Advertisement

ಭರವಸೆ ಈಡೇರಿಸದಿದ್ರೆ ಮತ್ತೆ ಹಕ್ಕೊತ್ತಾಯ  : ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

08:26 PM Apr 19, 2021 | Team Udayavani |

ಕೂಡಲಸಂಗಮ: ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಚಳವಳಿ ನಿಂತಿಲ್ಲ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೊಟ್ಟ ಭರವಸೆ ಈಡೇರಿಸದಿದ್ದರೆ ಅಕ್ಟೋಬರ್‌ 15 ರಂದು ಬೆಂಗಳೂರಿನಲ್ಲಿ ಮತ್ತೆ 20 ಲಕ್ಷ ಪಂಚಮಸಾಲಿಗಳನ್ನು ಸೇರಿಸಿ ಹಕ್ಕೊತ್ತಾಯ ಮಾಡಬೇಕಾಗುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಸಿದರು.

Advertisement

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ನಡೆದ ಶರಣು ಶರಣಾರ್ಥಿ ಸಮಾರೋಪ ಸಮಾರಂಭ ಹಾಗೂ ಸಂಕಲ್ಪ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಓರ್ವ ರಾಜಕಾರಣಿ ಪ್ರತಿಷ್ಠೆ, ಅಹಂಕಾರ, ಹಣದ ಶ್ರೀಮಂತಿಕೆಯಿಂದ ಶ್ರೀ ಪೀಠದ ಪ್ರತಿಷ್ಠೆ ಕೆಡಿಸುವ, ಸ್ವಾಭಿಮಾನ ಕೆಣಕುವ ಕೆಲಸ ಮಾಡಿದ. ಭಕ್ತರು ಆಡಂಬರ, ಹಣಕ್ಕೆ ಬೆಲೆ ಕೊಡದೆ ಆದರ್ಶ, ಪ್ರಾಮಾಣಿಕತೆಗೆ ಬೆಲೆ ಕೊಟ್ಟು ಪಾದಯಾತ್ರೆಗೆ ಸಹಕರಿಸಿದರು.

12 ವರ್ಷ ಮಠ ಕಟ್ಟದೇ ಸಮಾಜ ಕಟ್ಟಿದ್ದು ಸಾರ್ಥಕವಾಯಿತು ಎಂದರು. ಅಕ್ಟೋಬರ್‌ 15ರವರೆಗೆ 12 ಜಿಲ್ಲೆಯ 10 ಸಾವಿರ ಪಂಚಾಯಿತಿ ಮಟ್ಟದಲ್ಲಿ ಸಮಾಜ ಸಂಘಟಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದರು. ಹಣ, ಅ ಧಿಕಾರ ಬಲ ಹೊಂದಿದ ರಾಜಕೀಯ ಓರ್ವ ಮುಖಂಡ ಕೊರೊನಾ ನೆಪದಲ್ಲಿ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದ ಶರಣು ಶರಣಾರ್ಥಿ ಕಾರ್ಯಕ್ರಮ ತಡೆಯುವ ಕಾರ್ಯ ಮಾಡಿದರೂ ಜನರು ಯಶಸ್ವಿಯಾಗಿ ಮಾಡಿದರು. ಕೊರೊನಾ ಇಳಿಮುಖಗೊಂಡ ನಂತರ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಶ್ರೀಗಳ ಮನ ನೋಯಿಸಿದ ಮುರುಗೇಶ ನಿರಾಣಿ ಪೀಠದ ಶಾಪಕ್ಕೆ ಗುರಿಯಾಗುತ್ತಾರೆ. ಮಾತೆತ್ತಿದ್ದರೆ ಮಠಕ್ಕೆ ಜಾಗ ಕೊಡಿಸಿದ್ದೇನೆಂದು ಹೇಳುವ ನಿರಾಣಿಗೆ ಕೆಲವೇ ದಿನಗಳಲ್ಲಿ ಭಕ್ತರಿಂದ ಹಣ ಸಂಗ್ರಹಿಸಿ ಮಠದ ಜಾಗಕ್ಕೆ ನೀಡಿದ ಹಣವನ್ನು ಅವನ ಮನೆಗೆ ಕೊಟ್ಟು ಬರುವ ಕೆಲಸ ಮಾಡುತ್ತೇವೆ. ಆರಂಭದಿಂದಲೂ ಸಮಾಜದ ಹೆಸರಿನಲ್ಲಿ ಅ ಧಿಕಾರ, ಸಚಿವ ಸ್ಥಾನ ಪಡೆದ ನಿರಾಣಿ ಕುಟುಂಬದವರು ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹನಮಂತ ನಿರಾಣಿ ಸಮಾಜದ ಕಾರ್ಯಕ್ರಮಕ್ಕೆ ಹೋಗದಂತೆ ತಡೆಯುವ ಕೆಲಸ ಮಾಡಿದ್ದಾನೆ. ವಿಜಯ ಮಲ್ಯಗೆ ಬಂದ ಸ್ಥಿತಿ ನಿರಾಣಿಗೂ ಬರುತ್ತದೆ. ಸಕ್ಕರೆ ಕಾರ್ಖಾನೆಗೆ ಕಬ್ಬು ನೀಡಿದ ರೈತರಿಗೆ ಹಣ ಪಾವತಿಸದೇ ರೈತರಿಗೆ ತೊಂದರೆ ಕೊಡುವ ಕೆಲಸ ಮಾಡುತ್ತಿದ್ದಾನೆಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ, ಮುಖಂಡರಾದ ದೇವೆಂದ್ರಪ್ಪ ಬಳೂಟಗಿ, ಎಂ.ಎಸ್‌.ಮುದ್ದನಗೌಡ, ಸಂಗಪ್ಪಣ್ಣ ಪಿರೋಜ, ದಾವಣಗೆರೆಯ ಬಿ.ಜಿ.ಅಜಯಕುಮಾರ, ಗದಗ ಚನಬಸಪ್ಪ ಕಂಠಿ, ಬಿ.ಎಸ್‌.ಪಾಟೀಲ, ಅಮರೇಶ ನಾಗೂರ ಮುಂತಾದವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next