Advertisement

ಸರ್ಕಾರಿ ಗೌರವದ ನಂತರವೂ ಶ್ರೀಗಳ ದರ್ಶನ ಇರಲಿದೆ: ಸಿಎಂ ಬೊಮ್ಮಾಯಿ

03:26 PM Jan 03, 2023 | Team Udayavani |

ವಿಜಯಪುರ: ಸಿದ್ಧೇಶ್ವರ ಶ್ರೀಗಳಿಗೆ ಸರ್ಕಾರಿ ಸಕಲ ಗೌರವ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ. ಶಿಷ್ಟಾಚಾರದಂತೆ ಸೂರ್ಯಾಸ್ತದ ಒಳಗಾಗಿ ಸರ್ಕಾರಿ ಗೌರವ ಸಲ್ಲಿಸಬೇಕಿದೆ. ಹೀಗಾಗಿ ಸಂಜೆ 5.15 ಗೌರವ ಸಲ್ಲಿಕೆ ಆರಂಭಗೊಳ್ಳಲಿದೆ. ಸರ್ಕಾರಿ ಗೌರವ ಮುಗಿದ ಮೇಲೆಯೂ ಸೈನಿಕ ಶಾಲೆಯಲ್ಲೇ ಎಲ್ಲ ಭಕ್ತರಿಗೆ ದರ್ಶನ ವ್ಯವಸ್ಥೆ ಮುಂದುವರೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

Advertisement

ಮಂಗಳವಾರ ನಗರದ ಸೈನಿಕ ಶಾಲೆಯ ಆವರದಲ್ಲಿ ಸಿದ್ದೇಶ್ವರ ಶ್ರೀಗಳ ಅಂತಿಮ‌ ದರ್ಶನದ ಬಳಿಕ ಭಕ್ತರನ್ನು ಉದ್ದೇಶಿ ಮಾತನಾಡಿದ ಅವರು, ಶ್ರೀಗಳ ಅಂತಿಮ ದರ್ಶನಕ್ಕೆ ನಿರೀಕ್ಷೆ ಮೀರಿ ಭಕ್ತರು ಆಗಮಿಸುತ್ತಿದ್ದೀರಿ. ಸರ್ಕಾರಿ ಗೌರವದ ನಂತರವೂ ಭಕ್ತರ ಸಂಖ್ಯೆ ಹೆಚ್ಚಿದರೂ ಶ್ರೀಗಳ ಅಂತಿಮ ದರ್ಶನದ ಅವಧಿಯನ್ನು ವಿಸ್ತರಿಸಲಾಗುತ್ತದೆ. ಹೀಗಾಗಿ ಭಕ್ತರು ಧಾವಂತ, ಆತಂಕ ಪಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಕ್ತರಿಗೆ ಸಮಜಾಯಿಷಿ ನೀಡಿದರು.

ಇದನ್ನೂ ಓದಿ:ತಣ್ಣೀರುಬಾವಿ ಬೀಚ್‌ ಬಳಿ ಬಾಲಕನಿಗೆ ಲಾಠಿ ಚಾರ್ಜ್‌ ಮಾಡಿದ ಪೊಲೀಸ್‌ ಪೇದೆ ಅಮಾನತು

ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಆಗಮಿಸುತ್ತಿರುವ ಭಕ್ತರು ಶ್ರೀಗಳು ಪ್ರತಿಪಾದಿಸುತ್ತಿದ್ದ ಶಾಂತಿ, ಸಂಯಮ, ಶಿಸ್ತು ಪಾಲಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next