Advertisement

ಉದ್ಯೋಗ: ಎಸ್‌ಸಿ, ಎಸ್ಟಿಗೆ ವಿಶೇಷ ಸೌಲಭ್ಯ ; ಸಿಎಂ ಬೊಮ್ಮಾಯಿ

12:12 AM Nov 21, 2022 | Team Udayavani |

ಬಳ್ಳಾರಿ: ಮುಂಬರುವ ದಿನಗಳಲ್ಲಿ ಎಸ್‌ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 101 ವಸತಿ ನಿಲಯ, 5 ಮೆಗಾ ವಸತಿ ನಿಲಯ, ಐಎಎಸ್‌, ಐಪಿಎಸ್‌ ತರಬೇತಿ, ಯುವಕರಿಗೆ, ಸ್ತ್ರೀಯರಿಗೆ ವಿಶೇಷ ಉದ್ಯೋಗ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

Advertisement

ನಗರದಲ್ಲಿ ರವಿವಾರ ನಡೆದ ಬಿಜೆಪಿ ಎಸ್‌ಟಿ ಮೋರ್ಚಾ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, 2023ರ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡುವ ಸಮಾವೇಶ ಇದಾಗಿದೆ. ಮೀಸಲಾತಿ ಹೆಚ್ಚಳಕ್ಕೆ ವಾಲ್ಮೀಕಿ ಶ್ರೀಗಳೇ ಸ್ಫೂರ್ತಿ. ಶ್ರೀಗಳ ನಿಸ್ವಾರ್ಥ ಹೋರಾಟದಿಂದ ಮನುಷ್ಯನಾಗಿ ಎಲ್ಲ ಮನುಷ್ಯರನ್ನು, ತಳಸಮುದಾಯವನ್ನು ಮೇಲಕ್ಕೆತ್ತಬೇಕೆಂಬ ಚಿಂತನೆಯಿಂದ ಮೀಸಲಾತಿ ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಯಿತು. ಒಂದು ಕಾಲದಲ್ಲಿ ರಾಜರಾದವರು ಇಂದು ಬದುಕಿಗಾಗಿ ಹೋರಾಟ ಮಾಡುತ್ತಿದ್ದಾರೆ.

ಎಸ್‌ಸಿ, ಎಸ್‌ಟಿ, ಹಿಂದುಳಿದವರು ನಮ್ಮವರು ಎನ್ನುವ ಕಾಂಗ್ರೆಸ್‌ನವರು, ರಾಷ್ಟ್ರಪತಿ ಸ್ಥಾನಕ್ಕೆ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಕಣಕ್ಕಿಳಿಸಿದಾಗ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸ್ಪರ್ಧೆಯೊಡ್ಡಿದ್ದಾರೆ. ಇದು ಎಸ್‌ಸಿ, ಎಸ್‌ಟಿಗೆ ತೋರುವ ಗೌರವನಾ? ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾಕ ಎಲ್ಲ ಸಮುದಾಯಗಳಿಗೆ ದ್ರೋಹ ಮಾಡಿರುವ ಕಾಂಗ್ರೆಸ್‌ ಪಕ್ಷಕ್ಕೆ ಬಡವರ, ಮಹಿಳೆಯರ ಶಾಪ ತಟ್ಟುತ್ತದೆ. ಪರಿವರ್ತನೆ, ಬದಲಾವಣೆಯ ಕಾಲ ಬಂದಿದ್ದು, ಎಲ್ಲರೂ ಸ್ವಂತ ಶಕ್ತಿ, ಬುದ್ಧಿಯಿಂದ ಮುನ್ನಡೆಯಬೇಕು. ಬಿಜೆಪಿ ನಿಮ್ಮೊಂದಿಗೆ ಇರಲಿದೆ ಎಂದರು.

ಸಿದ್ದು ಕೇವಲ ಮಾತುಗಾರ
ಕೇಂದ್ರ ಸಚಿವ ಅರ್ಜುನ್‌ ಮುಂಡಾ ಮಾತನಾಡಿ, ಕರ್ನಾಟಕ ದಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ರಾಜ್ಯದ ಸಿಎಂ ಬೊಮ್ಮಾಯಿ ಮೀಸಲಾತಿ ಹೆಚ್ಚಿಸಿದ್ದಾರೆ. ಅವರಿಗೆ ನಮ್ಮ ಸಮುದಾಯಗಳು ಋಣಿಯಾಗಿರಬೇಕು. ಪ್ರಧಾನಿ ಮೋದಿ, ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಉತ್ತಮ ಕಾರ್ಯ ಮಾಡುತ್ತಿವೆ. ರಾಮುಲು ಹೇಳಿದ ಎಲ್ಲ ಮಾತುಗಳನ್ನು ನಾನು ಒಪ್ಪಿ ಅವರಿಗೆ ಬೆಂಬಲಿಸುತ್ತೇನೆ. ಭಗವಾನ್‌ ಬಿರಸಾ ಮುಂಡಾ ಅವರ ಜಯಂತಿಯ ಸಂದರ್ಭದಲ್ಲಿ ಆದಿವಾಸಿ
ಗಳಿಗೆ ಮೀಸಲಾತಿ ಹೆಚ್ಚಿಸಿರುವುದು ಶ್ಲಾಘನೀಯ ಎಂದರು.

