Advertisement

ಭ್ರಷ್ಟಾಚಾರ ಆರೋಪ ಮಾಡಿದವರಿಗೆ ಸವಾಲೆಸೆದ ಬಸವರಾಜ ಹೊರಟ್ಟಿ

09:45 AM Jun 13, 2022 | Team Udayavani |

ಹುಬ್ಬಳ್ಳಿ: ಕಳೆದ 42 ವರ್ಷಗಳಿಂದ ಶಿಕ್ಷಕರು ತೋರಿದ ಪ್ರೀತಿ, ವಿಶ್ವಾಸ ಹಾಗೂ ಪ್ರೋತ್ಸಾಹದ ಆಧಾರದಲ್ಲಿ ಹೇಳುತ್ತೇನೆ, ಈ ಬಾರಿಯ ಒಟ್ಟು ಮತದಾನದಲ್ಲಿ ಶೇ.70 ಮತಗಳು ನನಗೆ ಬರಲಿವೆ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ತಿಳಿಸಿದರು.

Advertisement

ಸೋಮವಾರ ಬೆಳಿಗ್ಗೆ ಇಲ್ಲಿನ ದೇಶಪಾಂಡೆ ನಗರದ ರೋಟರಿ ಶಾಲೆಯಲ್ಲಿ ಮತಕೇಂದ್ರಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಕರು ಮತ್ತು ಬಿಜೆಪಿ ಬಲದಿಂದ ಕ್ಷೇತ್ರದ ಎಲ್ಲಾ ಕಡೆಗೂ ಉತ್ತಮ ವಾತಾವರಣ ಇದೆ. ಶಿಕ್ಷಕರ ಉತ್ಸಾಹ, ನಮ್ಮ ಲೆಕ್ಕಾಚಾರದಡಿ ಹೇಳುವುದಾದರೆ, ಚಲಾವಣೆಯಾಗುವ ಒಟ್ಟು ಮತಗಳಲ್ಲಿ ಶೇ.70 ನನಗೆ ಬರುವ ಪೂರ್ಣ ವಿಶ್ವಾಸವಿದೆ ಎಂದರು.

ಇದನ್ನೂ ಓದಿ:ಬೆಂಗಳೂರಿನಲ್ಲಿ ಡ್ರಗ್ ಪಾರ್ಟಿ: ನಟಿ ಶ್ರದ್ಧಾ ಕಪೂರ್ ಸಹೋದರ ಸಿದ್ದಾಂತ್ ಕಪೂರ್ ಬಂಧನ

ವಿರೋಧಿಗಳು ಹತಾಶರಾಗಿದ್ದು, ನನ್ನ ವಿರುದ್ಧ ಇಲ್ಲಸಲ್ಲದ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. 42 ವರ್ಷಗಳಲ್ಲಿ ಒಬ್ಬರೇ ಒಬ್ಬ ಶಿಕ್ಷಕನಿಂದ ಒಂದು ರೂಪಾಯಿ ಪಡೆದಿದ್ದೇನೆ ಎಂದು ಸಾಬೀತು ಪಡಿಸಿದರೆ ಅವರು ಹೇಳಿದಂತೆ ಕೇಳುತ್ತೇನೆ ಎಂದು ಸವಾಲು ಹಾಕಿದರಲ್ಲದೆ, ಭ್ರಷ್ಟಾಚಾರದ ವಿಷಯದಲ್ಲಿ ಸಣ್ಣ ಕಪ್ಪು ಚುಕ್ಜೆಯೂ ನನಗೆ ಇಲ್ಲ. ವಿರೋಧಿಗಳ ಕ್ಷುಲ್ಲಕ ಟೀಕೆಗಳಿಗೆ ಚುನಾವಣೆ ಫಲಿತಾಂಶ ಉತ್ತರ ನೀಡಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next