ಬಸವನಬಾಗೇವಾಡಿ: ತಾಲೂಕಿನಲ್ಲಿ ಇದುವರೆಗೂ 8 ಜನರಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು ಜನರಲ್ಲಿ ಭೀತಿ ಮೂಡಿಸಿದೆ. ಪಟ್ಟಣದ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಸೇರಿದಂತೆ ಮೂವರಿಗೆ ಶನಿವಾರ ಕೋವಿಡ್ ಸೋಂಕು ದೃಢಪಟ್ಟಿರುವ ಬಗ್ಗೆ ವರದಿಯಾಗಿದೆ.
40 ವರ್ಷದ ಪೊಲೀಸ್ ಸಿಬ್ಬಂದಿ, 32 ಮತ್ತು 44 ವರ್ಷದ ವ್ಯಕ್ತಿ ಹಾಗೂ 40 ವರ್ಷದ ಮಹಿಳೆಗೆ ಸೋಖೀತರಾಗಿದ್ದು ಯಾವುದೇ ಪ್ರಯಾಣದ ಮಾಹಿತಿಯಿಲ್ಲ ಎಂದು ತಿಳಿದು ಬಂದಿದೆ. ತಾಲೂಕಿನ ಉಕ್ಕಲಿಯಲ್ಲಿ ಇಬ್ಬರಿಗೆ ಹಾಗೂ ಹತ್ತರಕಿಹಾಳ ಹಾಗೂ ತೆಲಗಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಠಾಣೆ ಹಾಗೂ ನಾಗೂರ ರಸ್ತೆಯ ಹತ್ತಿರದ ಮಾಬುಸುಬಾನಿ ದರ್ಗಾ ಹತ್ತಿರದ ಬಡಾವಣೆ ಸೀಲ್‌ಡೌನ್ ಮಾಡಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಎಂ.ಎನ್. ಬಳಿಗಾರ, ಡಿವೈಎಸ್‌ಪಿ ಈ. ಶಾಂತವೀರ, ಸಿಪಿಐ ಸೋಮಶಖರ ಜುಟ್ಟಲ, ಪಿಎಸೈ ಚಂದ್ರಶೇಖರ ಹೆರಕಲ್ಲ, ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ ಭೇಟಿ ನೀಡಿ ಜನತೆಗೆ ಸೂಕ್ತ ಮುನ್ನೆಚ್ಚರಿಕೆ ಕೈಗೊಳ್ಳಲು ಸೂಚಿಸಿದರು.
ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವ ಕುಟುಂಬ ಸದಸ್ಯರು ಸೇರಿದಂತೆ ಇತರರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. ಮನೆಯಿಂದ ಹೊರ ಬರದಂತೆ ತಿಳಿಸಲಾಗಿದೆ.
ಡಾ| ಎಸ್.ಎಸ್. ಓತಗೇರಿ
ತಾಲೂಕು ವೈದ್ಯಾಧಿಕಾರಿ