Advertisement

BasavanBagewadi ಕೊಲೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ

10:03 PM Jun 11, 2024 | Team Udayavani |

ಬಸವನಬಾಗೇವಾಡಿ: ಜೂ.8ರಂದು ಗುಳಬಾಳ ಗ್ರಾಮದಲ್ಲಿ ನಡೆದಿದ್ದ ಮಹಾಂತೇಶ ಚಿದಾನಂದ ಬಿರಾದಾರ (23) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ಗುಳಬಾಳ ಗ್ರಾಮದ ವಿಶ್ವರಾಜ್‌ ಶಿವಶರಣಪ್ಪ ಮದ್ದರಕ (34), ಶೇಖರಪ್ಪ ಭೀಮರಾಯ ನೆಲ್ಲಗಿ (37) ಬಂಧಿತ ಆರೋಪಿಗಳು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ರಿಷಿಕೇಶ ಸೋನಾವಣೆ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎಸ್‌.ಕೆ.ಮಾರಿಹಾಳ, ಬಸವನಬಾಗೇವಾಡಿ ಪೊಲೀಸ್‌ ಉಪಾಧೀಕ್ಷಕ ಬಲ್ಲಪ್ಪ ನಂದಗಾಂವಿ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಬಸವನಬಾಗೇವಾಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ವಿಜಯ ಮುರಗುಂಡಿ ಪಿಎಸೈ ರವಿ ಪವಾರ್‌, ಹಾಗೂ ಪೊಲೀಸ್‌ ಸಿಬ್ಬಂದಿಗಳಾದ ಎಂ.ಐ.ತಳವಾರ, ಎಂ.ಸಿ.ದಿಂಡಿ, ಎನ್ ಎನ್ .ಗ್ಶಾಂಡರ,ಎಂ.ಎನ್‌.ಬಿರಾದಾರ,ಬಿ.ಎ.ಯತ್ನಾಳ, ರಾಜು ಹರಿನಾಳ, ಪರಶುರಾಮ ಜಾಲವಾದಿ, ರಾಜು ಜಾಧವ,ಡಿ.ಎಲ್‌.ಪೂಜಾರಿ , ಆರ್‌.ಎಮ್‌.ಕಳಸಗೊಂಡ, ವಿಜಯಕುಮಾರ್‌ ದುದಗಿ ,ಬಿ.ಬಿ.ಶೇಬಗೊಂಡ,ಬಿ.ಬಿ.ಹೊಕ್ರಾಣಿ, ಇವರ ಕಾರ್ಯವನ್ನು ವಿಜಯಪುರ ಎಸ್‌ .ಪಿ ಶ್ಲಾಘಿಸಿ ನಗದು ಬಹುಮಾನ ಘೋಷಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next