Advertisement

ರೈಲ್ವೇ ಪ್ರಯಾಣಿಕರ ಪರದಾಟ

11:57 AM Dec 07, 2019 | Naveen |

„ಪ್ರಕಾಶ ಬೆಣ್ಣೂರ
ಬಸವನಬಾಗೇವಾಡಿ:
ಬಸವನಬಾಗೇವಾಡಿ ರೋಡ್‌ (ತೆಲಗಿ) ರೈಲ್ವೆ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳಿಂದ ಕೊರತೆಯಿಂದ ಪ್ರಯಾಣಿಕರು ಮತ್ತು ಪ್ರವಾಸಿಗರು ದಿನನಿತ್ಯ ಪರದಾಡುವಂತ ಸ್ಥಿತಿ ಸಾಮಾನ್ಯವಾಗಿದೆ.

Advertisement

ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿಗೆ ನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಾರೆ. ಬಸವನಬಾಗೇವಾಡಿ-ತಾಳಿಕೋಟೆ ದೊಡ್ಡ ಪಟ್ಟಣ ಹಾಗೂ ತಾಲೂಕು ಕೇಂದ್ರವಾಗಿದ್ದು ನಿತ್ಯ ಬೆಂಗಳೂರು, ಹುಬ್ಬಳ್ಳಿ, ಮುಂಬೈ ಸೇರಿದಂತೆ ನಗರ ಪ್ರದೇಶಗಳಿಗೆ ತೆರಳುತ್ತಾರೆ. ಆದರೆ ಈ ಬಸವನಬಾಗೇವಾಡಿ ರೋಡ್‌ (ತೆಲಗಿ) ರೈಲ್ವೆ ನಿಲ್ದಾಣದಲ್ಲಿ ಸೌಲಭ್ಯಗಳು ಮರೀಚಿಕೆಯಾಗಿವೆ.

ಬಸವನಬಾಗೇವಾಡಿ ಪಟ್ಟಣದಿಂದ 15 ಕಿ.ಮೀ. ಅಂತರದಲ್ಲಿರುವ ತೆಲಗಿ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೇಟ್‌ ಬುಕ್ಕಿಂಗ್‌ ಕೌಂಟರ್‌ ಇಲ್ಲ. ಬಸವನಬಾಗೇವಾಡಿ ಪಟ್ಟಣದಿಂದ ರೈಲ್ವೆ ನಿಲ್ದಾಣಕ್ಕೆ ಸರಿಯಾದ ಸಮಯಕ್ಕೆ ಬಸ್‌ ಸೌಕರ್ಯವಿಲ್ಲ. ಹೀಗಾಗಿ ಪ್ರಾಯಾಣಿಕರು ಮತ್ತು ಪ್ರವಾಸಿಗರು ದಿನನಿತ್ಯ ಪರದಾಡುವಂತ ಸ್ಥಿತಿ ಬಂದೊದಗಿದೆ. ಈ ಕುರಿತು ಹಲವಾರು ಬಾರಿ ಜನಪ್ರತಿನಿಧಿಗಳು ಹೇಳಿದರು ಕೂಡಾ ಅಧಿಕಾರಿಗಳು ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ.

ಈ ರೈಲ್ವೆ ನಿಲ್ದಾಣಕ್ಕೆ ನಿತ್ಯ ಹುಬ್ಬಳ್ಳಿಯಿಂದ ಸಿಕಂದರಾಬಾದ್‌, ಗದಗ-ಸೊಲ್ಲಾಪುರ, ಮೈಸೂರು -ಸೊಲ್ಲಾಪುರ, ಹುಬ್ಬಳ್ಳಿ- ವಿಜಯಪುರ, ಬಾಗಲಕೋಟೆ-ಮೈಸೂರು, ಹುಬ್ಬಳ್ಳಿ – ಸೊಲ್ಲಾಪುರ, ಯಶವಂತಪುರ, ವಿಜಯಪುರ, ಅಬ್ಬೆವಾಡಿ, ಸೊಲ್ಲಾಪುರ, ವಿಜಯಪುರ-ಮಂಗಳೂರು ರೈಲುಗಳು ಸಂಚರಿಸುತ್ತವೆ. ಈ ರೈಲುಗಳ ಸಮಯಕ್ಕೆ ಸರಿಯಾಗಿ ಬಸವನಬಾಗೇವಾಡಿ ಬಸ್‌ ಘಕಟದಿಂದ ಬಸ್‌ಗಳನ್ನು ಬಿಡಬೇಕು ಎಂದು ಹಲವಾರು ಬಾರಿ ತಾಪಂ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್‌ ಮಾಡಿದರು ಪ್ರಯೋಜನವಾಗಿಲ್ಲ.

ಬಸವನಬಾಗೇವಾಡಿ ಘಟಕದಿಂದ ನಿತ್ಯ ಕೊಲ್ಹಾರ ಪಟ್ಟಣಕ್ಕೆ ಹತ್ತಾರು ಬಸ್‌ಗಳು ಸಂಚರಿಸುತ್ತವೆ. ಆದರೆ ರೈಲ್ವೆ ನಿಲ್ದಾಣದಲ್ಲಿ ಬರುವುದಿಲ್ಲ. ನಿಲ್ದಾಣದಿಂದ ಮಾರುದ್ದ ದೂರು ಬಸ್‌ ನಿಲ್ಲಿಸುತ್ತಿದ್ದಾರೆ. ರೈಲ್ವೆ ನಿಲ್ದಾಣದಿಂದ ಬಸ್‌ ನಿಲ್ಲುವ ಸ್ಥಳಕ್ಕೆ ಬರುವುದರಲ್ಲೇ ಬಸ್‌ ಬಿಡಲಾಗುತ್ತದೆ.
ರಾಚಪ್ಪ ಕಲಬುರ್ಗಿ,
ಪ್ರಯಾಣಿಕ

Advertisement

ರೈಲ್ವೆ ಇಲಾಖೆ ಜಿಎಂ ಅವರೊಂದಿಗೆ ಮಾತನಾಡಿ ಬಸವನಬಾಗೇವಾಡಿ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೇಟ್‌ ಬುಕ್ಕಿಂಗ್‌ ಕೌಂಟರ್‌ ಪ್ರಾರಂಭಿಸಲು ಕ್ರಮ ಕೈಗೊಳ್ಳುತ್ತೇನೆ. ನಿಲ್ದಾಣದಲ್ಲಿ ಅಗತ್ಯ ಸೌಲಭ್ಯ ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ರಮೇಶ ಜಿಗಜಿಣಗಿ, ಸಂಸದ

ಬಸವನಬಾಗೇವಾಡಿ ಪಟ್ಟಣಕ್ಕೆ ಪ್ರವಾಸಿಗರು ಬರುತ್ತಾರೆ. ಆದರೆ ನಮ್ಮ ರೈಲ್ವೆ ನಿಲ್ದಾಣದಲ್ಲಿ ಮುಂಗಡ ಟಿಕೇಟ್‌ ಬುಕ್ಕಿಂಗ್‌ ಕೌಂಟರ್‌ ಮತ್ತು ಬಸ್‌ ಸೌಕರ್ಯ ಇಲ್ಲದಿರುವುದರಿಂದ ಅನೇಕ ಪ್ರವಾಸಿಗರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಶಿವಪ್ರಕಾಶ ಶಿವಾಚಾರ್ಯಶ್ರೀ,
ಹಿರೇಮಠ

Advertisement

Udayavani is now on Telegram. Click here to join our channel and stay updated with the latest news.

Next