Advertisement

“ಪಡ್ಡೆಹುಲಿ’ಯಲ್ಲಿ ಬಸವಣ್ಣನ ವಚನ

06:07 AM Mar 05, 2019 | |

ಯುವ ನಟ ಶ್ರೇಯಸ್‌ ಅಭಿನಯದ “ಪಡ್ಡೆಹುಲಿ’ ಚಿತ್ರದಲ್ಲಿ ಬಸವಣ್ಣನವರ ವಚನಗಳನ್ನು ಬಳಸಿಕೊಂಡಿದ್ದು, ಹಾಡಿನ ರೂಪದಲ್ಲಿರುವ ವಚನಗಳನ್ನು ಆಲಿಸಿರುವ ನಾಡಿನ ಶಿವಶರಣರು, ಮಠಾಧೀಶರು ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

Advertisement

ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌, ಅವರು ಬಸವಣ್ಣನವರ “ಕಳಬೇಡ ಕೊಲಬೇಡ’, “ಲೋಕದ ಡೊಂಕ ನೀವೇಕೆ ತಿದ್ದುವಿರಿ’ ವಚನಗಳಿಗೆ ಹೊಸ ಶೈಲಿಯ ಸಂಗೀತ ಸ್ಪರ್ಶ ಕೊಟ್ಟು, ಈಗಿನ ಯುವಕರಿಗೆ ಆಪ್ತವೆನಿಸುವಂತೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಮಹಾಶಿವರಾತ್ರಿ ದಿನದಂದು ಹಾಡಿನ ರೂಪದಲ್ಲಿ ಹೊರಬಂದಿರುವ ಬಸವಣ್ಣನವರ ವಚನಗಳಿಗೆ ಎಲ್ಲೆಡೆ ಮೆಚ್ಚುಗೆಯೂ ಸಿಕ್ಕಿದೆ. 

ಅಂದಹಾಗೆ, ಸೋಮವಾರ ಚಿತ್ರತಂಡ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿದೆ. ಈಗಿನ ಯುವಕರಲ್ಲಿ ಬಸವಣ್ಣನವರ ವಚನಗಳ ಬಗ್ಗೆ ಇನ್ನಷ್ಟು ಆಸಕ್ತಿ ಮೂಡಿಸುವಂತಹ ಕೆಲಸ ಈ ಹಾಡಿನಿಂದ  ಆಗಲಿದೆ ಎಂಬ ನಂಬಿಕೆ ಚಿತ್ರತಂಡದ್ದು.

ಇನ್ನು, ವಚನಗಳಿಗೆ ಹಾಡಿನ ಧ್ವನಿಯಾಗಿರುವುದು ನಾರಾಯಣ ಶರ್ಮಾ. ಅವರ ಕಂಠದಲ್ಲಿ ಎರಡು ವಚನಗಳು ಚೆನ್ನಾಗಿ ಮೂಡಿಬಂದಿವೆ. ಈಗಿನ ಪೀಳಿಗೆ ಕೂಡ ಗುನುಗುವಂತಹ ಹಾಡು ಕೊಟ್ಟಿರುವ ಚಿತ್ರತಂಡಕ್ಕೆ ನಾಡಿನ ಮಠಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಂಗೀತ ನಿರ್ದೇಕ ಅಜನೀಶ್‌ ಲೋಕನಾಥ್‌ ಅವರು ಎರಡು ವಚನಗಳಿಗೆ ಎಲ್ಲೂ ಧಕ್ಕೆಯಾಗದಂತೆ ರೀಮಿಕ್ಸ್‌ ಮಾಡಿ ಹೊಸತನ ಕಟ್ಟಿಕೊಟ್ಟಿದ್ದಾರೆ.

ಬಸವಣ್ಣನವರ ವಚನಕ್ಕೆ ವಿಶಿಷ್ಟ ರಾಗ, ಧ್ವನಿ ಮತ್ತು ಆಲಾಪ ಒದಗಿಸುವ ಮೂಲಕ ಕೇಳುಗರಲ್ಲೊಂದು ಹೊಸತನ ಹುಟ್ಟುಹಾಕಿರುವ ಚಿತ್ರತಂಡ, ಚಿತ್ರವನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ಅಂದಹಾಗೆ, ಚಿತ್ರವನ್ನು ಗುರುದೇಶಪಾಂಡೆ ನಿರ್ದೇಶನ ಮಾಡಿದ್ದಾರೆ. ರಮೇಶ್‌ ರೆಡ್ಡಿ  ನಂಗ್ಲಿ  ಈ ಚಿತ್ರದ ನಿರ್ಮಾಪಕರು.

Advertisement
Advertisement

Udayavani is now on Telegram. Click here to join our channel and stay updated with the latest news.

Next