Advertisement

163 ಮತಗಳಿಂದ ಜಯ ಗಳಿಸಿದ್ದ ಕೆ.ಸಿ.ಮೊದಗೇಕರ

12:01 AM Mar 14, 2023 | Team Udayavani |

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಮತಗಳಿಕೆಯ ದಾಖಲೆ ಜತೆಗೆ ಗೆಲುವಿನ ಅಂತರದಲ್ಲೂ ದಾಖಲೆ ಇದೆ. ಮೂರು ಕ್ಷೇತ್ರಗಳಲ್ಲಿ 200ಕ್ಕಿಂತ ಕಡಿಮೆ ಮತಗಳ ಅಂತರದಿಂದ ಅಭ್ಯರ್ಥಿಗಳು ಗೆದ್ದಿರುವುದು ವಿಶೇಷ. ಬಾಗೇವಾಡಿ ವಿಧಾನಸಭಾ ಕ್ಷೇತ್ರ (ಕ್ಷೇತ್ರ ಪುನರ್‌ ವಿಂಗಡಣೆ ನಂತರ ಬೆಳಗಾವಿ ಗ್ರಾಮೀಣ ಎಂದು ಬದಲಾಗಿದೆ)ದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಸಿ.ಮೊದಗೇಕರ ಅತೀ ಕಡಿಮೆ ಮತಗಳ ಅಂತರದಲ್ಲಿ ಅಂದರೆ ಕೇವಲ 163 ಮತಗಳಿಂದ ಜಯ ಗಳಿಸಿದ ದಾಖಲೆ ಹೊಂದಿದ್ದಾರೆ. ಇವರ ನಂತರ ಕಾಂಗ್ರೆಸ್‌ನ ವೀರಕುಮಾರ ಪಾಟೀಲ 173 ಮತಗಳ ಅಂತರದ ಗೆಲುವಿನ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

Advertisement

1989ರ ಚುನಾವಣೆಯಲ್ಲಿ ಕೆ.ಸಿ.ಮೊದಗೇಕರ 22212 ಮತ ಪಡೆದು ಸಮೀಪದ ಪ್ರತಿಸ್ಪರ್ಧಿ ಕರ್ನಾಟಕ ರಾಜ್ಯ ರೈತ ಸಂಘದ ಕೆ.ಎಸ್‌.ಯಳ್ಳೂರಕರ ಅವರನ್ನು (ಪಡೆದ ಮತಗಳು 22049) 163 ಮತಗಳಿಂದ ಸೋಲಿಸಿದರು. ನಂತರ ಇದೇ ಬಾಗೇವಾಡಿ ಕ್ಷೇತ್ರದಲ್ಲಿ 1999ರಲ್ಲಿ ನಡೆದ ಚುನಾವಣೆಯಲ್ಲಿ ಸಂಯುಕ್ತ ಜನತಾದಳದ ಅಭ್ಯರ್ಥಿ ಎಸ್‌.ಸಿ.ಮಾಳಗಿ 24439 ಮತ ಪಡೆದು ತಮ್ಮ ಎದುರಾಳಿ ಪಕ್ಷೇತರ ಅಭ್ಯರ್ಥಿ ಪಿಂಗಟ ಯಲ್ಲೋಜಿರಾವ್‌ ಸಿದರಾಯ ಅವರನ್ನು 273 ಮತಗಳಿಂದ ಸೋಲಿಸಿರುವುದು ವಿಶೇಷ.

ಹೀಗಾಗಿ ಈ ಕ್ಷೇತ್ರದ ಮತದಾರರು ಎರಡು ಬಾರಿ ಅತೀ ಕಡಿಮೆ ಮತಗಳಿಂದ ಗೆದ್ದಿರುವ ಅಭ್ಯರ್ಥಿಯನ್ನು ನೋಡಿದ್ದಾರೆ. ಸದಲಗಾ ಕ್ಷೇತ್ರದಲ್ಲಿ ಸಹ ಅತೀ ಕಡಿಮೆ ಮತಗಳ ಅಂತರದಲ್ಲಿ ಗೆದ್ದಿರುವ ದಾಖಲೆ ಇದೆ. 1989ರಲ್ಲಿ ಕಾಂಗ್ರೆಸ್‌ನ ವೀರಕುಮಾರ ಪಾಟೀಲ 35358 ಮತ ಪಡೆದು ತಮ್ಮ ಪ್ರತಿಸ್ಪರ್ಧಿ ಜನತಾದಳದ ಕಲ್ಲಪ್ಪ ಮಗೆಣ್ಣವರ (ಪಡೆದ ಮತಗಳು 35185) ವಿರುದ್ಧ 173 ಮತಗಳಿಂದ ಜಯ ಗಳಿಸಿದ್ದರು. ಇದಕ್ಕೂ ಮುನ್ನ ಇದೇ ಸದಲಗಾ ಕ್ಷೇತ್ರದಲ್ಲಿ 1957ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಬಿ.ಜಿ. ಖೋತ್‌ ಅವರು ಕಾಂಗ್ರೆಸ್‌ನ ಪಿ.ಎಚ್‌.ಗುಂಜಾಳ ಅವರನ್ನು 185 ಮತಗಳಿಂದ ಸೋಲಿಸಿ ಗಮನ ಸೆಳೆದಿದ್ದರು. ಆಗ ಖೋತ್‌ ಅವರು 17714 ಮತ ಪಡೆದಿದ್ದರೆ ಗುಂಜಾಳ ಅವರಿಗೆ 17529 ಮತಗಳು ಬಿದ್ದಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next