Advertisement

ಶಾಲೆ ಸಿಬ್ಬಂದಿ ವಿರುದ್ಧ ಪ್ರತಿಭಟನೆ

01:28 PM Jul 08, 2019 | Naveen |

ಬಸವನಬಾಗೇವಾಡಿ: ಬಾಲಕನ ಸಾವಿಗೆ ಶಾಲೆ ಸಿಬ್ಬಂದಿಯೆ ಕಾರಣ ಎಂದು ಆರೋಪಿಸಿ ಮೃತ ಬಾಲಕನ ಪಾಲಕರು ಹಾಗೂ ಸಂಬಂಧಕರು ರವಿವಾರ ಪಟ್ಟಣದ ಪೊಲೀಸ್‌ ಠಾಣೆ ಆವರಣದಲ್ಲಿ ಶವ ಇಟ್ಟು ಪ್ರತಿಭಟನೆ ನಡೆಸಿದರು.

Advertisement

ತಾಲೂಕಿನ ಸುಳಕೋಡ ಗ್ರಾಮದ ಮೃತ ಬಾಲಕ ಆಕಾಶ ನಾಗಪ್ಪ ಕುಂಬಾರ (13) ತಾಲೂಕಿನ ಕಣಕಾಲ ಗ್ರಾಮದ ಸ್ನೇಹ ಸದನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದ. ಶನಿವಾರ ಶಾಲಾ ಆವರಣದಲ್ಲಿ ಬಾಲಕನಿಗೆ ಹಾವು ಕಡಿದ ಪರಿಣಾಮ ಬಸವನಬಾಗೇವಾಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆ ಬಾಲಕ ಮೃತ ಪಟ್ಟಿದ್ದಾನೆ.

ಶಾಲೆ ಮುಖ್ಯ ಶಿಕ್ಷಕ ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಬಾಲಕ ಮೃತ ಪಟ್ಟಿದ್ದಾನೆ. ಬಾಲಕನ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮೃತ ಬಾಲಕನ ಸಂಬಂಧಿ ಪ್ರತಿಭಟನಾ ನಿರತ ಶಿವು ಕುಂಬಾರ ಒತ್ತಾಯಿಸಿದರು.

ಪ್ರತಿಭಟನಾ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಸಿಪಿಐ ಮಹಾದೇವ ಶಿರಹಟ್ಟಿ ಈ ಕುರಿತು ಶನಿವಾರ ರಾತ್ರಿಯೆ ಪ್ರಕರಣ ದಾಖಲಾಗಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಇದರಲ್ಲಿ ಎರಡು ಮಾತಿಲ್ಲಾ ಎಂದು ಭರವಸೆ ನೀಡಿದರು. ಶಾಲೆಯನ್ನು ಬಂದ್‌ ಮಾಡಬೇಕು ಎಂದು ಪ್ರತಿಭಟನಾ ಸ್ಥಳದಲ್ಲಿ ಹಾಜರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೆದಗುಡ್ಡ ಅವರಿಗೆ ಪಾಲಕರು ಹಾಗೂ ಸಂಬಂಧಿಕರು ಆಗ್ರಹಿಸಿದರು. ಅಪ್ಪುಗೌಡ ಪಾಟೀಲ ಮಾತನಾಡಿ, ಖಾಸಗಿ ಶಾಲೆಗಳು ಅಂದರೆ ಒಳ್ಳೆಯ ಶಿಸ್ತು ಪಾಲನೆ ಮಾಡುವ ಶಾಲೆಗಳು. ಆದರೆ ಈ ಘಟನೆಯ ನಡೆದಿದ್ದು ಎಲ್ಲಿರಿಗೂ ಅಚ್ಚರಿ ಮೂಡಿಸಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ಬಾಲಕನ ಸಂಬಂಧಿಕರಿಗೆ ನ್ಯಾಯ ಒದಗಿಸಿ ಕೊಡುವ ಕಾರ್ಯವಾಗ‌ಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಬೇಕು ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ ಕುಂಬಾರ, ಹನುಮಂತಗೌಡ ಪಾಟೀಲ, ಮಹೇಶ ಕುಂಬಾರ, ಶ್ರೀನಿವಾಸ ರಜಪೂತ, ಸತ್ಯಪ್ಪ ಗಾಣಗೇರ, ಶಾಂತಗೌಡ ಬಿರಾದಾರ, ಪುಂಡೆಪ್ಪ ಗುಡು, ರೇಣುಕಾ ಕುಂಬಾರ, ಬೋರವ್ವ ಕುಂಬಾರ, ಸುಮಿತ್ರಾ ಕುಂಬಾರ, ಶಿವಬಾಯಿ ಕುಂಬಾರ, ಗಂಗವ್ವ ಯಡ್ರಾಮಿ, ಶೇಖವ್ವ ಕುಂಬಾರ, ಪಾರ್ವತಿ ಕುಂಬಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next