Advertisement

ಕ್ಷೇತ್ರದ ಜನತೆಯ ಎದುರು ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಚಿರಸ್ಮರಣೀಯ : ಸಿಎಂ ಬೊಮ್ಮಾಯಿ

10:53 PM Jan 28, 2023 | Team Udayavani |

ಹಾವೇರಿ: ನಿಮ್ಮ ಆಶೀರ್ವಾದದಿಂದ ರಾಜ್ಯ ಮುನ್ನಡೆಸುವ ಸೇವೆ ಮಾಡುತ್ತಿದ್ದು, ಈ ಮಣ್ಣಿನ ಋಣ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಮತ್ತೊಂದು ಜನ್ಮ ಇದ್ದರೆ ಈ ಮಣ್ಣಿನಲ್ಲಿ ಆಗಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

Advertisement

ಶಿಗ್ಗಾವಿ ಪಟ್ಟಣದಲ್ಲಿ ಶನಿವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ 63ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಂಗೀತ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾನು ಜೀವನದಲ್ಲಿ ಇವರೆಗೂ ಸಾರ್ವಜನಿಕವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಿಲ್ಲ. ಇವತ್ತು ಆಚರಿಸಿಕೊಂಡಿದ್ದು, ಇದೊಂದು ಅಮೃತ ಘಳಿಗೆಯಾಗಿದೆ. ನಿಮ್ಮ ಆಶೀರ್ವಾದ, ಹಾರೈಕೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ನಿಮ್ಮೊಂದಿಗೆ ಸದಾ ಕಾಲ ಸಮಯ ಕಳೆಯಲಿದ್ದೇನೆ. ಶಿಗ್ಗಾವಿ ಮಾದರಿ ಕ್ಷೇತ್ರ ಮಾಡಲು ಪಣ ತೊಟ್ಟಿದ್ದೇನೆ ಎಂದರು.

ಹತ್ತಾರು ಸವಾಲುಗಳನ್ನ ಎದುರಿಸಿ ನವಕರ್ನಾಟಕದಿಂದ ನವಭಾರತ ನಿರ್ಮಾಣಕ್ಕೆ ನಿರಂತರ ಶ್ರಮಿಸುತ್ತಿದ್ದು, ಇದಕ್ಕೆ ನಿಮ್ಮ ಸಹಕಾರಬೇಕು. ದಿನಕ್ಕೆ 12 ರಿಂದ 14 ಗಂಟೆ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನತೆಯ ಎದುರು ಜನ್ಮದಿನ ಆಚರಿಸಿಕೊಳ್ಳುತ್ತಿರುವುದು ಚಿರಸ್ಮರಣೀಯ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಗುಜರಾತ್ ಅಂಬುಜಾ ಕಂಪನಿಯಿಂದ ಮಳೆಯಿಂದ ಮನೆ ಹಾನಿಯಾದ ಸುಮಾರು 500 ಸಂತ್ರಸ್ತರಿಗೆ ಪರಿಹಾರದ ಚೆಕ್ ವಿತರಿಸಿದರು. ಜೊತೆಗೆ 950 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ರೈತರಿಗೆ ಶ್ರೇಷ್ಠ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಿದರು.

Advertisement

ಮುಖ್ಯಮಂತ್ರಿಗಳ ಜನ್ಮದಿನ ಅಂಗವಾಗಿ 63 ಕೆಜಿ ಬೃಹತ್ ಕೇಕ್ ತಯಾರಿಸಲಾಗಿತ್ತು. ವೇದಿಕೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೇಕ್ ಕತ್ತರಿಸುವ ಮೂಲಕ ಜನ್ಮದಿನ ಆಚರಿಸಿಕೊಂಡರು.

ಈ ವೇಳೆ ವಿವಿಧ ಮಠಾಧೀಶರು, ಕ್ಷೇತ್ರದ ಮುಖಂಡರು ಇದ್ದರು.

ಇದನ್ನೂ ಓದಿ: ನಾಪತ್ತೆಯಾದ ಮಹಿಳೆ… ಅವಮಾನ ತಾಳಲಾರದೆ ಯುವಕ ನೇಣಿಗೆ ಶರಣು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next