Advertisement

ಶ್ರದ್ಧಾ ಭಕ್ತಿಯಿಂದ ಬಸವ ಜಯಂತಿ ಆಚರಣೆ

03:16 PM Apr 30, 2017 | Team Udayavani |

ಧಾರವಾಡ: ನಗರದ ಸಂಘ-ಸಂಸ್ಥೆಗಳು, ಸರಕಾರಿ ಕಚೇರಿಗಳು ಸೇರಿದಂತೆ ವಿವಿಧೆಡೆ ಬಸವ ಜಯಂತಿಯನ್ನು ಶನಿವಾರ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಜಿಲ್ಲಾಡಳಿತದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಸಚಿವ ವಿನಯ ಕುಲಕರ್ಣಿ, ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.

Advertisement

ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರ ತಂದ ಶ್ರೀ ಬಸವೇಶ್ವರರ ಭಾವಚಿತ್ರವನ್ನು ಬಿಡುಗಡೆ ಮಾಡಿದರು. ಜಿಲ್ಲಾಧಿಕಾರಿ ಡಾ|ಎಸ್‌.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಸ್ನೇಹಲ್‌ ಆರ್‌., ಸಮಾಜದ ಮುಖಂಡರಾದ ಶಂಭು ಹೆಗಡಾಳ, ಶಿವಶಂಕರ ಕಲದಶೆಟ್ಟರ, ಡಿ.ಡಿ.ಪಾಟೀಲ, ರಾಜು ಮರಳಪ್ಪನವರ, ಪಿ.ಎ.ಮುದಿಗೌಡರ, ನಾಗರಾಜ ಪಟ್ಟಣಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ.ರಂಗಣ್ಣವರ ಇದ್ದರು,. 

ಮೆರವಣಿಗೆ: ಬಸವೇಶ್ವರ ಜಯಂತ್ಯುತ್ಸವ ಅಂಗವಾಗಿ ನಗರದ ಜುಬಿಲಿ ಸರ್ಕಲ್‌ನಲ್ಲಿರುವ ಶ್ರೀ ಬಸವೇಶ್ವರರ ಪುತ್ಥಳಿಗೆ ಸಚಿವ ವಿನಯ ಕುಲಕರ್ಣಿ ಮಾಲಾರ್ಪಣೆ ಮಾಡಿದರು. ಈ ವೇಳೆ ಜಿಲ್ಲಾಧಿಕಾರಿ ಡಾ|ಎಸ್‌.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಸ್ನೇಹಲ್‌ ಆರ್‌. ಇದ್ದರು. ಜಯಂತ್ಯುತ್ಸವ ಅಂಗವಾಗಿ ಉಳವಿ ಚೆನ್ನಬಸವೇಶ್ವರ ದೇವಸ್ಥಾನದಲ್ಲಿ ಸಚಿವ ವಿನಯ ಕುಲಕರ್ಣಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಮಾಡಿ ಗೌರವ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು.

ಕರಡಿಮಜಲು, ಮಹಿಳಾ ಡೊಳ್ಳು ಕುಣಿತ, ಗೊಂಬೆ ಕುಣಿತ, ದಾಲಪಟ್ಟಾ ಕಲಾತಂಡ, ಜೋಡೆತ್ತು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಜಾಥಾದಲ್ಲಿ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಈರಣ್ಣ ಮತ್ತಿಕಟ್ಟಿ, ಜಿಲ್ಲಾಧಿಕಾರಿ ಡಾ|ಎಸ್‌.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಸ್ನೇಹಲ್‌ ಆರ್‌. ಶಿವಣ್ಣ ಬೆಲ್ಲದ, ದಾನಪ್ಪ ಕಬ್ಬೇರ,

ವಸಂತ ಅರ್ಕಸಾಲಿ, ಶಂಕರ ಕುಂಬಿ, ಸಮಾಜ ಮುಖಂಡರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್‌.ಕೆ.ರಂಗಣ್ಣವರ ಭಾಗವಹಿಸಿದ್ದರು. ಮೆರವಣಿಗೆ ಯು.ಬಿ.ಹಿಲ್‌ದಿಂದ ಹೊಸ ಯಲ್ಲಾಪೂರ, ಕಾಮನಕಟ್ಟಿ, ಕೆಸಿಸಿ. ಬ್ಯಾಂಕ್‌, ಜುಬ್ಲಿ ಸರ್ಕಲ್‌ ಮೂಲಕ ಉಳವಿ ಚನ್ನಬಸವೇಶ್ವರ ದೇವಸ್ಥಾನಕ್ಕೆ ಬಂದು ಸಮಾಪ್ತಗೊಂಡಿತು. 

Advertisement

ಕವಿಸಂನಲ್ಲಿ ಬಸವ ಜಯಂತಿ: ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ವಿಶ್ವಗುರು ಬಸವೇಶ್ವರರ ಜಯಂತಿ ಆಚರಿಸಲಾಯಿತು. ಸಮಾಜಕ್ಕೆ ಅವರು ನೀಡಿದ ಕೊಡುಗೆ ಹಾಗೂ ಅವರ ಅಮೂಲ್ಯ ಸಂದೇಶಗಳನ್ನು ಸ್ಮರಿಸಲಾಯಿತು. ಗಾಯಕ ಶ್ರೀಕಾಂತ ಬಾಕಳೆ ವಚನ ಹೇಳಿದರು.

ಸಂಘದ ಉಪಾಧ್ಯಕ್ಷ ಶಿವಣ್ಣ ಬೆಲ್ಲದ, ಕಾರ್ಯಾಧ್ಯಕ್ಷ ಡಾ| ಡಿ.ಎಂ.ಹಿರೇಮಠ, ಶಂಕರ ಹಲಗತ್ತಿ, ಶಿವಾನಂದ ಭಾವಿಕಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವಪ್ರಭು ಹೊಸಕೇರಿ,  ಮೋಹನ ನಾಗಮ್ಮನವರ, ಗುರು ಹಿರೇಮಠ, ಸತೀಶ ತುರಮರಿ, ಸದಸ್ಯರಾದ ಸದಾನಂದ ಶಿವಳ್ಳಿ, ವೀರಣ್ಣ ಒಡ್ಡೀನ, ಬಿ.ಕೆ. ಹೊಂಗಲ,

ಎಂ.ಆರ್‌. ಭಾವಾಖಾನನವರ, ಸಂಘದ ಕಚೇರಿ ಅಧೀಕ್ಷಕ ಶಿವಪುತ್ರ ರಾಚಯ್ಯನವರ, ನಿಂ.ಶಿ. ಕಾಶಪ್ಪನವರ, ಎಸ್‌.ಆಯ್‌. ಭಾವಿಕಟ್ಟಿ, ರಾಜಶೇಖರ ಪಟ್ಟಣಶೆಟ್ಟಿ, ಮಹೇಶ ಗುರುಪುತ್ರನವರ, ಆನಂದೀಶ್ವರ ಗೋಣೆಪ್ಪನವರ, ಶಿವರಾಜ ಇಸರಣ್ಣವರ ಸಂಘದ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next