ದೃಢೀಕರಣ ಪ್ರಮಾಣೀಕರಣ ಪಡೆಯುವಲ್ಲಿ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಿಂದ ಪ್ರಸಕ್ತ ವರ್ಷದಲ್ಲಿ ಸಾವಯವ ಕೃಷಿ ಉತ್ಪಾದನೆ ದೃಢೀಕರಣ ಪ್ರಮಾಣ ಪತ್ರಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ ಶೇ.48 ರಷ್ಟು ವಿಜಯಪುರ ಜಿಲ್ಲೆಗೆ ಸೇರಿದ್ದವು. ಇದು ಸಾವಯವ ಕೃಷಿ ಉತ್ಪಾದನೆಗೆ ಬಸವನಾಡಿನ ರೈತರು ತೋರುತ್ತಿರುವ ಬದ್ಧತೆಗೆ ಸಾಕ್ಷಿ.
Advertisement
ಅಖಂಡ ವಿಜಯಪುರ ಜಿಲ್ಲೆಯಲ್ಲಿ 2005ರಲ್ಲಿ ವಿಜಯಪುರ-ಬಾಗಲಕೋಟೆ ಸಾವಯವ ಕೃಷಿ ಪ್ರಾಂತೀಯ ಸಂಘಗಳ ಒಕ್ಕೂಟ ಅಸ್ತಿತ್ವಕ್ಕೆ ಬಂದಿದೆ. ಇದರ ಅ ಧೀನದಲ್ಲೇ ವಿಜಯಪುರ ಜಿಲ್ಲೆಯ ರೈತರು ಸಾವಯವ ಕೃಷಿ ಉತ್ಪಾದಿಸಿ, ಮಾರುಕಟ್ಟೆ ಕಂಡುಕೊಂಡಿದ್ದರು. ಆದರೆ ಆಡಳಿತಾತ್ಮಕ ಕಾರಣಗಳಿಂದಾಗಿ 2018 ರಲ್ಲಿ ಜಿಲ್ಲೆಯ ಸಾವಯವ ಕೃಷಿ ಉತ್ಪಾದಕರು ಪ್ರತ್ಯೇಕ ಒಕ್ಕೂಟ ರಚಿಸಿಕೊಂಡಿದ್ದಾರೆ.
750 ರೈತರು ಸಾವಯವ ಕೃಷಿ ಉತ್ಪಾದನೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಹೊಸದಾಗಿ 750 ಹೆಕ್ಟೇರ್ ಪ್ರದೇಶದಲ್ಲಿ ಸಂಪೂರ್ಣ ಸಾವಯವ ಕೃಷಿ ಉತ್ಪಾದನೆಗೆ ರೈತರು ಜಮೀನು ಹದಗೊಳಿಸಿಕೊಂಡಿದ್ದಾರೆ. ಪರಿಣಾಮ ಸ್ವಯಂ ಪ್ರೇರಣೆ ಹಾಗೂ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಾವಯವ ಕೃಷಿಯಲ್ಲಿ ತೊಡಗಿರುವ ಜಿಲ್ಲೆಯ ರೈತರು ತಮ್ಮ ಉತ್ಪನ್ನಗಳಿಗೆ ಸಾವಯವ ಪ್ರಮಾಣೀಕರಣ ಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಹೊಸದಾಗಿ ತಮ್ಮ ಉತ್ಪನ್ನಗಳಿಗೆ ಸಾವಯವ ಕೃಷಿ ಪ್ರಮಾಣೀಕರಣ ಮತ್ತು
ದೃಢೀಕರಣ ಪಡೆಯಲು ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ 8500 ಅರ್ಜಿಗಳು ದೃಢೀಕರಣಗೊಂಡಿವೆ. ಈ ಪ್ರಮಾಣದಲ್ಲಿ ಸಾಯವ ದೃಢೀಕರಣ ಪತ್ರ ಪಡೆದ
ಜಿಲ್ಲೆ ಎಂಬ ಹೆಗ್ಗಳಿಕೆ ರಾಜ್ಯದಲ್ಲೇ ವಿಜಯಪುರ ಜಿಲ್ಲೆಗೆ ಸಿಕ್ಕಿದೆ. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ ಸಲ್ಲಿಕೆಯಾಗಿದ್ದ ಅರ್ಜಿಗಳಲ್ಲಿ 20 ಸಾವಿರ ಅರ್ಜಿಗಳಿಗೆ
ಮಾತ್ರ ದೃಢೀಕರಣ ಸಿಕ್ಕಿದ್ದು, ಇದರಲ್ಲಿ ವಿಜಯಪುರ ಜಿಲ್ಲೆಯೊಂದರಲ್ಲೇ 8500 ಅರ್ಜಿ ಇರುವುದೇ ಇದಕ್ಕೆ ಸಾಕ್ಷಿ.
Related Articles
ಸಂಸ್ಕರಿಸಿ ಗ್ರಾಹಕರಿಗೆ ತಲುಪಿಸಲು ಅವಿಭಜಿತ ಐದೂ ತಾಲೂಕಿನಲ್ಲಿ ತಲಾ 20 ಲಕ್ಷ ರೂ. ಮೊತ್ತದ ಸಂಸ್ಕರಣಾ ಘಟಕ ಸ್ಥಾಪನೆಗೆ ಮುಂದಾಗಿದ್ದಾರೆ.
