ ನಡೆದಿರುವುದು ಬಿಟ್ಟರೆ ಯಾವುದೇ ಸಭೆ ಮಾಡಿಲ್ಲ. ಇದೀಗ ನೈಟ್ ಕರ್ಫ್ಯೂ ವಿಚಾರದಲ್ಲಿ ಸಲಹೆ ಪಡೆಯುವ ಕೆಲಸ ಆಗಿಲ್ಲ. ಯಾವುದೋ ಒತ್ತಡಕ್ಕೆ ಮಣಿದು ಸರಕಾರ ಸಮಯ ಬದಲಾಯಿಸಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ಶಾಲಾ ಆರಂಭದ ಕುರಿತು ಪ್ರತಿಕ್ರಿಯಿಸಿದ ಅವರು, ಜನವರಿ 1 ರಿಂದ ಶಾಲೆಗಳನ್ನು ಆರಂಭಿಸಬೇಕು ಎಂದು ಹೇಳಿದ್ದೇನೆ. ಶಾಲೆಗಳನ್ನು ಆರಂಭಿಸದಿದ್ದರೆ ಶಾಲೆ ಹಾಗೂ ಮಕ್ಕಳ ನಡುವಿನ ಸಂಬಂಧ ಹದಗೆಟ್ಟು ಹೋಗಲಿದೆ. ಹೊರ ದೇಶದಲ್ಲಿ ಎರಡನೇ ಅಲೆ ಇದೆ ಎಂದು ಹೇಳಲಾಗುತ್ತಿದೆ. ಒಂದು ವಾರ ಶಾಲೆ ನಡೆಸಿ ಮುಂದೆ ನಿರ್ಧಾರ ತೆಗೆದುಕೊಳ್ಳಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next