Advertisement

ಕೋವಿಡ್‌ ಸೋಂಕು ತಡೆಗೆ ಜನರ ಸಹಕಾರ ಅಗತ್ಯ

11:50 AM Jun 25, 2020 | Naveen |

ಬಸವಕಲ್ಯಾಣ: ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್‌ ಹಾಗೂ ಸೀಲ್‌ಡೌನ್‌ ಒಂದೇ ಮಾರ್ಗವಲ್ಲ. ಬದಲಾಗಿ ಸಾರ್ವಜನಿಕರು ಸರ್ಕಾರದ ಆದೇಶ ಪಾಲಿಸಿ ಸಾಮಾಜಿಕ ಅಂತರ ಪಾಲನೆ, ಮಾಸ್ಕ್ ಧರಿಸಿದರೆ ಸೋಂಕು ತಡೆ ಸಾಧ್ಯ. ಈ ದಿಶೆಯಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಬೀದರ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಹೇಳಿದರು.

Advertisement

ನಗರದ ಬಿಕೆಡಿಬಿ ಕಚೇರಿಯಲ್ಲಿ ಇತ್ತೀಚೆಗೆ ಅಧಿಕಾರಿಗಳ ಸಭೆ ನಡೆಸಿ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಬಸವಕಲ್ಯಾಣ ಮಹಾರಾಷ್ಟ್ರದ ಗಡಿಭಾಗದಲ್ಲಿ ಇರುವುದರಿಂದ ಕೊರೊನಾ ಸೋಂಕು ವೇಗವಾಗಿ ಹರಡುತ್ತಿದೆ. ಹೀಗಾಗಿ ಅದನ್ನು ಯಾವರೀತಿ ತಡೆಗಟ್ಟಬೇಕು ಎಂಬ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಸಲಹೆ ಸೂಚನೆಗಳನ್ನು ನೀಡಲಾಗಿದೆ ಎಂದರು.  ಪ್ರತಿಯೊಂದನ್ನು ಸರ್ಕಾರವೇ ಮಾಡಲಾಗುವುದಿಲ್ಲ. ಸೋಂಕು ತಡೆಯಲ್ಲಿ ಸಾರ್ವಜನಿಕರ ಜವಾಬ್ದಾರಿ ಬಹಳಷ್ಟಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ತಪ್ಪದೆ ಸ್ಯಾನಿಟೈಸರ್‌ ಬಳಕೆ, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಯಂ ಕ್ವಾರಂಟೈನ್‌ ಆಗಬೇಕು. ಆರೋಗ್ಯ ಸಿಂಧು ಆ್ಯಪ್‌ ಬಳಸಿ ಕೊರೊನಾ ಸೋಂಕು ತಡೆಗೆ ಕೈಜೋಡಿಸಬೇಕೆಂದರು. ಇದಕ್ಕೂ ಮುಂಚೆ ಸಚಿವರು ನಗರದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು.

ಶಾಸಕ ಬಿ.ನಾರಾಯಣರಾವ್‌, ಜಿಲ್ಲಾಧಿಕಾರಿ ರಾಮಚಂದ್ರನ್‌ ಆರ್‌., ಜಿಪಂ ಸಿಇಒ ಗ್ಯಾನೇಂದ್ರಕುಮಾರ ಗಂಗ್ವಾರ್‌, ಎಸ್‌ಪಿ ನಾಗೇಶ ಡಿ.ಎಲ್‌, ಎಸಿ ಭಂವರ್‌ಸಿಂಗ್‌ ಮೀನಾ, ತಹಶೀಲ್ದಾರ್‌ ಸಾವಿತ್ರಿ ಸಲಗರ, ಇಒ ಮಡೋಳಪ್ಪ ಪಿ.ಎಸ್‌, ನಗರಸಭೆ ಪೌರಾಯುಕ್ತ ಮೀನಾಕುಮಾರಿ ಬೋರಾಳಕರ್‌, ಸಿಪಿಐ ಜಿ.ಎಸ್‌.ನ್ಯಾಮಗೌಡ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೋಡ  ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next