Advertisement
ಸರ್ಕಾರ ಸಾವಯವ ಕೃಷಿಭಾಗ್ಯ ಯೋಜನೆ ಹಾಗೂ ಪಾರಂಪರಿಕ ಕೃಷಿ ಯೋಜನೆಯಲ್ಲಿ ಸರ್ಕಾರ ಶೇ.50 ರಷ್ಟು ಸಹಾಯ ಧನದ ನೆರವು ನೀಡಿದೆ.ವಿಜಯಪುರ ತಾಲೂಕಿನಲ್ಲಿ 3 ವರ್ಷದ ಹಿಂದೆಯೇ ಸಂಸ್ಕರಣಾ ಘಟಕ ಕಾರ್ಯಾರಂಭ ಮಾಡಿದ್ದರೆ, ಸಿಂದಗಿ ತಾಲೂಕಿನಲ್ಲಿ ವರ್ಷದ ಹಿಂದೆ ಸಂಸ್ಕರಣೆ ಆರಂಭಗೊಂಡಿದೆ. ಇಂಡಿ, ಬಸವನಬಾಗೇವಾಡಿ ತಾಲೂಕಿನಲ್ಲಿ ಎರಡು ತಿಂಗಳ ಹಿಂದೆ ಘಟಕಗಳು ಸಂಸ್ಕರಣೆ ನಡೆಸಿದ್ದರೆ, ಮುದ್ದೇಬಿಹಾಳ ತಾಲೂಕಿನಲ್ಲಿ ಸಂಸ್ಕರಣೆ ಆರಂಭಕ್ಕೆ ಸಿದ್ಧತೆ ಅಂತಿಮಗೊಂಡಿದೆ.
ಪರಿಣಾಮ ಸಿರಿಧಾನ್ಯ ಯೋಜನೆಯಲ್ಲಿ ನವಣೆ, ಹಾರಕ, ಬರಕ, ಸಜ್ಜೆಯಂತ ಸಿರಿಧಾನ್ಯ ಬೆಳೆಯಲು ರೈತರಿಗೆ ಉತ್ತೇಜನ ನೀಡಲು ಸರ್ಕಾರವೂ ಯೋಜನೆರೂಪಿಸಿದೆ. ನವಣೆ ಸಿರಿಧಾನ್ಯ ಬೆಳೆಯುವ ರೈತರಿಗೆ ಹೆಕ್ಟೇರ್‌ಗೆ 10 ಸಾವಿರ ರೂ. ಸಹಾಯ ಧನ ನೀಡಿದ್ದರಿಂದ 2019ರಲ್ಲಿ 5000 ಎಕರೆ ಪ್ರದೇಶದಲ್ಲಿ
ನವಣೆ ಬೆಳೆದಿದ್ದು, ಪ್ರಸಕ್ತ ವರ್ಷದ ಹಂಗಾಮಿನಲ್ಲಿ 2500 ಎಕರೆ ಪ್ರದೇಶದಲ್ಲಿ ನವಣೆ ಬೆಳೆಯಲಾಗಿದೆ. ಆದರೆ ಜಿಲ್ಲೆಯಲ್ಲಿ ಸರ್ಕಾರದ ನೆರವಿನ ಯೋಜನೆಯಲ್ಲಿ ನವಣೆ ಬೆಳೆದ ರೈತರಿಗೆ ಮಾರುಕಟ್ಟೆಯದ್ದೇ ಸಮಸ್ಯೆ. ಕಳೆದ ವರ್ಷ ಸಿರಿಧಾನ್ಯ ಮಾರಾಟವಾಗದೇ ಕೊಳೆಯುತ್ತಿದ್ದು, ಪ್ರಸಕ್ತ ವರ್ಷದ ಬೆಳೆಗೂ ಮಾರುಕಟ್ಟೆ ಸಿಗದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಅಗತ್ಯ ಮಾರುಕಟ್ಟೆ ಕಲ್ಪಿಸುವ ವ್ಯವಸ್ಥೆ ಮಾಡಿ ಉತ್ತೇಜನ ನೀಡಲಿ ಎಂಬುದು ಜಿಲ್ಲೆಯ ರೈತರ ಒಕ್ಕೊರಲ ಆಗ್ರಹವಾಗಿದೆ. ಜಿಲ್ಲೆಯ ಬಹುತೇಕ ರೈತರು ಸಾವಯವ ಕೃಷಿಯನ್ನೇ ಅವಲಂಬಿಸಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯನ್ನು ಸಾವಯವ ಕೃಷಿ ಕ್ಷೇತ್ರವಾಗಿಸುವುದು ಸುಲಭವೂ ಇದೆ. ಆದರೆ ಜಿಲ್ಲೆಯ ಸಾವಯವ ಕೃಷಿ ಹಾಗೂ ಸಿರಿಧಾನ್ಯ ಉತ್ಪಾದನೆಗೆ ಸರ್ಕಾರ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಗೆ ಸಾವಯವ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಆದಲ್ಲಿ ಮಾರುಕಟ್ಟೆ ಕಲ್ಪಿಸಿಕೊಳ್ಳಲು ಸುಲಭವಾಗಲಿದೆ.
ಮಹಾದೇವ ಅಂಬಲಿ,
ಜಿಲ್ಲಾಧ್ಯಕ್ಷ ಸಾವಯವ ಕೃಷಿ ಸಂಘಗಳ
ಪ್ರಾಂತೀಯ ಒಕ್ಕೂಟ. *ಜಿ.ಎಸ್.ಕಮತರ