ಜನಾರ್ದನ ರೆಡ್ಡಿ ಸ್ಮರಿಸಿದ ಬಿಎಸ್‌ವೈ
ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಮಾಜಿ ಸಚಿವ, ಅಕ್ರಮ ಗಣಿಗಾರಿಕೆ ಆರೋಪ ಹೊತ್ತ ಜಿ. ಜನಾರ್ದನ ರೆಡ್ಡಿ ಹೆಸರು ಪ್ರಸ್ತಾವಿಸಿ ಕುತೂಹಲ ಮೂಡಿಸಿದರು. 2008ರಲ್ಲಿ ಬಿಜೆಪಿ ಅ ಧಿಕಾರವ ಧಿಯಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಜನಾರ್ದನ ರೆಡ್ಡಿ, ಶ್ರೀರಾಮುಲು ಹೇಳಿದ್ದ ಎಲ್ಲವನ್ನೂ ನೀಡಿದ್ದೇನೆ. ಅದಕ್ಕಾಗಿ ಅವಳಿ ಜಿಲ್ಲೆಗಳ ಜನರು ಮುಂದಿನ ಚುನಾವಣೆಯಲ್ಲಿ 10 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು. ಈ ಮೂಲಕ ರಾಜ್ಯಾದ್ಯಂತ 150 ಕ್ಷೇತ್ರಗಳಲ್ಲಿ ಗೆಲ್ಲಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ಕಾಂಗ್ರೆಸ್‌ ಎಸ್‌ಸಿ, ಎಸ್‌ಟಿ ಸಮುದಾಯದವರನ್ನು ಕಡೆಗಸಿ ದ್ರೋಹಬಗೆದಿದೆ. ಅವರೆಲ್ಲ ಬಿಜೆಪಿ ಜತೆಗೆ ಬರಬೇಕು ಎಂದರು.

Advertisement

ಬೊಮ್ಮಾಯಿ ದಕ್ಷಿಣ ಭಾರತದ ವಾಜಪೇಯಿ: ರಾಮುಲು
ಆವೇಶ, ಆಕ್ರೋಶ ಭರಿತರಾಗಿ, ತಲೆಗೆ ರುಮಾಲು ಸುತ್ತಿ ಕಾಂಗ್ರೆಸ್‌ಗೆ ಸವಾಲ್‌ ಹಾಕಿದ ಸಚಿವ ಶ್ರೀರಾಮುಲು, ಹಿಂದುಳಿದ ಮುಖವಾಡ ಧರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ 2013ರಿಂದ 2018ರವರೆಗೆ ಮುಖ್ಯಮಂತ್ರಿ ಆಗಿದ್ದರು. ಆಗ ಏಕೆ ಎಸ್‌ಸಿ, ಎಸ್ಟಿ ಮೀಸಲಾತಿ ಹೆಚ್ಚಿಸಲಿಲ್ಲ. ಮೀಸಲಾತಿ ಹೆಚ್ಚಿಸಿರುವ ಸಿಎಂ ಬೊಮ್ಮಾಯಿ ದಕ್ಷಿಣ ಭಾರತದ ಆಟಲ್‌ ಬಿಹಾರಿ ವಾಜಪೇಯಿ ಆಗಿದ್ದಾರೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅ ಧಿಕಾರಕ್ಕೆ ಬಂದರೆ, ಯಡಿಯೂರಪ್ಪ ಸಿಎಂ ಆದರೆ ಮೀಸಲಾತಿಯನ್ನು ರಕ್ತದಲ್ಲಿ ಬರೆದುಕೊಡುತ್ತೇನೆ ಎಂದಿದ್ದೆ. ಅದರಂತೆ ಬಸವರಾಜ ಬೊಮ್ಮಾಯಿ ಸಿಎಂ ಆದ ಬಳಿಕ ಮೀಸಲಾತಿ ಕೊಡಿಸಿದ್ದೇನೆ. ಜನರು ನೀಡಿದ್ದ ಭಿಕ್ಷೆಯ ಅನ್ನದ ಋಣವನ್ನು ತೀರಿಸಿದ್ದೇನೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next