ಬೆಂಗಳೂರು: ಬಿಬಿಎಂಪಿಯ ಸಕಾಲಿಕ ಕ್ರಮ ಕೈಗೊಂಡಿದ್ದರೆ ಯುವತಿಯ ಜೀವವನ್ನು ಉಳಿಸಬಹುದಿತ್ತು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬೆಂಗಳೂರಿನ ಕೆ.ಆರ್.ವೃತ್ತದ ಬಳಿ ಜಲಾವೃತಗೊಂಡಿದ್ದ ಅಂಡರ್ಪಾಸ್ನೊಳಗೆ ಕಾರು ಮುಳುಗಿ ಯುವತಿ ಸಾವನ್ನಪ್ಪಿರುವ ಕುರಿತು ಪ್ರತಿಕ್ರಿಯಿಸಿದರು. ಭಾರೀ ಮಳೆ ಮತ್ತು ಅಂಡರ್ಪಾಸ್ ಜಲಾವೃತ ಈ ಹಿಂದೆಯೂ ಸಂಭವಿಸಿದೆ ಆದರೆ ಈ ಹಿಂದೆ ಯಾವುದೇ ಸಾವು ಸಂಭವಿಸಿದ್ದು ನನಗೆ ನೆನಪಿಲ್ಲ ಎಂದರು.
ಸಾವು ತಪ್ಪಿಸಬಹುದಿತ್ತು ಮತ್ತು ಕೆಲವು ಲೋಪಗಳಿವೆ, ಅದನ್ನು ಪರಿಶೀಲಿಸಬೇಕಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದರು.
Related Articles
ಕೆ.ಆರ್. ಸರ್ಕಲ್ ಅಂಡರ್ಪಾಸ್ನಲ್ಲಿ ತುಂಬಿದ್ದ ನೀರಿನಲ್ಲಿ ಇನ್ಫೋಸಿಸ್ನಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶದ ತೇಲಾಪೋರಲು ಗ್ರಾಮದ ಭಾನುರೇಖಾ (22) ನೀರಿನಲ್ಲಿ ಮುಳುಗಿ ಅಸುನೀಗಿದ್ದರು.