ಬೀದರ: ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಪ್ರತಿಷ್ಠೆಯ ಕಣವಾಗಿರುವಬಸವಕಲ್ಯಾಣ ಉಪ ಚುನಾವಣೆ ಸದ್ಯ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕೇಂದ್ರ ಚುನಾವಣೆ ಆಯೋಗವು ಶೀಘ್ರ ಚುನಾವಣೆಗೆ ಮುಹೂರ್ತ ನಿಗದಿ ಮಾಡಲಿದೆ. ಆದರೆ, ಈವರೆಗೂ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಹಾಗಾಗಿಟಿಕೆಟ್ ಯಾರಿಗೆ ಸಿಗಲಿದೆ ಎಂಬ ಕುತೂಹಲ ಹೆಚ್ಚಿದ್ದು, ಚರ್ಚೆಗೆ ಗ್ರಾಸವಾಗಿದೆ.
ಶಾಸಕ ದಿ| ಬಿ. ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ತೆರವಾಗಿರುವಬಸವಣ್ಣನ ಕರ್ಮಭೂಮಿ ಬಸವಕಲ್ಯಾಣಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.ಗ್ರಾಮ ಪಂಚಾಯತ ಮಿನಿ ಸಮರದಬಳಿಕ ಕಲ್ಯಾಣದ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ಸಿಗಬಹುದೆಂದು ಅಂದಾಜಿಸಲಾಗಿತ್ತು. ಇದಕ್ಕಾಗಿ ಆಂತರಿಕವಾಗಿ ಬಿರುಸಿನ ತಯ್ನಾರಿಗಳು ನಡೆಯುತ್ತಿದೆ. ಆದರೆ, ಬಿಜೆಪಿ ಮತ್ತುಕಾಂಗ್ರೆಸ್ ಎರಡೂ ರಾಷ್ಟ್ರೀಯ ಪಕ್ಷಗಳುಪರಸ್ಪರ ಕಾದು ನೋಡುವ ತಂತ್ರಕ್ಕೆ ಮೊರೆಹೋಗಿದ್ದು, ಚುನಾವಣಾ ಆಯೋಗದ ದಿನಾಂಕ ಘೋಷಣೆಯನ್ನೇ ಎದುರು ನೋಡುತ್ತಿವೆ.
ಜೆಡಿಎಸ್ ಸ್ಪರ್ಧೆ ಬಗ್ಗೆಯೇ ಇನ್ನೂ ಘೋಷಣೆ ಆಗಬೇಕಿದೆ.ಶಿರಾ ಮತ್ತು ಆರ್‌ಆರ್ ನಗರ ಉಪಚುನಾವಣೆಯಲ್ಲಿ ಜಯಭೇರಿ ಬಾರಿಸಿಹುಮಸ್ಸಿನಲ್ಲಿರುವ ಕೆಸರಿಪಡೆ ಬಸವಕಲ್ಯಾಣಕ್ಷೇತ್ರದಲ್ಲಿ ಕಮಲ ಅರಳಿಸಲು ಈಗಾಗಲೇರಣ ತಂತ್ರ ರೂಪಿಸುತ್ತಿದ್ದರೆ ಕಾಂಗ್ರೆಸ್ ಸಹಶತಾಯಗತಾಯ ಮತ್ತೂಮ್ಮೆ ಕ್ಷೇತ್ರವನ್ನು “ಕೈ’ವಶದಲ್ಲಿ ಇಟ್ಟಿಕೊಳ್ಳಲು ಸಜ್ಜಾಗುತ್ತಿದೆ. ಸದ್ಯದ ರಾಜಕೀಯ ಬೆಳವಣಿಗೆಯಿಂದ ಕದನದ ಕುತೂಹಲ ಹೆಚ್ಚಿದೆಯಾದರೂ ಅಭ್ಯರ್ಥಿಗಳ ಹೆಸರು ಅಂತಿಮ ಆಗದಿರುವುದು ಗೊಂದಲ ಮೂಡಿಸಿದೆ.
ಆಡಳಿತಾರೂಢ ಬಿಜೆಪಿಯಿಂದ ಸಿಎಂ ಪುತ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಅವರ ಸ್ಪರ್ಧೆ ಕುರಿತುವ್ಯಾಪಕ ಚರ್ಚೆಗಳು ನಡೆದಿದ್ದವು. ಆದರೆ, ಸದ್ಯ ಮಸ್ಕಿ ಕ್ಷೇತ್ರದ ಚುನಾವಣೆ ಉಸ್ತುವಾರಿ ವಹಿಸಿರುವ ಹಿನ್ನಲೆ ವಿಜಯೇಂದ್ರ ಅವರ ಸ್ಪರ್ಧೆ ಅನುಮಾನ. ಆದರೂ ಕೊನೆ ಕ್ಷಣದಲ್ಲಿನಿರ್ಣಯಗಳು ಬದಲಾವಣೆ ಆದರೂಆಶ್ಚರ್ಯ ಪಡಬೇಕಿಲ್ಲ. ಇನ್ನೂ ಸ್ಥಳೀಯರಿಗೆಟಿಕೆಟ್ ನೀಡಬೇಕೆಂಬ ಮಾತುಗಳು ಕೇಳಿಬರುತ್ತಿದ್ದು, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಪಂ ಸದಸ್ಯ ಗುಂಡು ರೆಡ್ಡಿ,ಮುಖಂಡರಾದ ಶರಣು ಸಲಗಾರ, ಸಂಜಯ ಪಟವಾರಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ, ಪ್ರಬಲ ವ್ಯಕ್ತಿಯನ್ನೇ
ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ವರಿಷ್ಠರು ಘೋಷಿಸಿರುವದರಿಂದ ಯಾರಿಗೆ ಮಣೆಹಾಕುತ್ತದೆ ಎಂಬ ಕುತೂಹಲ ಹೆಚ್ಚಿದೆ.ಇನ್ನೂ ಕೈ ವಶದಲ್ಲಿದ್ದ ಕ್ಷೇತ್ರವನ್ನುಉಳಿಸಿಕೊಳ್ಳಲು ಕಾಂಗ್ರೆಸ್ ಸಹ ಅಳೆದುತೂಗಿ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಿದೆ. ದಿ| ನಾರಾಯಣರಾವ್ ಅವರ ಪತ್ನಿ ಮಲ್ಲಮ್ಮಅಥವಾ ಮಾಜಿ ಸಿಎಂ ದಿ. ಧರಂಸಿಂಗ್ ಅವರ ಪುತ್ರರಾದ ಎಂಎಲ್‌ಸಿ ವಿಜಯಸಿಂಗ್ ಇವರಿಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಸಿಗುವುದು ಬಹುತೇಕ ಖಚಿತವಾಗಿದೆ. ಆದರೆ, ಈ ಬಗ್ಗೆ ಕೈ ಪಾಳಯದ ನಾಯಕರು ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ
-ಶಶಿಕಾಂತ ಬಂಬುಳಗೆ