Advertisement

ಸಂಪುಟ ಕುತೂಹಲ ಉತ್ಕಟ; ನಾಳೆ ಬೆಳಗ್ಗೆ ತಪ್ಪಿದರೆ ಮೇ 16ರಂದು ಮುಹೂರ್ತ

02:01 AM May 11, 2022 | Team Udayavani |

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯ ಸಮಯ ಬಂದೇ ಬಿಟ್ಟಿದೆ. ಗುರುವಾರವೇ ಈ ಪ್ರಕ್ರಿಯೆ ನಡೆಯಲಿದ್ದು, ತಪ್ಪಿದರೆ ಮೇ 16ರಂದು ಆಗಲಿದೆ. ರಾಜ್ಯ ಸಚಿವ ಸಂಪುಟ ಸಭೆ ಗುರುವಾರಕ್ಕೆ ಮುಂದೂಡಿಕೆಯಾದ ಬೆನ್ನಲ್ಲೇ ಈ ಸುಳಿವು ಸಿಕ್ಕಿದ್ದು, ಆಕಾಂಕ್ಷಿಗಳು ಮತ್ತಷ್ಟು ಉಸಿರು ಬಿಗಿಹಿಡಿಯುವಂತೆ ಮಾಡಿದೆ.

Advertisement

ದಿಲ್ಲಿಗೆ ತೆರಳಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವರಿಷ್ಠರನ್ನು ಇನ್ನೂ ಭೇಟಿ ಮಾಡಿಲ್ಲ. ಬುಧವಾರ ಬೆಳಗ್ಗೆ ಅವರು ಬೆಂಗಳೂರಿಗೆ ವಾಪಸಾಗಲಿ ದ್ದಾರೆ. ಆದರೆ ಬುಧವಾರದ ಸಂಪುಟ ಸಭೆಯನ್ನು ಗುರುವಾರಕ್ಕೆ ಮುಂದೂಡಿರುವುದು ಆಕಾಂಕ್ಷಿಗಳಲ್ಲಿ ನಿರೀಕ್ಷೆ ಗರಿಗೆದರಿಸಿದ್ದು, ಕೊನೆಯ ಕ್ಷಣದಲ್ಲಿ ವರಿಷ್ಠರಿಂದ ಸಂಪುಟ ಪುನಾರಚನೆ ಸಂದೇಶ ರವಾನೆಯಾಗಲಿದೆ ಎನ್ನಲಾಗಿದೆ.

ಬುಧವಾರ ಬೆಂಗಳೂರಿನಲ್ಲಿ ಯಾವುದೇ ತುರ್ತು ಕಾರ್ಯಕ್ರಮಗಳಿಲ್ಲ. ಆದರೂ ಎರಡು ಬಾರಿ ಮುಂದೂಡಲ್ಪಟ್ಟಿದ್ದ ಸಂಪುಟ ಸಭೆಯನ್ನು ಮತ್ತೆ ಗುರುವಾರ ಮಧ್ಯಾಹ್ನ 12ಕ್ಕೆ ಮುಂದೂಡ ಲಾಗಿದೆ. ಅಂದೇ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಾಗಲಿದೆ; ಆಗದೆ ಇದ್ದರೆ ಮೇ 16ರಂದಂತೂ ಖಚಿತ ಎನ್ನಲಾಗಿದೆ.

ಮುಂದೂಡಿದ್ದೇಕೆ?
ಮೇ 5ರಂದು ಕರೆದಿದ್ದ ಸಚಿವ ಸಂಪುಟ ಸಭೆಯನ್ನು ಮೇ 11ರ ಮಧ್ಯಾಹ್ನ 12ಕ್ಕೆ ಮುಂದೂಡಲಾಗಿತ್ತು. ಬಳಿಕ ಸಿಎಂ ಬೊಮ್ಮಾಯಿ ದಿಲ್ಲಿಗೆ ತೆರಳುವ ಮುನ್ನ, ಮೇ 11ರಂದು ಬೆಳಗ್ಗೆ ನಡೆಯಲಿದ್ದ ಸಭೆಯನ್ನು ಸಂಜೆ 4ಕ್ಕೆ ಮುಂದೂಡಲಾಯಿತು. ಬುಧವಾರ ಬೆಳಗ್ಗೆ ಸಂಪುಟ ವಿಸ್ತರಣೆ ಆಗಲಿದ್ದು, ಅದಕ್ಕಾಗಿಯೇ ಸಭೆ ಮುಂದೂಡಲಾಗಿದೆ ಎನ್ನಲಾಯಿತು. ಮತ್ತೆ ಬುಧವಾರ ಸಂಜೆ 4ಕ್ಕೆ ನಡೆಯಬೇಕಿದ್ದ ಸಭೆಯನ್ನು ಗುರುವಾರ ಮಧ್ಯಾಹ್ನ 12ಕ್ಕೆ ಮುಂದೂಡಲಾಗಿದ್ದು, ಸಂಪುಟ ವಿಸ್ತರಣೆಯೇ ಕಾರಣ ಎಂಬ ಮಾತು ಕೇಳಿ ಬರುತ್ತಿದೆ.

