Advertisement

ಬಸವರಾಜ ಬೊಮ್ಮಾಯಿ ಆದ ನಾನು… : ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರತಿಜ್ಞಾವಿಧಿ ಸ್ವೀಕಾರ

11:01 AM Jul 28, 2021 | Team Udayavani |

ಬೆಂಗಳೂರು : ರಾಜಭವನದ ಆವರಣದಲ್ಲಿ ಇಂದು(ಬುಧವಾರ, ಜುಲೈ 28) ನಡೆದ ಪ್ರಮಾಣ ವಚನ ಸರಳ ಸಮಾರಂಭ  ಕಾರ್ಯಕ್ರಮದಲ್ಲಿ ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,  ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್ ಅವರಿಂದ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

Advertisement

ಇನ್ನು, ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ. ಎಸ್. ಯಡಿಯೂರಪ್ಪ, ಮುರುಗೇಶ್ ನಿರಾಣಿ, ಅವರನ್ನೊಳಗೊಂಡು, ಪಕ್ಷದ ಎಲ್ಲಾ ಪ್ರಮುಖ ನಾಯಕರುಗಳು ಹಾಗೂ ಬೊಮ್ಮಾಯಿ ಕುಟುಂಬಸ್ಥರು ಭಾಗಿಯಾಗಿದ್ದರು.

ಇದನ್ನೂ ಓದಿ : ಸಾರ್ವಜನಿಕರಲ್ಲಿ ವಿಶ್ವಾಸ ಬೆಳೆಸುವ ಯತ್ನ: 400 ಕಿ.ಮೀ. ಸೈಕಲ್‌ ತುಳಿದ ವೈದ್ಯ ಜೋಡಿ!

ಪ್ರಮಾಣವಚನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಸಂಪುಟ ರಚನೆಗೆ ಆಷಾಡ ಮುಗಿಯುವ ತನಕ ಕಾಯುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು, ಪ್ರಮಾಣ ವಚನ ಸ್ವೀಕಾರ ಮಾಡಿದ ಬಸವರಾಜ ಬೊಮ್ಮಾಯಿ ಇಂದು(ಬುಧವಾರ, ಜುಲೈ 28) ಸಂಜೆ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಒಳಗೊಂಡು ಪ್ರಮುಖ ವರಿಷ್ಠರನ್ನು ಭೇಟಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

Advertisement

ನೂತನ ಮುಖ್ಯಮಂತ್ರಿ ಪರಿಚಯ 

  • ಜನನ-1960 nತಂದೆ- ಮಾಜಿ ಮುಖ್ಯಮಂತ್ರಿ ಎಸ್‌.ಆರ್‌. ಬೊಮ್ಮಾಯಿ, ತಾಯಿ- ಗಂಗಮ್ಮ ಪತ್ನಿ- ಚನ್ನಮ್ಮ ಬಿ. ಬೊಮ್ಮಾಯಿ
  • ಪುತ್ರ- ಭರತ, ಪುತ್ರಿ- ಆದಿತಿ
  • ವಿದ್ಯಾಭ್ಯಾಸ : ಹುಬ್ಬಳ್ಳಿಯ ರೋಟರಿ ಇಂಗ್ಲಿಷ್‌ ಮಾಧ್ಯಮ ಶಾಲೆ ಮತ್ತು ಪಿ.ಸಿ. ಜಾಬಿನ್‌ ವಿಜ್ಞಾನ ಕಾಲೇಜು
  • ಎಂಜಿನಿಯರಿಂಗ್‌ (ಮೆಕಾನಿಕಲ್‌)- ಬಿ.ವಿ. ಭೂಮರೆಡ್ಡಿ ಕಾಲೇಜು
  • ಉದ್ಯೋಗ ಪ್ರಾರಂಭ: 1983-85ರವರೆಗೆ ಪುಣೆಯ ಟೆಲ್ಕೋ ಕಂಪೆನಿಯಲ್ಲಿ nಸಾಮಾಜಿಕ ಮತ್ತು ರಾಜಕೀಯ ಸೇವೆ 2007ರಲ್ಲಿ ಧಾರವಾಡದಿಂದ ನರಗುಂದವರೆಗೆ 21 ದಿನಗಳ ರೈತರೊಂದಿಗೆ ಬೃಹತ್‌ ಪಾದಯಾತ್ರೆ
  • 1993ರಲ್ಲಿ ಹುಬ್ಬಳ್ಳಿಯಲ್ಲಿ ಯುವ ಜನತಾದಳದ ಐತಿಹಾಸಿಕ ಬೃಹತ್‌ ರ್ಯಾಲಿ
  • 1995ರಲ್ಲಿ ಈದ್ಗಾ ಮೈದಾನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ನೇತೃತ್ವ
  • 1995ರಲ್ಲಿ ಜನತಾದಳದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ
  • 1996-97ರಲ್ಲಿ ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ರಾಜಕೀಯ ಕಾರ್ಯದರ್ಶಿಯಾಗಿ ನೇಮಕ
  • 1997 ಹಾಗೂ 2003ರಲ್ಲಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆ
  • 2008ರಲ್ಲಿ ಶಿಗ್ಗಾಂವಿಯಿಂದ ಶಾಸಕರಾಗಿ ಆಯ್ಕೆ
  • 2008-2013ರವರೆಗೆ ಜಲಸಂಪನ್ಮೂಲ ಸಚಿವರಾಗಿ ಸೇವೆ
  • 2013ರಲ್ಲಿ ಶಾಸಕರಾಗಿ ಮತ್ತೆ ಆಯ್ಕೆ
  • 2018ರಲ್ಲಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆ
  • 2018ರಿಂದ ಗೃಹ ಸಚಿವರಾಗಿ ಸೇವೆ

ಇದನ್ನೂ ಓದಿ : ಉಸ್ತುವಾರಿ ಸಚಿವರಿಗೆ ಮುಖ್ಯಮಂತ್ರಿ ಪಟ್ಟ ಉಡುಪಿ ಜಿಲ್ಲೆಗೆ ಜುಲೈ ತಿಂಗಳ ಜಾಕ್‌ಪಾಟ್‌!

Advertisement

Udayavani is now on Telegram. Click here to join our channel and stay updated with the latest news.

Next