Advertisement

ವರಿಷ್ಠರು ಕರೆದಾಗ ದೆಹಲಿಗೆ ಹೋಗುತ್ತೇನೆ..: ಸಂಪುಟ ವಿಸ್ತರಣೆ ಗುಟ್ಟು ಬಿಟ್ಟುಕೊಡದ ಸಿಎಂ

11:47 AM Jan 30, 2022 | Team Udayavani |

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಕುರಿತು ಸಾರ್ವಜನಿಕವಾಗಿ ಚರ್ಚೆ ಮಾಡಲು ಹೋಗುವುದಿಲ್ಲ. ವರಿಷ್ಠರು ಕರೆದಾಗ ದೆಹಲಿಗೆ ಹೋಗುತ್ತೇನೆ. ವಿಸ್ತರಣೆ ಸಲುವಾಗಿ ಯಾವಾಗ ಕರೆಯುತ್ತಾರೋ ಆಗ ಹೋಗಲು ಸಿದ್ದನಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವರ್ಷದ ಪ್ರಾರಂಭದಲ್ಲಿ ಎಲ್ಲಾ ಸಂಸದರ ಭೇಟಿ ಮಾಡುವುದು ವಾಡಿಕೆ. ಹೀಗಾಗಿ ಅದನ್ನು ಆದಷ್ಟು ಬೇಗ ಎಲ್ಲಾ ಸಂಸದರ ಜೊತೆ ದೆಹಲಿಯಲ್ಲಿ ಸಭೆ ಮಾಡುತ್ತೇನೆ ಎಂದರು

ಇದನ್ನೂ ಓದಿ:ದೇಶದ ವಯಸ್ಕ ಜನಸಂಖ್ಯೆ ಶೇ.75ರಷ್ಟು ಜನರಿಗೆ ಲಸಿಕೆ ಪೂರ್ಣ: ಅಭಿನಂದನೆ ಸಲ್ಲಿಸಿದ ಪ್ರಧಾನಿ

ಆರು ತಿಂಗಳ ಸರ್ಕಾರದ ಸಾಧನೆ ಬಗ್ಗೆ ಸಿದ್ದರಾಮಯ್ಯ ಟೀಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ, “ಸಿದ್ದರಾಮಯ್ಯರಿಂದ ಬೇರೆ ಏನು ನಿರೀಕ್ಷೆ ಮಾಡಲುಕೆ ಸಾಧ್ಯ. ಜನ ಹಿತಕ್ಕಾಗಿ ಏನಾಗಿದೆಂದು ನೋಡಬೇಕು. ಅದು ಬಿಟ್ಟು ಮೊಸರಲ್ಲಿ ಹುಡುಕುವ ಕೆಲಸ ಮಾಡಬಾರದು. ಪ್ರಣಾಳಿಕೆಯಲ್ಲಿ ಶೇ90 ಮಾಡಿದ್ದೀವಿ ಎನ್ನುತ್ತಾರೆ. ಆದರೆ ಎಲ್ಲಿ ಮಾಡಿದ್ದಾರೆ? ಅದಕ್ಕಾಗಿ ಅವರನ್ನು ಜನರು ತಿರಸ್ಕಾರ ಮಾಡಿರುವುದು. ಅವರ ಪ್ರಣಾಳಿಕೆಯ ಯೋಜನೆಗಳು ಘೋಷಣೆಯಷ್ಟೇ, ಅನುಷ್ಠಾನವಾಗಿಲ್ಲ. ಯಾವ ಕಾರ್ಯಕ್ರಮ ಯಾವ ರೀತಿ ಅನುಷ್ಠಾನ ಮಾಡಿ, ಯಾರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಅರಿವು ನಮಗೆ ಇದೆ, ಈ ದಿಕ್ಕಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next