ಮಾಂಡವೀಯ ಭೇಟಿ
ರಾಜ್ಯದಲ್ಲಿ ನ. 2ರಿಂದ 4ರ ವರೆಗೆ ನಡೆಯುವ ಇನ್ವೆಸ್ಟ್‌ ಕರ್ನಾಟಕ 2022 ಸಮಾವೇಶ ಸಂಬಂಧ ವಿವಿಧ ದೇಶಗಳ ರಾಯಭಾರಿಗಳು ಮತ್ತು ಹೈಕಮಿಷನರ್‌ಗಳ ಜತೆ ಸಭೆ ನಡೆಸುವುದಕ್ಕಾಗಿ ಮಂಗಳವಾರ ದಿಲ್ಲಿಗೆ ತೆರಳಿದ್ದ ಸಿಎಂ ಬೊಮ್ಮಾಯಿ ಕೇಂದ್ರ ಸಚಿವ ಮನಸುಖ ಮಾಂಡವೀಯ ಅವರನ್ನು ಮಾತ್ರ ಭೇಟಿ ಮಾಡಿದರು. ಸಂಪುಟ ವಿಸ್ತರಣೆ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಅಮಿತ್‌ ಶಾ ಅವರನ್ನು ಭೇಟಿ ಮಾಡಿಲ್ಲ ಎಂದು ಸ್ವತಃ ಸಿಎಂ ಹೇಳಿದ್ದಾರೆ.

Advertisement

ಎಲ್ಲವೂ ನಿಗೂಢ
ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಸಂಪುಟ ಪುನಾರಚನೆ ಆಗಬೇಕೆಂಬ ಬೇಡಿಕೆ ಇದ್ದರೂ ಸಂಪುಟ ವಿಸ್ತರಣೆಯೋ ಪುನಾರಚನೆಯೋ ಎನ್ನುವ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲ. ಹಾಲಿ ಸಚಿವರಲ್ಲಿ ಆತಂಕ ಮನೆ ಮಾಡಿದ್ದರೆ, ಆಕಾಂಕ್ಷಿಗಳಲ್ಲಿ ನಿರೀಕ್ಷೆಗಳು ಗರಿಗೆದರಿವೆ.

ಗುರುವಾರದ ಅಚ್ಚರಿ
ಗುರುವಾರ ಸ್ಥಾನ ಆಕಾಂಕ್ಷಿಗಳು, ಹಾಲಿ ಸಚಿವ ರಿಗೆ ಅಚ್ಚರಿಯ ಸುದ್ದಿ ಸಿಗುವುದು ಬಹು ತೇಕ ಖಚಿತ. ಸಿಎಂ ಬೊಮ್ಮಾಯಿ ಅವರು ದಿಲ್ಲಿ ಭೇಟಿಯ ಸಂದರ್ಭ ವರಿಷ್ಠ ರನ್ನು ಭೇಟಿ ಮಾಡದೇ ಇದ್ದರೂ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕುರಿತು ಈಗಾಗಲೇ ಹಲವಾರು ಬಾರಿ ಅವರ ಜತೆ ಚರ್ಚೆ ನಡೆಸಿದ್ದಾರೆ. ಅಲ್ಲದೆ ಚುನಾವಣೆಯನ್ನು ಗಮನ ದಲ್ಲಿ ಇರಿಸಿಕೊಂಡು ವರಿಷ್ಠರು ಸಚಿವ ಸಂಪುಟ ಪುನಾರಚನೆಯ ಆಲೋಚನೆ ಇರಿಸಿ ಕೊಂಡಿದ್ದು, ಕೊನೆಯ ಕ್ಷಣದಲ್ಲಿ ಅಂತಿಮ ಪಟ್ಟಿಯನ್ನು ಕಳುಹಿಸಿ ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next